ಬೆಂಗಳೂರು,ಆ.14: ವಧು ಹುಡುಕುವುದು ಅಂದ್ರೆ ಇತ್ತೀಚೆಗೆ ಯುವಕರಿಗೆ ದೊಡ್ಡ ತಲೆನೋವಾಗಿ ಬಿಟ್ಟಿದೆ. ಅದರಲ್ಲೂ ಯುವತಿಯರು ಇಂದು ಆರ್ಥಿಕ ಸ್ವಾವಲಂಬಿಯಾಗಿ ಬದುಕಲು ಇಚ್ಚಿಸಿದ್ದು ತಾವು ಉತ್ತಮ ಉದ್ಯೋಗದಲ್ಲಿದ್ದಾರೆ. ಹೀಗಾಗಿ ವರನಿಂದ ದುಪ್ಪಟ್ಟು ಆದಾಯ ಬರುತ್ತಿದ್ದರೂ ಪ್ರಪೋಸಲ್ ರಿಜೆಕ್ಟ್ ಮಾಡಿದ ಅನೇಕ ಯುವತಿಯರು ಇದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಬೆಂಗಳೂರಿನ ಯುವತಿಯೊಬ್ಬಳು ತಿಂಗಳಿಗೆ ಎರಡು ಲಕ್ಷ ಬರುತ್ತಿದ್ದ ಯುವಕನ ಪ್ರಪೋಸಲ್ ಅನ್ನು ಕ್ಯಾನ್ಸಲ್ (Viral News) ಮಾಡಿದ್ದಾರೆ. ಇದಕ್ಕೆ ಕಾರಣವೆನೆಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಾ.
ಇಂದು ಮದುವೆ ವಿಚಾರದಲ್ಲಿ ಯುವತಿಯರು ಕೇವಲ ವರನ ಆದಾಯ ಅಷ್ಟೇ ನೋಡುವುದಿಲ್ಲ. ತಮ್ಮ ಉದ್ಯೋಗ ಹಾಗೂ ಸ್ವಾತಂತ್ರ್ಯ ಸಿಗುವ ಬದುಕನ್ನೇ ಇಷ್ಟ ಪಡುತ್ತಾರೆ. ಇದೀಗ ತಿಂಗಳಿಗೆ ಬರೊಬ್ಬರಿ 2 ಲಕ್ಷ ವೇತನ ಪಡೆಯುತ್ತಿದ್ದ ಪ್ರಪೋಸಲ್ ಅನ್ನು ಯುವತಿಯೊಬ್ಬಳು ವರನ ಮುಂದೆಯೇ ರಿಜೆಕ್ಟ್ ಮಾಡಿದ್ದಾಳೆ. ತಾನು ಆರ್ಥಿಕವಾಗಿ ಸ್ವತಂತ್ರವಾಗಿರಲು ಬಯಸುತ್ತೇನೆ ಎಂದು ಹೇಳಿದ್ದರೂ ಆತ ತನ್ನ ಬಳಿ ಐಟಿ ಕೆಲಸ ಬಿಡುತ್ತೀರಾ ಎಂದು ಕೇಳಿದ್ದಾನೆ. ಹೀಗಾಗಿ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದೇನೆ ಎಂದು ಯುವತಿ ಹೇಳಿದ್ದಾರೆ.
ಕೆಲವು ತಿಂಗಳ ಹಿಂದೆ ತನ್ನ ತಾಯಿ ಒಬ್ಬ ಯುವಕನನ್ನು ಭೇಟಿಯಾಗಲು ಒತ್ತಾಯಿಸಿದ್ದಾರೆ ಎಂದು ನಂದಿನಿ ಎಂಬ ಯುವತಿ ಹಂಚಿಕೊಂಡಿದ್ದಾಳೆ. ಯುವಕನು ತಿಂಗಳಿಗೆ 2 ಲಕ್ಷ ಮೊತ್ತವನ್ನು ಗಳಿಸುತ್ತಿದ್ದರೆ, ನಂದಿನಿ 90,000 ಗಳಿಸುತ್ತಿದ್ದರು. ಯುವಕನು ಮದುವೆ ನಂತರ ಕುಟುಂಬದ ವೆಚ್ಚಕ್ಕೆ ಶೇ. 50ರಷ್ಟು ಹಣ ನೀಡುತ್ತೀಯಾ ಅಥವಾ ಕೆಲಸ ಬಿಟ್ಟು ಗೃಹಿಣಿ ಯಾಗುತ್ತೀಯಾ? ಎಂದು ಪ್ರಶ್ನಿಸಿದ್ದಾನೆ.
ಇದಕ್ಕೆ ಉತ್ತರಿಸಿದ ಆಕೆ ತಾನು ಎರಡೂ ಮಾಡುವುದಿಲ್ಲ ಎಂದು ಉತ್ತರಿಸಿದಳು. ನಂತರ ಸಂಭಾಷಣೆ ಮತ್ತೊಂದು ತಿರುವು ಪಡೆದುಕೊಂಡಿತು, ಮಹಿಳೆಯರಿಗೆ ಕೆಲಸದ ಅಗತ್ಯವೇನಿದೆ?" ಎಂದು ಮರುಪ್ರಶ್ನೆ ಮಾಡಿದ್ದಾನೆ. ನೀವು ಅವಲಂಬಿತ ಹೆಂಡತಿಯನ್ನು ಬಯಸುವುದಾದರೆ, ನಿಜವಾಗಿಯೂ ಗೃಹಿಣಿಯಾಗಲು ಬಯಸುವವರನ್ನು ಏಕೆ ಮದುವೆಯಾಗಬಾರದು? ಕೆಲಸ ಮಾಡುವ ಯುವತಿಯರನ್ನು ಮನವೊಲಿಸಲು ನೀವು ಏಕೆ ಪ್ರಯತ್ನಿಸುತ್ತಿದ್ದೀರಿ? ಎಂದು ಆಕೆ ಪ್ರಶ್ನೆ ಮಾಡಿದ್ದಾರೆ.
ಅಷ್ಟೇ ಅಲ್ಲದೆ, "ನೀವು ಇನ್ನೂ ಒಳ್ಳೆಯ ಹುಡುಗಿಗೆ ಅರ್ಹರು. ನನಗೆ ನನ್ನ ಆರ್ಥಿಕ ಸ್ವಾತಂತ್ರ್ಯ ಮುಖ್ಯ" ಎಂದು ಹೇಳಿ ಆ ಪ್ರಪೋಸಲ್ ಅನ್ನು ತಿರಸ್ಕರಿಸಿದ್ದಾರೆ. ಬಳಿಕ ತಿಂದ ಆಹಾರದ ಅರ್ಧ ಬಿಲ್ ನೀಡಿ ಅಲ್ಲಿಂದ ನಿರ್ಗಮಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಬಳಕೆದಾರರೊಬ್ಬರು ನಿಮ್ಮ ನಿರ್ಧಾರ ಸರಿಯಾಗಿದೆ ಅಂದರು. ಮತ್ತೊಬ್ಬರು ಮದುವೆ ಅಂದಾಕ್ಷಣ ವಧು ಉದ್ಯೋಗ ಬಿಡಬೇಕು ಎನ್ನುವುದು ಇಂದಿನ ಜಗತ್ತಿಗೆ ಸರಿ ಹೊಂದಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.