ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಿಂಗಳಿಗೆ 2 ಲಕ್ಷ ರುಪಾಯಿ ಗಳಿಕೆ: ಎಂಜಿನಿಯರಿಂಗ್ ಮುಗಿಸಿ ಕ್ಯಾಬ್ ಬ್ಯುಸಿನೆಸ್‌ನಲ್ಲಿ ಯಶಸ್ಸು ಕಂಡ ಚಾಲಕ

Viral News: ಪ್ರಯತ್ನ ಪಟ್ಟರೆ ಸ್ವಂತ ಉದ್ಯಮದಲ್ಲೂ ಯಶಸ್ಸು ಪಡೆಯಬಹುದು ಎನ್ನುವುದಕ್ಕೆ ಈ ಯುವಕನ ಸಾಧನೆಯೇ ಸಾಕ್ಷಿ. ಎಂಜಿನಿಯರ್ ಮುಗಿಸಿದ ಯುವಕ ಆಫೀಸ್ ಕೆಲಸ ಆಯ್ದುಕೊಳ್ಳದೆ ಕ್ಯಾಬ್ ಬ್ಯುಸಿನೆಸ್‌ ಮಾಡುವ ಮೂಲಕ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಕೇವಲ ಒಂದು ಕಾರಿನಿಂದ ಈ ಉದ್ಯೋಗ ಆರಂಭ ಮಾಡಿದ ಅವರು ಇಂದು ತಿಂಗಳಿಗೆ 2 ಲಕ್ಷ ರುಪಾಯಿ ಆದಾಯ ಗಳಿಸುತ್ತಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಎಂಜಿನಿಯರಿಂಗ್ ಮುಗಿಸಿ ಕ್ಯಾಬ್ ಚಾಲಕನಾಗಿ ಯಶಸ್ಸು ಪಡೆದ ಯುವಕ

ಮುಂಬೈ, ಜೂ. 1: ಓದು ಮುಗಿಸಿದ ಬಳಿಕ ಹೆಚ್ಚಿನ ಯುವಕ-ಯುವತಿಯರು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಲು ಇಚ್ಛಿಸುತ್ತಾರೆ. ಪ್ರಯತ್ನಪಟ್ಟರೆ ಸ್ವಂತ ಉದ್ಯಮದಲ್ಲೂ ಯಶಸ್ಸು ಪಡೆಯಬಹುದು ಎನ್ನುವುದಕ್ಕೆ ಈ ಯುವಕನ ಸಾಧನೆಯೇ ಸಾಕ್ಷಿ. ಎಂಜಿನಿಯರಿಂಗ್‌ ಮುಗಿಸಿದ ಯುವಕ ಆಫೀಸ್ ಕೆಲಸ ಆಯ್ದುಕೊಳ್ಳದೆ ಕ್ಯಾಬ್ ಬ್ಯುಸಿನೆಸ್ ಮಾಡುವ ಮೂಲಕ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಕೇವಲ ಒಂದು ಕಾರಿನಿಂದ ಈ ಉದ್ಯೋಗ ಆರಂಭಿಸಿದ ಅವರು ಇಂದು ತಿಂಗಳಿಗೆ ಎರಡು ಲಕ್ಷ ರುಪಾಯಿ ಆದಾಯ ಗಳಿಸುತ್ತಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.

ಯಾವ ಉದ್ಯೋಗವೂ ಮೇಲಲ್ಲ, ಕೀಳಲ್ಲ ಎನ್ನುವ ಮಾತಿಗೆ ಈ ಯುವಕನೇ ಸಾಕ್ಷಿ. ಮಹಾರಾಷ್ಟ್ರದ ಮುಂಬೈಯ ಯುವಕ ತಮ್ಮ ಮೊದಲ ಕಾರನ್ನೇ ಬ್ಯುಸಿನೆಸ್‌ನ ಅಡಿಪಾಯವಾಗಿಸಿಕೊಂಡು ಯಶಸ್ಸಿನ ಹಂತ ದಾಟುತ್ತ ಬಂದಿದ್ದಾರೆ. ಅವರು ಈಗ ತಿಂಗಳಿಗೆ ಸುಮಾರು 2 ಲಕ್ಷ ರುಪಾಯಿ ಗಳಿಸುವುದಾಗಿ ಹೇಳಿಕೊಂಡಿದ್ದಾರೆ.

ವಿಡಿಯೊ ನೋಡಿ:



ಕಂಟೆಂಟ್ ಕ್ರಿಯೇಟರ್ ಸೆಲೆಬ್ ಫ್ರೈಸೆನ್ ಈ ಚಾಲಕನ ಜತೆ ಮಾತನಾಡಿದ್ದಾರೆ. ತಿಂಗಳ ಆದಾಯದ ಬಗ್ಗೆ ಕೇಳಿದಾಗ, ಅವರು ನೀಡಿದ ಪ್ರತಿಕ್ರಿಯೆ ಎಲ್ಲರನ್ನು ಅಚ್ಚರಿಗೆ ದೂಡಿದೆ. "ತಿಂಗಳಿಗೆ 2 ಲಕ್ಷ ರುಪಾಯಿ ಗಳಿಸುತ್ತೇನೆ" ಎಂದು ಆತ ಹೇಳಿದಾಗ ಕಂಟೆಂಟ್ ಕ್ರಿಯೇಟರ್ ಶಾಕ್‌ಗೆ ಒಳಗಾಗಿದ್ದಾರೆ. ಮಾತುಕತೆಯ ಸಮಯದಲ್ಲಿ, ಚಾಲಕ ತಮ್ಮ ಕೆಲಸ ಕಷ್ಟದಿಂದ ಕೂಡಿದೆ. ಅದಾಗ್ಯೂ, ಸಂಬಳದ ಮೇಲೆ ಮಾತ್ರ ಅವಲಂಬಿತನಾಗಿ ಉಳಿಯುವ ಬದಲು ತನ್ನದೇ ಆದ ವ್ಯವಹಾರವನ್ನು ನಿರ್ಮಿಸಲು ಧೈರ್ಯದಿಂದ ಮುನ್ನುಗ್ಗಿದ್ದಾಗಿ ಹೇಳಿದ್ದಾರೆ.

ಬೆರಳಿನ ತುದಿಯಲ್ಲೇ ಉರಿದ ಗ್ಯಾಸ್ ಸ್ಟೌವ್: ಇದು ಪವಾಡವಲ್ಲ ವಿಜ್ಞಾನ!

ತನ್ನ ಮೊದಲ ಕಾರನ್ನೇ ಬ್ಯುಸಿನೆಸ್‌ನ ಅಡಿಪಾಯವಾಗಿಸಿಕೊಂಡ ಈ ಚಾಲಕ, ನಂತರ ಹಂತ ಹಂತವಾಗಿ ಸಾಲದ ಮೂಲಕ ಮತ್ತಷ್ಟು ಕಾರುಗಳನ್ನು ಖರೀದಿಸಿದ್ದಾರೆ. ಇತರ ಚಾಲಕರಿಗೆ ಅವುಗಳನ್ನು ನಿರ್ವಹಿಸಲು ಅವಕಾಶ ನೀಡಿದ್ದು ಇದರಲ್ಲೇ ಲಾಭವು ಗಳಿಸುತ್ತಾರೆ. ರಿಸ್ಕ್ ತೆಗೆದುಕೊಳ್ಳುವುದು ಅನಿವಾರ್ಯ, ಬೇರೆಯವರ ಅಡಿಯಲ್ಲಿ ಕೆಲಸ ಮಾಡುವುದಕ್ಕಿಂತ ಸ್ವಂತವಾಗಿ ಏನನ್ನಾದರೂ ಮಾಡುವುದು ಭವಿಷ್ಯಕ್ಕೆ ಭದ್ರತೆ ಒದಗಿಸುತ್ತದೆ ಎಂಬುದು ಅವರ ಆಶಯ.

ಈ ಎಂಜಿನಿಯರಿಂಗ್ ಪದವೀಧರ ಶಿಕ್ಷಣ ಮುಗಿಸಿದ ತಕ್ಷಣ ತಿಂಗಳಿಗೆ 20,000 ರುಪಾಯಿಯಿಂದ 30,000 ರುಪಾಯಿ ಒದಗಿಸುವ ಸಂಬಳದ ಬದಲು ಬೇರೆ ಏನನ್ನಾದರೂ ಮಾಡಬೇಕೆಂಬ ತುಡಿತದಿಂದ ಈ ಉದ್ಯಮ ಆರಂಭಿಸಿದ್ದಾರೆ. ಒಂದು ಕಾರು ಒಂದು ದಿನದಲ್ಲಿ ಸುಮಾರು 5,000 ರುಪಾಯಿ ಗಳಿಸುತ್ತದೆ‌. ಕಾರುಗಳ ಇಎಂಐ (EMI) ಪಾವತಿಯ ನಂತರವೂ ತಿಂಗಳಿಗೆ ಸುಮಾರು 2 ಲಕ್ಷ ರುಪಾಯಿ ನಿವ್ವಳ ಲಾಭ ಉಳಿಯುತ್ತದೆ ಎಂದು ವಿವರಿಸಿದ್ದಾರೆ. ಇದಕ್ಕೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಒಬ್ಬರು, ʼʼ​ಸ್ಫೂರ್ತಿದಾಯಕ ವಿಡಿಯೊʼʼ ಎಂದಿದ್ದಾರೆ.