ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸದ್ದು ಮಾಡುತ್ತಿರುವ ವಿಚಿತ್ರ ಉದ್ಯಮ: ಕೇವಲ ಬೆನ್ನು ಕೆರೆದು ಲಕ್ಷ -ಲಕ್ಷ ಗಳಿಸುತ್ತಿರುವ ಯುವಕ!

Viral News: ಇಲ್ಲೊಬ್ಬ ವ್ಯಕ್ತಿ ಕೇವಲ ಬೆನ್ನು ಕೆರೆಯುವ ಕೆಲಸವನ್ನು ಉದ್ಯಮವನ್ನಾಗಿ ಮಾಡಿ ಗಂಟೆಗೆ 4,200 ರೂಪಾಯಿ ಗಳಿಸುತ್ತಾನೆ. 'ಸುಮಾ' ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಜ್ಯಾಂಗ್ ಎಂಬ ವ್ಯಕ್ತಿ ಈ ಉದ್ಯಮ ಆರಂಭಿಸಿ ಸಕ್ಸಸ್ ಕಂಡಿದ್ದಾನೆ‌. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹೀಗೂ ಹಣ ಮಾಡಬಹುದೇ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇಂಟರ್ ನೆಟ್ ಚಿತ್ರ

ಚೀನಾ,ಸೆ.4: ನಾವು ಎಷ್ಟು ಶಿಕ್ಷಣ ಪಡೆದಿದ್ದೇವೆ ಅನ್ನೋದಕ್ಕಿಂತ ಹೆಚ್ಚಾಗಿ ನಮ್ಮ ಕ್ರಿಯಾಶೀಲತೆ ಅನ್ನೋದು ಮುಖ್ಯವಾಗುತ್ತದೆ. ಬುದ್ದಿವಂತಿಕೆಯನ್ನು ಉಪಯೋಗಿಸಿ ಮಾಡುವ ಕೆಲಸದಲ್ಲಿ ಸಕಸ್ಸ್ ಕಾಣುವುದೇ ನಿಜವಾದ ಯಶಸ್ಸು. ಇಲ್ಲೊಬ್ಬ ವ್ಯಕ್ತಿ ಕೇವಲ ಬೆನ್ನು ಕೆರೆಯುವ ಕೆಲಸವನ್ನು ಉದ್ಯಮವನ್ನಾಗಿ ಮಾಡಿ ಗಂಟೆಗೆ 4,200 ರೂಪಾಯಿ ಗಳಿಸುತ್ತಾನೆ. 'ಸುಮಾ' ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಜ್ಯಾಂಗ್ ಎಂಬ ವ್ಯಕ್ತಿ ಈ ಉದ್ಯಮ ಆರಂಭಿಸಿ ಸಕ್ಸಸ್ ಕಂಡಿದ್ದಾನೆ‌. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಹೀಗೂ ಹಣ ಮಾಡಬಹುದೇ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಚೀನಾದಲ್ಲಿ ಜ್ಯಾಂಗ್ ಈ ಉದ್ಯಮವನ್ನು ಆರಂಭಿಸಿದ್ದಾರೆ. ಇಲ್ಲಿ ಸಿಬ್ಬಂದಿಗಳು ವಿಶೇಷವಾಗಿ ವಿನ್ಯಾಸಗೊಳಿಸಿದ ಮೊನಚಾದ ಉಗುರುಗಳನ್ನು ಬಳಕೆ ಮಾಡಿ ಗ್ರಾಹಕರಿಗೆ ಆರಾಮದಾಯಕವಾಗಿ ಬೆನ್ನು ಕೆರೆಯುವ ಸೇವೆ ನೀಡುತ್ತಾರೆ. ಜಾಂಗ್ ಪ್ರಕಾರ, ಅವರ ಎರಡು ಮಳಿಗೆಗಳು ಒಟ್ಟಾಗಿ ಮಾಸಿಕ ಆದಾಯದಲ್ಲಿ ಸುಮಾರು 100,000 ಯುವಾನ್ ಅಂದ್ರೆ ಸುಮಾರು 14 ಲಕ್ಷ ರೂ.ಗಳ ಆದಾಯಗಳಿಸುತ್ತವೆ. ಎರಡೂ ಮಳಿಗೆಗಳು ಈಗಾಗಲೇಲಾಭದಾಯಕವಾಗಿವೆ ಎಂದು ಹೇಳಿಕೊಂಡಿದ್ದಾರೆ.

ವಿಡಿಯೋ ನೋಡಿ:



ತುರಿಕೆ ಶಮನಗೊಳಿಸುದನ್ನೇ ಉದ್ಯಮವನ್ನಾಗಿ ಮಾರ್ಪಡಿಸಿ ಜ್ಯಾಂಗ್ ಅವರು ಭಾರೀ ಸುದ್ದಿಯಾಗಿದ್ದಾರೆ. ಈ ಸೇವೆಗೆ ಗಂಟೆಗೆ ಸುಮಾರು 300 ಯುವಾನ್ ಅಂದಾಜು 4,200 ಶುಲ್ಕ ವಿಧಿಸಲಾಗುತ್ತಿದೆ‌. ಗ್ರಾಹಕರು ಅವರ ಆದ್ಯತೆ ಮೇರೆಗೆ ದೇಹದ ಯಾವುದೇ ಭಾಗ ಆಯ್ಕೆ ಮಾಡಬಹುದು. ಜ್ಯಾಂಗ್ ಅವರ ಪ್ರಕಾರ, ಈ ಸೇವೆ ಪಡೆಯುವವರಲ್ಲಿ ಶೇ. 70 ರಷ್ಟು ಪುರುಷರು ಮತ್ತು ಶೇ. 30 ರಷ್ಟು ಮಹಿಳೆಯರಿದ್ದಾರೆ. ಮಸಾಜ್‌ಗಿಂತಲೂ ಹೆಚ್ಚಿನ ಮಾನಸಿಕ ನೆಮ್ಮದಿ ನೀಡುತ್ತದೆ ಎಂಬುದು ಗ್ರಾಹಕರ ಅಭಿಪ್ರಾಯವಾಗಿದೆ.

Viral Video: ಪೊಲೀಸ್ ಬೈಕ್‌ನಲ್ಲಿ ರ‍್ಯಾಪಿಡೋ ಸೇವೆ? ಸರ್ಕಾರಿ ವಾಹನ ದುರುಪಯೋಗ ಪಡಿಸಿಕೊಂಡ ಸಬ್ ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಮ

ಕಳೆದ ವರ್ಷ ಮಹಿಳೆಯೊಬ್ಬರು ತನ್ನ ಗಂಡನ ಬೆನ್ನು ಕೆರೆಯುವ ಸಣ್ಣ ವೀಡಿಯೊವನ್ನು ಆನ್‌ಲೈನ್‌ ನಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿ ಜಾಂಗ್‌ಗೆ ಈ ಕಲ್ಪನೆ ಬಂದಿದೆ. ಬಾಲ್ಯದಲ್ಲಿ ತಂದೆ ಬೆನ್ನು ಕೆರೆಯುತ್ತಿದ್ದಾಗ ಸಿಗುತ್ತಿದ್ದ ನೆಮ್ಮದಿಯ ನೆನಪೂ ಇದಕ್ಕೆ ಪ್ರೇರಣೆ ಯಾಯಿತು. ಸದ್ಯ ಅವರು ದೇಶಾದ್ಯಂತ 100 ಸುಮಾ ಮಳಿಗೆಗಳನ್ನು ಸ್ಥಾಪಿಸಲು ಸಿದ್ಧತೆಯಲ್ಲಿದ್ದಾರೆ.