ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಉನ್ನತ ವ್ಯಾಸಂಗ ಇಲ್ಲದೆ ಡಿಪ್ಲೊಮಾ ಓದಿ 5,000 ಸಂಬಳದಿಂದ 70 ಲಕ್ಷದ ಪ್ಯಾಕೇಜ್‌ಗಳಿಸಿದ ಬೆಂಗಳೂರು ಯುವಕ! ಸಾಧ್ಯವಾಗಿದ್ದು ಹೇಗೆ?

Viral News: ಬೆಂಗಳೂರಿನ ಯುವಕನೊಬ್ಬ ಉನ್ನತ ಪದವಿ ಇಲ್ಲದಿದ್ದರೂ ಯಶಸ್ಸಿನ ಶಿಖರ ಏರಬಹುದು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಕಾಮರ್ಸ್ ಸ್ಟ್ರೀಮ್‌ನಲ್ಲಿ ದ್ವಿತೀಯ ಪಿಯುಸಿ ಓದು ಮುಗಿಸಿದ್ದ ಇವರು ಕೇವಲ 3 ವರ್ಷಗಳ ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾ ಪೂರ್ಣ ಗೊಳಿಸದ್ದರು. ಬಿಇ ಅಥವಾ ಬಿಸಿಎ ನಂತಹ ಯಾವುದೇ ಉನ್ನತ ಶಿಕ್ಷಣ ಮಾಡದಿದ್ದರೂ ಇಂದು ವಾರ್ಷಿಕ 45 ಲಕ್ಷ ಪ್ಯಾಕೇಜ್ ಪಡೆಯುತ್ತಿದ್ದಾರೆ. ಸದ್ಯ ಇವರ ಈ ಕೆಲಸದ ಹಾರ್ಡ್ ವರ್ಕಿಂಗ್ ಕೌಶಲ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಸಂಗ್ರಹ ಚಿತ್ರ

ಬೆಂಗಳೂರು,ಜೂ.21: ಇಂದು ಯಾವುದೇ ಉನ್ನತ ಮಟ್ಟದ ಉದ್ಯೋಗಗಳಿಸಲು ಶಿಕ್ಷಣ ಮಾತ್ರ ಸಾಲದು, ಅದಕ್ಕೆ ಬೇಕಾದ ಕೌಶಲ್ಯ ಇದ್ದರೆ ಎಲ್ಲೂ ಕೂಡ ನಾವು ಬದುಕು ಸಾಗಿಸಬಹುದು. ಇದೀಗ ಬೆಂಗಳೂರಿನ ಯುವಕನೊಬ್ಬ ಉನ್ನತ ಪದವಿ ಇಲ್ಲದಿದ್ದರೂ ಯಶಸ್ಸಿನ ಶಿಖರ ಏರಬಹುದು ಅನ್ನೋದನ್ನು ತೋರಿಸಿ ಕೊಟ್ಟಿದ್ದಾರೆ. ಕಾಮರ್ಸ್ ಸ್ಟ್ರೀಮ್‌ನಲ್ಲಿ ದ್ವಿತೀಯ ಪಿಯುಸಿ ಓದು ಮುಗಿಸಿದ್ದ ಇವರು ಕೇವಲ 3 ವರ್ಷಗಳ ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾ ಪೂರ್ಣಗೊಳಿಸದ್ದರು. ಬಿಇ ಅಥವಾ ಬಿಸಿಎ ನಂತಹ ಯಾವುದೇ ಉನ್ನತ ಶಿಕ್ಷಣ ಮಾಡದಿದ್ದರೂ ಇಂದು ವಾರ್ಷಿಕ 45 ಲಕ್ಷ ಪ್ಯಾಕೇಜ್ ಪಡೆಯುತ್ತಿದ್ದಾರೆ. ಸದ್ಯ ಇವರ ಈ ಕೆಲಸದ ಹಾರ್ಡ್ ವರ್ಕಿಂಗ್ ಕೌಶಲ್ಯಕ್ಕೆ ನೆಟ್ಟಿಗರು (Viral News) ಫಿದಾ ಆಗಿದ್ದಾರೆ.

ರೆಡ್ಡಿಟ್‌ನಲ್ಲಿ ಯುವಕ ಈ ವಿಚಾರ ಶೇರ್ ಮಾಡಿಕೊಂಡಿದ್ದು 12 ವರ್ಷಗಳ ಪ್ರಯಾಣವು ಕೌಶಲ್ಯಯುತ ವೃತ್ತಿಪರರೊಂದಿಗೆ, ವಿಶೇಷವಾಗಿ ಪದವಿ ಇಲ್ಲದೆ ಕೆಲಸ ಮಾಡಿರುವ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ. ಇವರು ಕೇವಲ ಐದು ಸಾವಿರ ವೇತನಕ್ಕೆ ವೃತ್ತಿ ಜೀವನ ಆರಂಭ ಮಾಡಿದ್ದರು. ಇಂದು ಅದರ ಡಬಲ್ ಪಟ್ಟು 45 ಲಕ್ಷ ಸಂಬಳವನ್ನು ಪಡೆಯುತ್ತಿದ್ದಾರೆ. ಇವರ ಈ ಸ್ಪೂರ್ತಿ ದಾಯಕ ಶ್ರಮದ ಬಗ್ಗೆ ಬಹಳಷ್ಟು ಜನರು ಮೆಚ್ಚುಗೆ ಸೂಚಿಸಿದ್ದಾರೆ.

ಈ ಯುವಕ 2013 ರಲ್ಲಿ ಮೂರು ವರ್ಷಗಳ ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾವನ್ನು ಪಡೆಯುವ ಮೊದಲು ವಾಣಿಜ್ಯ ವಿಭಾಗದಲ್ಲಿ 12 ನೇ ತರಗತಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಬಹಿರಂಗ ಪಡಿಸಿದರು. ಬಿಇ ಅಥವಾ ಬಿಸಿಎ ನಂತಹ ಯಾವುದೇ ಉನ್ನತ ಬ್ಯಾಚುಲರ್ ಪದವಿ ಇಲ್ಲದಿದ್ದರೂ, 2013ರಲ್ಲಿ ಜೂನಿಯರ್ ವೆಬ್ ಡೆವಲಪರ್ ಆಗಿ ವೃತ್ತಿ ಆರಂಭಿಸಿದರು.

Viral Video: ಶಿಕ್ಷಕಿಗೆ ಬೀಸಣಿಕೆಯಿಂದ ಗಾಳಿ ಹಾಕಿದ ವಿದ್ಯಾರ್ಥಿ: ಸರ್ಕಾರಿ ಶಾಲೆಯ ಶಿಕ್ಷಣ ಗುಣಮಟ್ಟ ಬಗ್ಗೆ ಪ್ರಶ್ನೆ ಮಾಡಿದ ನೆಟ್ಟಿಗರು!

ಆದಾಗ್ಯೂ, ಅವರು ತಮ್ಮ ವೃತ್ತಿಜೀವನವನ್ನು ಆರಂಭ ಮಾಡಿದಾಗ ತಿಂಗಳಿಗೆ 5,000 ಸಂಬಳ ಪಡೆದಿದ್ದರು. 2015 ರಲ್ಲಿ ಪೂರ್ಣ-ಸ್ಟಾಕ್ ಡೆವಲಪರ್ ಆಗಿ ಅವರ ಗಳಿಕೆಯನ್ನು ತಿಂಗಳಿಗೆ 15,000 ಕ್ಕೆ ಹೆಚ್ಚಿಸಿದೆ ಎಂದು ಅವರು ಹಂಚಿಕೊಂಡರು. 2017 ರ ಹೊತ್ತಿಗೆ, ಅವರು 50,000 ಮಾಸಿಕ ಸಂಬಳದೊಂದಿಗೆ ಹಿರಿಯ ಡೆವಲಪರ್ ಆದರು. ಒಂದು ವರ್ಷದ ನಂತರ, ಅವರು ಹಿರಿಯ ಸಾಫ್ಟ್‌ವೇರ್ ಎಂಜಿನಿಯರ್ ಹುದ್ದೆಗೆ ತೆರಳಿದರು, ಅಲ್ಲಿ ಅವರ ವೇತನ ಕ್ರಮೇಣ ತಿಂಗಳಿಗೆ 87,000 ಕ್ಕೆ ಏರಿತು.

2021 ರಲ್ಲೊ ಟೆಕ್ನಿಕಲ್ ಲೀಡ್ ಆಗಿ 28 ಲಕ್ಷ ವಾರ್ಷಿಕ ಪ್ಯಾಕೇಜ್‌ಗೆ ಪ್ರಮೋಷನ್ ಹೊಂದಿ ಇದೇ ಅವಧಿಯಲ್ಲಿ ಅವರು ಮ್ಯೂಚುವಲ್ ಫಂಡ್ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಆರಂಭಿಸಿದರು. ನವೆಂಬರ್ 2025ರಲ್ಲಿ ಸೀನಿಯರ್ ಟೆಕ್ನಿಕಲ್ ಲೀಡ್ ಆಗಿ ವಾರ್ಷಿಕ 45 ಲಕ್ಷದ ಬಂಪರ್ ಆಫರ್‌ ಪಡೆಯುತ್ತಿದ್ದಾರೆ. ಆದರೆ ಡಿಪ್ಲೊಮಾ ಇಟ್ಟುಕೊಂಡು ಸಣ್ಣ ಕಂಪನಿಗಳಲ್ಲೇ ಉಳಿದುಕೊಂಡಿದ್ದರಿಂದ ಆರಂಭಿಕ ವೃತ್ತಿಜೀವನದಲ್ಲಿ ಬೆಳವಣಿಗೆ ಸಾಧ್ಯವಾಗಲಿಲ್ಲ ಎಂದು ಅವರು ಬೇಸರ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ, ಕೇವಲ ಪದವಿ ಹೊಂದಿರಬೇಕು ಎಂಬ ಕಾರಣಕ್ಕಾಗಿ ಇತ್ತೀಚೆಗಷ್ಟೇ ಬಿಸಿಎ ಕೋರ್ಸ್‌ಗೆ ಸೇರಿದ್ದಾರೆ ಎಂದು ಹೇಳಿಕೊಂಡಿದ್ದಾರೆ.