ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

35,000 ರುಪಾಯಿಯ ಸ್ಮಾರ್ಟ್‌ ಫೋನ್ ಆರ್ಡರ್ ಮಾಡಿದ ಯುವಕನಿಗೆ ಕಾದಿತ್ತು ಶಾಕ್; ಪಾರ್ಸಲ್‌ನಲ್ಲಿ ಬಂತು ಸೋಪ್

Viral News: ಮನೆಗೆ ತರಕಾರಿಯಿಂದ ಹಿಡಿದು ಡ್ರೆಸ್ ಶಾಪಿಂಗ್ ಕೂಡ ಕೂತಲ್ಲೇ ನಡೆಯಬೇಕು ಎಂಬಂತೆ ಆಗಿ ಹೋಗಿದೆ. ಆದರೆ ಇಂತಹ ಆನ್‌ಲೈನ್ ಶಾಪಿಂಗ್ ಎಷ್ಟರ ಮಟ್ಟಿಗೆ ಸುರಕ್ಷಿತ ಅನ್ನೋ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಇದೀಗ ಪ್ರಶ್ನೆಗೆ ವ್ಯತಿರಿಕ್ತವಾಗಿ ಸ್ಮಾರ್ಟ್‌ಫೋನ್ ಆರ್ಡರ್ ಮಾಡಿದ ಯುವಕನಿಗೆ ವಂಚನೆ ಯಾಗಿರುವ ಘಟನೆಯೊಂದು ನಡೆದಿದೆ. ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದ 35,000 ಮೌಲ್ಯದ ವಿವೋ ಮೊಬೈಲ್ ಬದಲಾಗಿ ಬಾಕ್ಸ್‌ನಲ್ಲಿ ಬಟ್ಟೆ ತೊಳೆಯುವ ಸಾಬೂನು ಪತ್ತೆಯಾಗಿದೆ.

ಫೋನ್ ಬುಕ್ ಮಾಡಿದ್ದ ಯುವಕನಿಗೆ ಸಿಕ್ತು ಸೋಪ್‌

ನವದೆಹಲಿ, ಜೂ. 24: ಇತ್ತೀಚೆಗೆ ಯಾವುದೇ ವಸ್ತುವನ್ನು ನಾವು ಆನ್‌ಲೈನ್ ಮೂಲಕ ಖರೀದಿಸಲು ಆಸಕ್ತಿ ತೋರುತ್ತೇವೆ. ತರಕಾರಿಯಿಂದ ಹಿಡಿದು ಡ್ರೆಸ್ ಶಾಪಿಂಗ್ ಕೂಡ ಕೂತಲ್ಲೇ ನಡೆಯಬೇಕು ಎಂದು ಬಯಸುತ್ತೇವೆ. ಆದರೆ ಇಂತಹ ಆನ್‌ಲೈನ್ ಶಾಪಿಂಗ್ ಎಷ್ಟರ ಮಟ್ಟಿಗೆ ಸುರಕ್ಷಿತ ಎನ್ನುವ ಪ್ರಶ್ನೆ ಆಗಾಗ ಕಾಡುತ್ತಿರುತ್ತದೆ. ಅದೇ ರೀತಿ ಸ್ಮಾರ್ಟ್‌ಫೋನ್ ಆರ್ಡರ್ ಮಾಡಿದ ಯುವಕನಿಗೆ ಶಾಕ್‌ ಎದುರಾಗಿದೆ. ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದ 35,000 ರುಪಾಯಿ ಮೌಲ್ಯದ ವಿವೋ ಮೊಬೈಲ್ ಬದಲಾಗಿ ಬಾಕ್ಸ್‌ನಲ್ಲಿ ಬಟ್ಟೆ ತೊಳೆಯುವ ಸಾಬೂನು ಪತ್ತೆಯಾಗಿದೆ. ಸದ್ಯ ಈ ಘಟನೆಯ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.

ಆನ್‌ಲೈನ್ ಶಾಪಿಂಗ್‌ನಲ್ಲಿ ಕಡಿಮೆ ಮೊತ್ತಕ್ಕೆ ಯಾವುದೇ ವಸ್ತು ಸಿಕ್ಕರೂ ಗುಣಮಟ್ಟದ ಬಗ್ಗೆ ಚರ್ಚೆಗಳು ಆಗಾಗ ನಡೆಯುತ್ತಿರುತ್ತವೆ. ಇದೀಗ ಆನ್‌ಲೈನ್‌ನಲ್ಲಿ 35,000 ರುಪಾಯಿ ಮೌಲ್ಯದ ವಿವೋ ಸ್ಮಾರ್ಟ್‌ಫೋನ್ ಆರ್ಡರ್ ಮಾಡಿದ ಯುವಕ ಪ್ಯಾಕೆಟ್‌ ಓಪನ್ ಮಾಡಿ ನೋಡಿದಾಗ ಸೋಪ್ ಬಾರ್ ಕಂಡು ಆಘಾತಕ್ಕೊಳಗಾಗಿದ್ದಾನೆ. ತಾನು ಬುಕ್ ಮಾಡಿದ್ದು ಸೋಪೋ ಅಥವಾ ಮೊಬೈಲೋ ಎಂದು ಆತನೇ ಒಮ್ಮೆ ಶಾಕ್ ಆಗಿದ್ದಾನೆ.

ವೈರಲ್‌ ಪೋಸ್ಟ್‌:



ವೈರಲ್ ಪೋಸ್ಟ್ ಪ್ರಕಾರ, ಯುವಕನು ತಮ್ಮ ಹೊಸ ಸ್ಮಾರ್ಟ್‌ ಫೋನ್‌ಗಾಗಿ ಕಾತರದಿಂದ ಕಾಯುತ್ತಿದ್ದ. ಆದಾಗ್ಯೂ, ಅಂತಿಮವಾಗಿ ಡೆಲಿವರಿ ತನ್ನ ಮನೆ ಬಾಗಿಲಿಗೆ ಬಂದಿದೆ ಎಂದಾಗ ಬಹಳಷ್ಟು ಖುಷಿ ಪಟ್ಟಿದ್ದರು. ಆದರೆ ಪ್ಯಾಕೇಟ್‌ ಒಳಗೆ ಮೊಬೈಲ್ ಬದಲಿಗೆ ಸೋಪ್ ನೀಡಲಾಗಿದೆ. ಈ ಘಟನೆಯು ಮತ್ತೊಮ್ಮೆ ಆನ್‌ಲೈನ್ ಶಾಪಿಂಗ್ ಸುರಕ್ಷತೆ, ಪ್ಯಾಕೇಜಿಂಗ್ ಬಗ್ಗೆ ಕಳವಳ ಹುಟ್ಟುಹಾಕಿದೆ.

ಕಾರಿನಲ್ಲಿ ಊಟ ಮಾಡಿ ತಟ್ಟೆ ರಸ್ತೆಗೆ ಎಸೆದ ಕುಟುಂಬ

ಇ-ಕಾಮರ್ಸ್ ಸಂಸ್ಥೆಯೊಂದರಲ್ಲಿ ಗ್ರಾಹಕರು 35,000 ರುಪಾಯಿ ಮೌಲ್ಯದ ವಿವೋ ಸ್ಮಾರ್ಟ್‌ಫೋನ್ ಆರ್ಡರ್ ಮಾಡಿದ್ದರು. ತಕ್ಷಣವೇ ಈ ಕುರಿತು ಇ-ಕಾಮರ್ಸ್ ಸಂಸ್ಥೆಯ ಗ್ರಾಹಕ ಸೇವಾ ಕೇಂದ್ರಕ್ಕೆ ದೂರು ನೀಡಿದ್ದಾರೆ. ಈ ಇಡೀ ಘಟನೆಯ ವಿವರವನ್ನು ಐಶ್ವರ್ಯಾ ಎಂಬುವವರು ತಮ್ಮ ಖಾತೆಯಲ್ಲಿ ಫೋಟೋ ಸಮೇತ ಹಂಚಿಕೊಂಡಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು, ʼʼಇಂತಹ ದುಬಾರಿ ಉತ್ಪನ್ನಗಳನ್ನು ಸ್ವೀಕರಿಸುವಾಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕುʼʼ ಎಂದು ಹೇಳಿದ್ದಾರೆ. ಮತ್ತೊಬ್ಬರು, ʼʼಇಂತಹ ವಂಚನೆಗಳು ಮಧ್ಯವರ್ತಿಗಳಿಂದ ನಡೆಯುತ್ತವೆ. ಡೆಲಿವರಿ ಬಾಯ್ ಎದುರೇ ಪಾರ್ಸೆಲ್ ಅನ್-ಬಾಕ್ಸಿಂಗ್ ಮಾಡುವುದು ಸೂಕ್ತʼʼ ಎಂದು ಸಲಹೆ ನೀಡಿದ್ದಾರೆ.