ನವದೆಹಲಿ,ಡಿ. 13: ಫ್ರೆಂಡ್ಸ್ ಅಂದಾಗ ಸಾಮಾನ್ಯವಾದ ಉಡುಗೊರೆಗಳನ್ನು ಕೊಡಿಸುವುದು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬರು ತನ್ನ ಸ್ನೇಹಿತರಿಗೆ ತಿಳಿಯದ ರೀತಿಯಲ್ಲಿ ಅಚ್ಚರಿಯ ಉಡುಗೊರೆಯೊಂದನ್ನು ನೀಡಿದ್ದಾರೆ. ದೆಹಲಿಯ ಮಾಲ್‌ನಲ್ಲಿ ಒಬ್ಬ ವ್ಯಕ್ತಿ ತನ್ನ ಸ್ನೇಹಿತರಿಗೆ ದುಬಾರಿ ಐಫೋನ್‌ಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಶಾಕ್ಗೊಳಿಸಿದ್ದಾನೆ. ಸದ್ಯ ಈ ವಿಡಿಯೊ ಜನರ ಗಮನ ಸೆಳೆದಿದೆ. ತನ್ನ ಹತ್ತು ಮಂದಿ ಆಪ್ತ ಸ್ನೇಹಿತರಿಗೆ ಸುಮಾರು ರೂ.15 ಲಕ್ಷ ಖರ್ಚು ಮಾಡಿ 10 ಐಫೋನ್‌ಗಳನ್ನು ಖರೀದಿ ಮಾಡಿದ್ದು ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗಿದೆ.
ದೆಹಲಿಯ ದೊಡ್ಡ ಮಾಲ್ ಒಂದಕ್ಕೆ ಮೊಬೈಲ್ ಶೋರೂಂಗೆ ಯುವಕ ಸ್ನೇಹಿತರೊಂದಿಗೆ ತೆರಳುತ್ತಾನೆ. ಆತ ಅಲ್ಲಿ ಪ್ರತಿಯೊಬ್ಬರಿಗೂ ಇತ್ತೀಚಿನ ಮಾಡೆಲ್ ನ ಐಫೋನ್ ನೀಡುವುದಾಗಿ ಘೋಷಣೆ ಮಾಡುತ್ತಾನೆ. ಆರಂಭದಲ್ಲಿ ಸ್ನೇಹಿತರೆಲ್ಲರೂ ಇದು ತಮಾಷೆ ಇರಬಹುದು ಎಂದು ನಗುತ್ತಿದ್ದರು. ಆದರೆ ನಿಜವಾಗಿಯೂ ದುಬಾರಿ ಉಡುಗೊರೆಯೊಂದಿಗೆ ಅಚ್ಚರಿಗೊಳಿಸಿದ್ದಾನೆ.
ವಿಡಿಯೋ ನೋಡಿ:
ವೀಡಿಯೊದಲ್ಲಿ ಮೊಬೈಲ್ ಫೋನ್ ಅಂಗಡಿಯೊಳಗೆ ಸ್ನೇಹಿತರ ಗುಂಪೊಂದು ನಿಂತಿರುವುದನ್ನು ತೋರಿಸಲಾಗಿದೆ.ಆತ ತನ್ನ ಪ್ರತಿಯೊಬ್ಬ ಸ್ನೇಹಿತರಿಗೆ ಇತ್ತೀಚಿನ iPhone 17 Pro Max ಅನ್ನು ಉಡುಗೊರೆಯಾಗಿ ನೀಡುತ್ತಿರುವುದು ಕಂಡುಬರುತ್ತದೆ. ಬಿಲ್ ಬಂದಾಗ ಅದು 14.7 ಲಕ್ಷ ರೂ.ಗಳನ್ನು ತೋರಿಸುತ್ತದೆ. ಸ್ನೇಹಿತರು ಅಲ್ಲೇ ದಿಗ್ಭ್ರಮೆಗೊಳ್ಳುತ್ತಾರೆ. ಅವರಲ್ಲಿ ಒಬ್ಬನು ತಲೆ ಹಿಡಿದುಕೊಂಡು ಕುಳಿತು, "ಇದು ತಮಾಷೆಯೇ?" ಎಂದು ಕೇಳುತ್ತಾನೆ. ನಂತರ ಆ ವ್ಯಕ್ತಿ ಬಿಲ್ ಪಾವತಿಸುತ್ತಾನೆ ಮತ್ತು ಐಫೋನ್‌ಗಳನ್ನು ಹಂಚಲು ಪ್ರಾರಂಭಿಸುತ್ತಾನೆ, ಅಂಗಡಿ ಸಿಬ್ಬಂದಿ ಸೇರಿದಂತೆ ಎಲ್ಲರೂ ಶಾಕ್ ಆಗುತ್ತಾರೆ.
Viral Video: ಪ್ರವಾಹದಿಂದ ಮುಳುಗಿದ ಯುಎಇ; ಮರುಭೂಮಿ ರಾಷ್ಟ್ರದಲ್ಲಿ ಇಷ್ಟೊಂದು ಭಾರಿ ಮಳೆ ಏಕೆ?
ಈ ಫೋನ್, ಒಂದು ಸಾಧನದ ಬೆಲೆ ಸುಮಾರು 1.5 ಲಕ್ಷ ರೂ.ಗಳು. ಒಟ್ಟಾರೆಯಾಗಿ, ಅವನು ಹತ್ತು ಸ್ನೇಹಿತರಿಗೆ ಫೋನ್‌ಗಳನ್ನು ಖರೀದಿ ಮಾಡುತ್ತಾನೆ. ಒಂದೇ ಬಾರಿಗೆ ಸುಮಾರು 15 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದಾನೆ..ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಭಾರಿ ಸಂಚಲನ ಮೂಡಿಸಿದೆ. ಇದುವರೆಗೆ 63,000 ವೀಕ್ಷಣೆಗಳನ್ನು ಸ್ವೀಕರಿಸಿದೆ. ಅನೇಕ ಬಳಕೆದಾರರು ತಮಾಷೆ ಮತ್ತು ಭಾವನಾತ್ಮಕ ಕಾಮೆಂಟ್ ಮಾಡಿದ್ದಾರೆ.
ನೆಟ್ಟಿಗರೊಬ್ಬರು ನಮಗೂ ಇಂತಹ ಒಬ್ಬ ಫ್ರೆಂಡ್ ಇರಬಾರದಿತ್ತೇ?" ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ನನ್ನ ಸ್ನೇಹಿತರು ಬಿಲ್‌ಗಳನ್ನು ನನ್ನ ಬಳಿಯೇ ಪಾವತಿಸಲು ಕೇಳುತ್ತಾರೆ. ನಾನು ನಿನ್ನೆ ಅಷ್ಟೇ ಪಾವತಿಸಿದ್ದೇನೆ ಎಂದು ತಮಾಷೆ ಮಾಡಿದ್ದಾರೆ.