ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಾಟ್‌ ಎ ಗಿಫ್ಟ್‌?! ಬಾಯ್‌ಫ್ರೆಂಡ್‌ಗೆ ಗುಟ್ಕಾ ಪುಷ್ಪಗುಚ್ಛ‌ ನೀಡಿದ ಯುವತಿ

ಇಲ್ಲೊಬ್ಬ ಯುವತಿ ತನ್ನ ಪ್ರೇಯಸಿಗೆ ನೀಡಿದ ಗಿಫ್ಟ್ ಕಂಡ್ರೆ ನೀವೇ ಅಚ್ಚರಿ ಪಡುತ್ತೀರಿ. ಹೌದು, ಈ ಯುವತಿ ಎಲ್ಲಕ್ಕಿಂತಲೂ ವಿಭಿನ್ನವಾದ ಉಡುಗೊರೆಯೊಂದನ್ನು ಕೊಟ್ಟು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾಳೆ. ಹೌದು, ಆಕೆ ತನ್ನ ಪ್ರಿಯತಮನಿಗೆ ಗುಟ್ಕಾ ಪ್ಯಾಕೆಟ್‌ಗಳಿಂದ ಮಾಡಿದ ವಿಶೇಷ ಪುಷ್ಪ ಗುಚ್ಛವನ್ನು ನೀಡಿದ್ದಾಳೆ. ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದೆ.

ಗೆಳೆಯನಿಗೆ ಗುಟ್ಕಾ ಪುಷ್ಪಗುಚ್ಛ ಉಡುಗೊರೆ ನೀಡಿದ ಯುವತಿ

ಗುಟ್ಕಾ ಪುಷ್ಪಗುಚ್ಛದ ತಯಾರಿ. -

Profile
Pushpa Kumari Nov 21, 2025 7:05 PM

ನವದೆಹಲಿ: ತಾವು ಪ್ರೀತಿಸುವ ಹುಡುಗ ಅಥವಾ ಹುಡುಗಿಗೆ ದುಬಾರಿ ಉಡುಗೊರೆ ನೀಡುವ ಆಸೆ ಬಹುತೇಕರಿಗೆ ಇರುತ್ತದೆ.‌ ಸಾಮಾನ್ಯವಾಗಿ ಅವರಿಗೆ ಇಷ್ಟವಾಗಿದ್ದನ್ನು ಅಂದರೆ ವಾಚ್, ಡ್ರೆಸ್ ಚಾಕೊಲೇಟ್‌ಗಳಂತಹ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ಇಲ್ಲೊಬ್ಬ ಯುವತಿ ತನ್ನ ಪ್ರಿಯಕರನಿಗೆ ನೀಡಿದ ಗಿಫ್ಟ್ ಕಂಡ್ರೆ ನೀವೇ ಅಚ್ಚರಿ ಪಡುತ್ತೀರಿ. ಹೌದು, ಈ ಯುವತಿ ಎಲ್ಲರಿಗಿಂತಲೂ ವಿಭಿನ್ನ ಉಡುಗೊರೆಯೊಂದನ್ನುನೀಡಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾಳೆ. ಹೌದು, ಆಕೆ ತನ್ನ ಪ್ರಿಯತಮನಿಗೆ ಗುಟ್ಕಾ ಪ್ಯಾಕೆಟ್‌ಗಳಿಂದ ಮಾಡಿದ ವಿಶೇಷ ಪುಷ್ಪ ಗುಚ್ಛವನ್ನು ನೀಡಿದ್ದಾಳೆ. ಸದ್ಯ ಈ ವಿಡಿಯೊ ಭಾರಿ ವೈರಲ್ (Viral Video) ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊವನ್ನು ಹೂ ಗುಚ್ಛ ತಯಾರಿಸುವ ಮಹಿಳೆಯೊಬ್ಬರು ಹಂಚಿಕೊಂಡಿದ್ದಾರೆ.‌ ತನ್ನ ಬಳಿಗೆ ಭೇಟಿ ನೀಡುವ ಗ್ರಾಹಕರೊಬ್ಬರು ಗುಟ್ಕಾದಿಂದ ಮಾಡಿದ ಪುಷ್ಪಗುಚ್ಛವನ್ನು ತಯಾರಿಸುವಂತೆ ವಿನಂತಿ ಮಾಡಿಕೊಂಡರು ಎಂದು ವಿಡಿಯೊದಲ್ಲಿ ತಿಳಿಸಿದ್ದಾರೆ. ಯುವತಿಯೊಬ್ಬಳು ಕೆಪಿ ಗೋಲ್ಡ್ (KP Gold) ಬ್ರ್ಯಾಂಡ್‌ನ ಗುಟ್ಕಾ ಪುಷ್ಪಗುಚ್ಛವನ್ನು ಕೇಳಿದ್ದಾಳೆ. ಆಕೆಯ ಬಾಯ್‌ಫ್ರೆಂಡ್‌ಗೆ ಗುಟ್ಕಾ ಎಂದರೆ ತುಂಬಾ ಇಷ್ಟವಂತೆ. ಹಾಗಾಗಿ ಇದನ್ನೇ ತಯಾರಿಸಲು ಹೇಳಿದ್ದಾಳೆ ಎಂದು ಆ ಮಹಿಳೆ ಹೇಳಿಕೊಂಡಿದ್ದಾರೆ.

ಗೆಳೆಯನಿಗೆ 'ಗುಟ್ಕಾ ಪುಷ್ಪಗುಚ್ಛ' ಉಡುಗೊರೆ ನೀಡಿದ ಯುವತಿ:



ವೈರಲ್ ಆದ ಕ್ಲಿಪ್‌ನಲ್ಲಿ ಒಬ್ಬ ವ್ಯಕ್ತಿ ಹೂಗುಚ್ಛವನ್ನು ಒಟ್ಟಿಗೆ ಸೇರಿಸಿ ಒಂದು ಕೋಲಿಗೆ ಎರಡು ಪ್ಯಾಕೆಟ್ ಗುಟ್ಕಾವನ್ನು ಅಂಟಿಸುತ್ತಿರುವುದನ್ನು ತೋರಿಸಲಾಗಿದೆ. ಗುಟ್ಕಾ ಪ್ಯಾಕೆಟ್‌ಗಳನ್ನು ಕೋಲಿಗೆ ಅಂಟಿಸಿ, ಒಂದೊಂದಾಗಿ ಹೂವಿನಂತೆ ಜೋಡಿಸಿ, ನೀಲಿ ಬಣ್ಣದ ಗುಟ್ಕಾ ಗುಚ್ಛವನ್ನು ಸಿದ್ಧ ಪಡಿಸುವುದು ಕಂಡು ಬಂದಿದೆ. ಸದ್ಯ ಈ ವಿಡಿಯೊ ನೋಡಿದ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಹಾಸ್ಯವಾಗಿ ಪ್ರತಿಕ್ರಿಯೆ ನೀಡಿದರೆ ಇನ್ನೂ ಕೆಲವರು ಹಾನಿಕಾರಕ ವಸ್ತುವನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಮಾಲೀಕರನ್ನು ಟೀಕಿಸಿದ್ದಾರೆ.

ವಯಸ್ಸು 80 ಆದ್ರೂ ಉತ್ಸಾಹಕ್ಕೇನು ಕಮ್ಮಿ ಇಲ್ಲ.... 15,000 ಅಡಿ ಎತ್ತರದಿಂದ ಸ್ಕೈ ಡೈವಿಂಗ್!

ನೆಟ್ಟಿಗರೊಬ್ಬರು ತಂಬಾಕು ಕ್ಯಾನ್ಸರ್ ಉಂಟು ಮಾಡುತ್ತದೆ ಎಂದಿದ್ದಾರೆ. "ಇಂತಹ ಬಾಯ್‌ಫ್ರೆಂಡ್ ಅಥವಾ ಗರ್ಲ್‌ಫ್ರೆಂಡ್ ತಮಗೆ ಸಿಕ್ಕಿದ್ದರೆ ನೀವು ನಿಜಕ್ಕೂ ಬಹಳಷ್ಟು ಅದೃಷ್ಟವಂತರು. ಅವರು‌ ಸುಲಭವಾಗಿ ನಿಮ್ಮನ್ನು ನರಕಕ್ಕೆ ಕೂಡ ಕಳುಹಿಸುತ್ತಾರೆ" ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು "ಪ್ರೀತಿ ಕೂಡ ಒಂದು ಕ್ಯಾನ್ಸರ್ʼʼ ಎಂದು ಕಮೆಂಟ್ ಮಾಡಿದ್ದಾರೆ. ಈ ವಿಡಿಯೊ ಇದುವರೆಗೂ 1.4 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.