ನವದೆಹಲಿ,ಜು.2: ಇಂದಿನ ಸ್ವಾರ್ಥ ಪ್ರಪಂಚದಲ್ಲೂ "ಮಾನವೀಯತೆ ಉಳಿದಿದೆ" ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಯುವತಿಯೊಬ್ಬಳು ಡೆಲಿವರಿ ಬಾಯ್ ಮುಖದಲ್ಲಿ ಮಂದಹಾಸ ಬೀರಿಸಿದ್ದು ಟಿಪ್ಸ್ ನೀಡುವ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ. ಕೇವಲ ಹದಿನೈದು ರೂಪಾಯಿ ಮೌಲ್ಯದ ವಸ್ತುವನ್ನು ಆರ್ಡರ್ ಮಾಡಿದ್ದು ಆದರೆ ತಲುಪಿಸಲು ಬಂದ ಡೆಲಿವರಿ ಬಾಯ್ ಗೆ 500 ರೂಪಾಯಿ ಟಿಪ್ಸ್ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಡೆಲಿವರಿ ಬಾಯ್ ಈ ಖುಷಿಯ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿಕೊಂಡಿದ್ದಾರೆ.
ಬ್ಲಿಂಕಿಟ್ ಸವಾರ ಹೇಳುವಂತೆ, 20 ರೂಪಾಯಿಗಿಂತ ಕಡಿಮೆ ಮೌಲ್ಯದ ಆರ್ಡರ್ ಮೇಲೆ ಯುವತಿಯೊಬ್ಬರು 500 ರೂಪಾಯಿ ಟಿಪ್ ನೀಡಿದ್ದು ದಿಗ್ಭ್ರಮೆಗೊಳಿತು. ಇದು ಸಾಮಾನ್ಯ ವಿತರಣೆಯನ್ನು ಸ್ಮರಣೀಯ ಕ್ಷಣವನ್ನಾಗಿ ಮಾಡಿತು ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಸವಾರನು ಈ ಬಗ್ಗೆ ವೀಡಿಯೊ ಪೋಸ್ಟ್ ಮಾಡಿ, ಈ ಮೊತ್ತವು ತನಗೆ ತುಂಬಾ ಉಪಯೋಗ ಕಾರಿಯಾಗಿದೆ. ಏಕೆಂದರೆ ಇದು ಸಾಮಾನ್ಯವಾಗಿ ಎರಡು ದಿನಗಳಲ್ಲಿ ಗಳಿಸುವ ಮೊತ್ತಕ್ಕೆ ಸಮನಾಗಿರುತ್ತದೆ ಅಂದಿದ್ದಾರೆ.
ವಿಡಿಯೋ ನೋಡಿ:
ಈ ಘಟನೆ ದೆಹಲಿಯಲ್ಲಿ ನಡೆದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ‘im_blinkit_rider’ ಎಂಬ ಖಾತೆಯಲ್ಲಿ ಯುವಕ ಈ ವಿಡಿಯೊ ಶೇರ್ ಮಾಡಿದ್ದಾನೆ. 20 ರೂ.ಗಿಂತ ಕಡಿಮೆ ಮೌಲ್ಯದ ಆರ್ಡರ್ ಅನ್ನು ತಲುಪಿಸಲು ಹೋಗಿದ್ದೆ ಎಂದು ತನ್ನ ಮೊಬೈಲ್ ತೋರಿಸಿದ ಯುವಕ ಆರ್ಡರ್‌ನ ಒಟ್ಟು ಮೊತ್ತ 15 ರೂಪಾಯಿಗಿಂತ ಕಡಿಮೆ ಇತ್ತು ಎಂದು ಹೇಳುತ್ತಾನೆ.
ಆದರೆ ಈ ಆರ್ಡರ್ ತಲುಪಿಸಿದಾಗ ಅಲ್ಲಿದ್ದ ಅಕ್ಕ ಎಷ್ಟು ಟಿಪ್ಸ್ ಕೊಟ್ಟರು ಗೊತ್ತಾ? ಎಂದು ಕೇಳುತ್ತಾ 500 ರೂಪಾಯಿ ಮೊತ್ತವನ್ನು ತೋರಿಸಿದ್ದಾನೆ. ಈ ಹಣವು ತನ್ನ ಎರಡು ದಿನಗಳ ಗಳಿಕೆಗೆ ಸಮಾನವಾಗಿದೆ. ಭಾವನಾತ್ಮಕವಾಗಿ, ಆತ ಈ ವೀಡಿಯೊವನ್ನು "ಧನ್ಯವಾದಗಳು, ದೀದಿ" ಎಂದು ಹೇಳುವ ಮೂಲಕ ಕೊನೆಗೊಳಿಸಿದ್ದಾನೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆ ಮಹಿಳೆಯ ನಿಸ್ವಾರ್ಥ ಗುಣಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಒಬ್ಬ ಬಳಕೆದಾರರು "ದೀದಿ ತನ್ನ ಜೀವನದಲ್ಲಿಯೂ ಭಾರೀ ಕಷ್ಟದ ಸಮಯ ಕಂಡಿರಬೇಕು ಮತ್ತು ಅದಕ್ಕಾಗಿಯೇ ಅವರು ಸಹಾಯ ಮಾಡಲು ಮುಂದಾಗಿದ್ದಾರೆ ಎಂದು ಬರೆದಿದ್ದಾರೆ. ಮತ್ತೊಬ್ಬರು ಸಣ್ಣದೊಂದು ಸಹಾಯ ಒಬ್ಬರ ಜೀವನದಲ್ಲಿ ದೊಡ್ಡ ಬದಲಾವಣೆ ಮಾಡಬಹುದು ಎಂದು ಬರೆದಿದ್ದಾರೆ.