ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚಲಿಸುವ ರೈಲಿನಡಿ ಹಾರಲು ಹೋದ ಯುವಕ: ಪ್ರಾಣದ ಹಂಗು ತೊರೆದು ಕಾಪಾಡಿದ ಮಹಿಳಾ ಕಾನ್‌ಸ್ಟೆಬಲ್!

Viral Video: ಯುವಕನೊಬ್ಬ ಲೋಕಲ್ ರೈಲಿನ ಅಡಿಗೆ ನುಗ್ಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಸಮಯ ಪ್ರಜ್ಞೆ ಮೆರೆದಿದ್ದಾರೆ. ಈ ಘಟನೆ ರಾತ್ರಿ 10:54 ರ ಸುಮಾರಿಗೆ ನಡೆದಿದ್ದು ಕಾರ್ಯ‌ಚರಣೆ ದೃಶ್ಯ ಭಾರೀ ವೈರಲ್ ಆಗಿದೆ. ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಸಾಹಸಕ್ಕೆ ನೆಟ್ಟಿಗರು ಫಿದಾ ಆಗಿದ್ದು ಶಹಬಾಸ್ ಎನ್ನುತ್ತಿದ್ದಾರೆ.

ಚಲಿಸುವ ರೈಲಿನ ಅಡಿಗೆ ನುಗ್ಗಿದ ಯುವಕ- ಸಾಹಸ ಮೆರೆದ ಕಾನ್‌ಸ್ಟೆಬಲ್

ಮುಂಬೈ,ಆ.2: ದಾದರ್ ರೈಲ್ವೆ ನಿಲ್ದಾಣದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಯುವಕನೊಬ್ಬ ಲೋಕಲ್ ರೈಲಿನ ಅಡಿಗೆ ನುಗ್ಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಸಮಯ ಪ್ರಜ್ಞೆ ಮೆರೆದಿದ್ದಾರೆ. ಈ ಘಟನೆ ರಾತ್ರಿ 10:54 ರ ಸುಮಾರಿಗೆ ನಡೆದಿದ್ದು ಕಾರ್ಯ‌ ಚರಣೆ ದೃಶ್ಯ ಭಾರೀ ವೈರಲ್ (Viral News) ಆಗಿದೆ. ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಸಾಹಸಕ್ಕೆ ನೆಟ್ಟಿಗರು ಫಿದಾ ಆಗಿದ್ದು ಶಹಬಾಸ್ ಎನ್ನುತ್ತಿದ್ದಾರೆ.

ವರದಿಗಳ ಪ್ರಕಾರ, 28 ವರ್ಷದ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ರಾತ್ರಿ 10:54 ರ ಸುಮಾರಿಗೆ ಪ್ಲಾಟ್‌ಫಾರ್ಮ್‌ನಲ್ಲಿ ಸ್ಥಳೀಯ ರೈಲು ನಿಲ್ದಾಣದಿಂದ ಹೊರಡಲು ಪ್ರಾರಂಭಿಸಿದಾಗ ಈ ಘಟನೆ ಸಂಭವಿಸಿದೆ. ಈ ಅಪಾಯಕಾರಿ ಪರಿಸ್ಥಿತಿಯನ್ನು ತಕ್ಷಣ ಗುರುತಿಸಿದ ಪೊಲೀಸ್ ಕಾನ್‌ಸ್ಟೆಬಲ್ ಎ. ನರ್ವಾಡೆ ಆ ವ್ಯಕ್ತಿ ಇದ್ದಲ್ಲಿಗೆ ಆಗಮಿಸಿ ಅವನ ಕಾಲುಗಳನ್ನು ಹಿಡಿದು ಸೆಕೆಂಡುಗಳಲ್ಲಿ ಹಳಿಗಳಿಂದ ದೂರ ಎಳೆದರು.

ವಿಡಿಯೋ ನೋಡಿ:



ವೈರಲ್ ವಿಡಿಯೊದಲ್ಲಿ ಮುಂಬೈನ ದಾದರ್ ರೈಲ್ವೆ ನಿಲ್ದಾಣದಲ್ಲಿ ಒಬ್ಬ ಯುವಕ ಸ್ಥಳೀಯ ರೈಲಿನ ಕೆಳಗೆ ಇಳಿಯಲು ಪ್ರಯತ್ನಿ ಸುತ್ತಿರುವುದನ್ನು ಕಾಣಬಹುದು. ಪ್ಲಾಟ್‌ಫಾರ್ಮ್‌ನಲ್ಲಿದ್ದ ಆತ ಹಳಿಗಳತ್ತ ನೆಗೆಯಲು ಮುಂದಾಗಿದ್ದಾನೆ. ಈ ಪರಿಸ್ಥಿತಿಯನ್ನು ಅರಿತ ಕಾನ್‌ಸ್ಟೆಬಲ್ ಕೂಡಲೇ ಸಮಯ ಪ್ರಜ್ಞೆ ಮೆರೆದಿದ್ದಾರೆ. ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಎ. ನರವಾಡೆ ಹಿಂಜರಿಕೆ ಯಿಲ್ಲದೆ ಧಾವಿಸಿ ಬಂದು ಸಕಾಲದಲ್ಲಿ ಸುರಕ್ಷಿತ ಸ್ಥಳಕ್ಕೆ ಎಳೆದುಕೊಂಡು ಹೋಗಿ ಅಪಘಾತವನ್ನು ತಪ್ಪಿಸಿದರು.

Viral Video: ಕೆಲಸದ ಸಮಯ ಮುಗಿದ್ರೂ ಮನೆಗೆ ಹೋಗಂಗಿಲ್ಲ; ಸಿಬ್ಬಂದಿಯನ್ನು ಬ್ಯಾಂಕ್‌ನಲ್ಲೇ ಲಾಕ್ ಮಾಡಿದ ಮ್ಯಾನೇಜರ್!

ರೈಲು ಬರುವ ಕೆಲವೇ ಸೆಕೆಂಡುಗಳ ಅಂತರದಲ್ಲಿ ಯುವಕನ ಪ್ರಾಣ ಉಳಿದಿದೆ. ​ಕೈಲಾಶ್ ವಾಶಿ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆ ವ್ಯಕ್ತಿ ಯಾವುದೇ ಗಾಯಗಳಿಲ್ಲದೆ ಪರಾಗಿದ್ದು ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಯುವಕನ ಕೌನ್ಸೆಲಿಂಗ್ ನೀಡಲಾಗುವುದು ಮತ್ತು ಅವನನ್ನು ಚೇತರಿಸಿಕೊಳ್ಳಲು ಪುನರ್ವಸತಿ ಸೌಲಭ್ಯಕ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ

ವಿಡಿಯೋ ವೈರಲ್ ಆಗುತ್ತಿದ್ದಂತೆ ಮಹಿಳಾ ಕಾನ್‌ಸ್ಟೆಬಲ್ ಧೈರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. "ಜೀವ ಉಳಿಸಿದ ಅಧಕಾರಿ ನಿಜಕ್ಕೂ ಗ್ರೇಟ್" ಎಂದು ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬರು ಇವರೇ ದೇಶದ ನಿಜವಾದ ಹೀರೋ ಎಂದು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.