ಕೊಲ್ಕತ್ತಾ,ಆ.7: ಇತ್ತೀಚಿಗೆ ರೀಲ್ಸ್ ಗಾಗಿ ಕೆಲವರು ಅಪಾಯಕಾರಿ ಕೆಲಸಕ್ಕೂ ಮುಂದಾಗುತ್ತಾರೆ. ವೈರಲ್ ಆಗುವ ಉದ್ದೇಶದಿಂದ ರಸ್ತೆ ಮಧ್ಯೆ ಡ್ಯಾನ್ಸ್ ಮಾಡುವುದು, ರೈಲು ಹಳಿಯಲ್ಲಿ ಹುಚ್ಚಾಟ ಮೆರೆಯುವುದು ಹೀಗೆ ಹಲವು ಘಟನೆಗಳು ವರದಿಯಾಗಿವೆ. ಇದೀಗ ಯುವಕನೊಬ್ಬ ಅಪಾಯಕಾರಿ ಕಂಬವೇರಿ ಪುಲ್- ಅಪ್ಸ್ ಮಾಡಿದ ವಿಡಿಯೊವೊಂದು ವೈರಲ್ (Viral News) ಆಗಿದೆ. ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಈ ಘಟನೆ ನಡೆದಿದ್ದು ಎತ್ತರದ ಬೀದಿ ದೀಪದ ಕಂಬವನ್ನು ಯಾವುದೇ ಸುರಕ್ಷಿತ ವಸ್ತು ಬಳಸದೇ ಮೇಲೆ ಹತ್ತಿದ್ದಾನೆ. ಈ ದೃಶ್ಯ ನೋಡಿದಾಗಲೇ ಮೈ ಜುಮ್ಮೆನಿಸುವಂತಿದೆ.
ತೀವ್ರ ಅಪಾಯದ ಹೊರತಾಗಿಯೂ, ಆ ವ್ಯಕ್ತಿ ಸಾಹಸದ ಉದ್ದಕ್ಕೂ ಬಹಳಷ್ಟು ಆತ್ಮವಿಶ್ವಾಸದಿಂದ ಕಾಣಿಸಿಕೊಳ್ಳುತ್ತಾನೆ, ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಮೇಲೆ ಏರಿದ್ದು ಯಾವುದೇ ಭಯ ಇಲ್ಲ ಎಂಬಂತೆ 'ಪುಲ್-ಅಪ್ಸ್' ಮಾಡಿದ್ದಾನೆ. ಇನ್ನೊಬ್ಬ ವ್ಯಕ್ತಿ ಕೆಳಗಿನಿಂದ ದೃಶ್ಯವನ್ನು ರೆಕಾರ್ಡ್ ಮಾಡುತ್ತಾನೆ. ಹಲವು ವೀಕ್ಷಕರು ಈ ಸ್ಟಂಟ್ ನೋಡಿ ಮೆಚ್ಚುಗೆ ನೀಡಿದರೆ ಇನ್ನು ಕೆಲವರು ಗಂಭೀರ ಅಪಾಯಗಳನ್ನು ಎತ್ತಿ ತೋರಿಸಿದರು.
ವಿಡಿಯೋ ನೋಡಿ:
ವೈರಲ್ ಆದ ವಿಡಿಯೊದಲ್ಲಿ ಯುವಕನು ಎತ್ತರದ ಬೀದಿ ದೀಪದ ಮೇಲೆ ಸರಸರನೆ ಏರುತ್ತಿದ್ದಾನೆ. ಯಾವುದೇ ಸುರಕ್ಷಿತ ಸಾಧನ ಇಲ್ಲದಿದ್ದರೂ ಭಯ ಪಡದೇ ಏರುವುದನ್ನು ಗಮನಿಸಬಹುದು. ಹೆಲ್ಮೆಟ್, ಹಾರ್ನೆಸ್ ಅಥವಾ ಯಾವುದೇ ರಕ್ಷಣಾತ್ಮಕ ಸಾಧನಗಳಿಲ್ಲದೆ ಎತ್ತರದಲ್ಲಿ ನಿಂತು ದೈಹಿಕ ವ್ಯಾಯಾಮ ಮಾಡಿದ್ದಾನೆ. ಸ್ವಲ್ಪ ತಪ್ಪಿದರೂ ಜೀವ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇತ್ತು.
Bengaluru Viral Video: ಮಲಗಿದ್ದ ಮಕ್ಕಳ ನಡುವೆ ಕಾಣಿಸಿಕೊಂಡ ಬೃಹತ್ ನಾಗರಹಾವು; ಬೆಚ್ಚಿಬಿದ್ದ ಪೋಷಕರು!
ಈ ಸಾಹಸದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್‌ಗಟ್ಟಲೆ ವೀಕ್ಷಣೆಗಳನ್ನು ಪಡೆದುಕೊಂಡಿದೆ.ಒಬ್ಬ ಬಳಕೆದಾರರು ಕೊನೆಗೂ ವೈರಲ್ ಆಗಿಬಿಟ್ಟಿಯಲ್ಲಾ? ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಹೆಲ್ಮೆಟ್ ಅಥವಾ ಸುರಕ್ಷತಾ ಮುನ್ನೆಚ್ಚರಿಕೆಗಳಿಲ್ಲದೆ ಇಂತಹ ಕಸರತ್ತು ಮಾಡುವುದು ಜೀವಕ್ಕೆ ಅಪಾಯ ಈತನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಕ್ಲಿಪ್ ಅನ್ನು ಕೋಲ್ಕತ್ತಾದಲ್ಲಿ ರೆಕಾರ್ಡ್ ಮಾಡಲಾಗಿದ್ದರೂ ಘಟನೆಯ ನಿಖರವಾದ ಸ್ಥಳ ಮತ್ತು ಪೊಲೀಸರು ಕ್ರಮ ಕೈಗೊಂಡಿರುವ ಯಾವುದೇ ಮಾಹಿತಿಗಳಿಲ್ಲ.