ನವದೆಹಲಿ, ಮೇ 20: ಕಾರ್ಪೊರೇಟ್ ಕೆಲಸದ ಒತ್ತಡ, ಟಾರ್ಗೆಟ್ ಹೀಗೆ ನಾನಾ ಕಾರಣದಿಂದ ಕೆಲಸ ತೊರೆದವರು ಅನೇಕ ಮಂದಿ ಇದ್ದಾರೆ. ಕೈತುಂಬಾ ಸಂಬಳ ಬಂದರೂ ಕೆಲವರು ಮಾನಸಿಕ ನೆಮ್ಮದಿಗಾಗಿ ಕೆಲಸಕ್ಕೆ ಗುಡ್ ಬೈ ಹೇಳುವವರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ 25 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದ 29 ವರ್ಷದ ಟೆಕ್ಕಿಯೊಬ್ಬರು ಕೆಲಸಕ್ಕೆ ರಿಸೈನ್ ಮಾಡಿದ ಘಟನೆಯೊಂದು ನಡೆದಿದೆ. 29 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ನಿರಂತರ ಕೆಲಸದ ಒತ್ತಡಕ್ಕೆ ಮಣಿದು 25 ಲಕ್ಷ ರೂ ಸಂಬಳದ ಕೆಲಸವನ್ನು ತ್ಯಜಿಸುವ ಮೂಲಕ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.
ಕಾರ್ಪೊರೇಟ್ ಜಗತ್ತಿನ ತೀವ್ರ ಒತ್ತಡಕ್ಕೆ ಯುವ ಉದ್ಯೋಗಿ ಯೊಬ್ಬರು ಕೈತುಂಬಾ ಬರುತ್ತಿದ್ದ ಸಂಬಳದ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. "ನನ್ನ 25 ಲಕ್ಷ ಸಂಬಳದ ಸಾಫ್ಟ್‌ವೇರ್ ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ, ನಾನು ನಿಜ ವಾಗಿಯೂ ಇನ್ನು ಮುಂದೆ ಕೆಲಸ ಮಾಡಲು ಬಯಸುವುದಿಲ್ಲ" ಎಂಬ ಶೀರ್ಷಿಕೆಯಡಿಯಲ್ಲಿ ಇವರು ಪೋಸ್ಟ್ ಶೇರ್ ಮಾಡಿದ್ದಾರೆ. ಪೋಸ್ಟ್‌ನಲ್ಲಿ ಕೆಲಸದ ಒತ್ತಡ, ಕೆಲಸಕ್ಕೆ ನಿಗದಿ ಪಡಿಸಿದ ಸಮಯದ ಬಗ್ಗೆ ಮಾತನಾಡಿದ್ದಾರೆ.
ಉದ್ಯಮದಲ್ಲಿ ಸುಮಾರು ಆರು ವರ್ಷಗಳ ಅನುಭವ ಹೊಂದಿರುವ ಸಾಫ್ಟ್‌ವೇರ್ ಎಂಜಿನಿಯರ್, ತಮ್ಮ ಕಾಲೇಜು ದಿನಗಳಿಂದಲೂ ಅವರು ಕೆಲಸ ಕಾರ್ಯದಲ್ಲಿ ಆಸಕ್ತಿ ಹೊಂದಿದ್ದರು. ಅವರು ಪೂರ್ಣ ಸಮಯದ ಕೆಲಸದ ಜೊತೆಗೆ ತಮ್ಮಗಳಿಕೆ ಮತ್ತು ಅವಕಾಶಗಳನ್ನು ಹೆಚ್ಚಿಸಲು ನಿರಂತರವಾಗಿ ಹೆಚ್ಚುವರಿ ಕೆಲಸವನ್ನು ಕೈಗೊಂಡಿದ್ದರು. ನನಗೆ ಇನ್ನು ಮುಂದೆ ಈ ಕಾರ್ಪೊರೇಟ್ ಜಂಜಾಟದ ಭಾಗವಾಗಲು ಇಷ್ಟವಿಲ್ಲ ಎಂದು ಈ ನಿರ್ಧಾರ ಕೈಗೊಂಡಿದ್ದಾರೆ.
Viral Video: ಏರ್‌ಪೋರ್ಟ್ ರೋಡ್‌ನಲ್ಲಿ ಮಚ್ಚು ಹಿಡಿದು ವಿಲೀಂಗ್; ಯುವಕರ ಹುಚ್ಚಾಟ ಕ್ಯಾಮರಾದಲ್ಲಿ ಸೆರೆ
ಪೂರ್ಣಾವಧಿ ಸಾಫ್ಟ್‌ವೇರ್ ಕೆಲಸದ ಜೊತೆ ಜೊತೆಗೆ ಹೆಚ್ಚಿನ ಹಣ ಸಂಪಾದಿಸಲು ವಿದ್ಯಾರ್ಥಿಗಳಿಗೆ ಪಾಠ ಮಾಡುವುದು, ಕ್ಲೈಂಟ್ ಗಳಿಗಾಗಿ ವೆಬ್‌ಸೈಟ್‌ಗಳನ್ನು ರಚಿಸಿದ್ದರು. ಆದರೆ, ಈಗ ಮಾನಸಿಕ ದಣಿವಿನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಯಾವುದೇ ವಿರಾಮವಿಲ್ಲದೆ ಸಂಪೂರ್ಣವಾಗಿ ತಾನು ಕೆಲಸಕ್ಕೆ ತೊಡಗಿಸಿಕೊಂಡಿದ್ದೆ. ನಾನು ಮಾನಸಿಕವಾಗಿ ತುಂಬಾ ದಣಿದಿದ್ದೇನೆ ಎಂದು ಅವರು ಬೇಸರ ಹೊರಹಾಕಿದ್ದಾರೆ. ವಿರಾಮವಿಲ್ಲದೆ ಕೆಲಸ ಅಂತ್ಯವಿಲ್ಲದ ದಿನಚರಿ ಅವರನ್ನು ಮಾನಸಿಕವಾಗಿ ಕುಗ್ಗಿಸಿದೆ ಎಂದು ವಿವರಿಸಿದ್ದಾರೆ. ಆರ್ಥಿಕವಾಗಿ, ನಾನು 'ಸ್ವತಂತ್ರ'ನಲ್ಲ ಎಂದು ನನಗೆ ತಿಳಿದಿದೆ, ಆದರೆ ನಾನು ಕನಿಷ್ಠ 1-2 ವರ್ಷಗಳ ಕಾಲ ಆರಾಮವಾಗಿ ಬದುಕಬಲ್ಲೆ ಎಂದು ನಾನು ಭಾವಿಸುತ್ತೇನೆ" ಪ್ರಸ್ತುತ ತನ್ನ ಬಳಿ ಸುಮಾರು 15 ಲಕ್ಷ ರೂಪಾಯಿ ಉಳಿತಾಯ ಹಣವಿದೆ ಎಂದು ಹೇಳಿರುವ ಟೆಕ್ಕಿ, ಹಿಮಾಚಲ ಪ್ರದೇಶದ ಮನಾಲಿಗೆ ಶಿಫ್ಟ್ ಆಗಿ ಅತ್ಯಂತ ಶಾಂತಿಯುತ ಜೀವನ ನಡೆಸಲು ನಿರ್ಧರಿಸಿದ್ದಾರೆ.
ಈ ಬಗ್ಗೆ ನೆಟ್ಟಿಗರು ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು ಬಳಕೆದಾರರೊಬ್ಬರು ಒಳ್ಳೆಯ ನಿರ್ಧಾರ.ಇನ್ನು ನೀವು ಯಾವಾಗಲೂ ಸ್ವತಂತ್ರರಾಗಬಹುದು ಸಹೋದರ.. ನಾನು ಕಳೆದ ವರ್ಷ ಕಾರ್ಪೊರೇಟ್ ಅನ್ನು ತೊರೆದಿದ್ದೇನೆ, ನಾನು ಸ್ವತಂತ್ರರಾಗಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.