ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ಯೋಧರು ಗೆಳತಿ ಅಥವಾ ಹೆಂಡತಿಗೆ ನಿಷ್ಠರಾಗಿರಲು ಸಾಧ್ಯವೇ ಇಲ್ಲ"- ಸೈನಿಕರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಯುವತಿ!

Viral Video: ಕಂಟೆಂಟ್ ಕ್ರಿಯೇಟರ್, ಇನ್ಫ್ಲುಯೆನ್ಸರ್ ಗಳು ಹೆಚ್ಚಾಗಿದ್ದು ವೈರಲ್ ಆಗುವ ಉದ್ದೇಶ ದಿಂದ ನಾನಾ ರೀತಿಯ ಕಂಟೆಂಟ್ ಸೃಷ್ಟಿ ಮಾಡಿ ಅಪ್ಲೋಡ್ ಮಾಡುತ್ತಾರೆ. ಅದೇ ರೀತಿ ಹಿಮಾಚಲ ಪ್ರದೇಶದ ಯುವತಿಯೊಬ್ಬಳು ಭಾರತೀಯ ಸೈನಿಕರ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿದ್ದು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಭಾರತೀಯ ಸೇನೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಯುವತಿ

ನವದೆಹಲಿ,ಎ.17: ಇತ್ತೀಚೆಗೆ ಸೋಷಿಯಲ್ ಮೀಡಿಯಾ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಕಂಟೆಂಟ್ ಕ್ರಿಯೇಟರ್, ಇನ್ಫ್ಲುಯೆನ್ಸರ್ ಗಳು ಹೆಚ್ಚಾಗಿದ್ದು ವೈರಲ್ ಆಗುವ (Viral News) ಉದ್ದೇಶದಿಂದ ನಾನಾ ರೀತಿಯ ಕಂಟೆಂಟ್ ಸೃಷ್ಟಿ ಮಾಡಿ ಅಪ್ಲೋಡ್ ಮಾಡುತ್ತಾರೆ. ಅದೇ ರೀತಿ ಹಿಮಾಚಲ ಪ್ರದೇಶದ ಯುವತಿಯೊಬ್ಬಳು ಭಾರತೀಯ ಸೈನಿಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಹಿಮಾಚಲ ಪ್ರದೇಶ ಮೂಲದ ಸಾಮಾಜಿಕ ಮಾಧ್ಯಮ ಪ್ರಭಾವಿ ಇಶಿತಾ ಪುಂಡೀರ್ ಭಾರತೀಯ ಸೈನಿಕರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸೈನಿಕರ ವೈಯಕ್ತಿಕ ಜೀವನದ ಬಗ್ಗೆ ಅವರು ಹೇಳಿಕೆಯೊಂದನ್ನು ನೀಡಿದ್ದು ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಕ್ರೋಶ ವ್ಯಕ್ತವಾಗಿದೆ. ಸೈನಿಕರು ತಮ್ಮ ದೇಶಕ್ಕೆ ಅತ್ಯಂತ ನಿಷ್ಠರಾಗಿದ್ದರೂ, ವೈಯಕ್ತಿಕ ಸಂಬಂಧಗಳಲ್ಲಿ ನಿಷ್ಠರಾಗಿರಲು ವಿಫಲರಾಗಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದರು.

ವಿಡಿಯೋ ನೋಡಿ:



ಇಶಿತಾ ಪುಂಡೀರ್ ಎನ್ನುವ ಯುವತಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊವೊಂದನ್ನು ಅಪ್ಲೋಡ್ ಮಾಡಿದ್ದರು. ನಮ್ಮ ಸೈನಿಕರು ದೇಶ ಕಾಯುವಲ್ಲಿ ನಿಷ್ಠಾವಂತರು ಆಗಿದ್ದಾರೆ. ಆದರೆ ಸೈನಿಕರು"ತಮ್ಮ ಗೆಳತಿ ಅಥವಾ ಹೆಂಡತಿಗೆ ಎಂದಿಗೂ ನಿಷ್ಠರಾಗಿರಲು ಸಾಧ್ಯವಿಲ್ಲ" ಸುಮಾರು "90 ಪ್ರತಿಶತ ಸೈನಿಕರು ತಮ್ಮ ಹೆಂಡತಿಯರು ಮತ್ತು ಗೆಳತಿಯರಿಗೆ ನಿಷ್ಠರಾಗಿಲ್ಲ" ಅವರಿಗೆ ಒಂದಕ್ಕಿಂತ ಹೆಚ್ಚು ಸಂಬಂಧ ಇರುತ್ತದೆ ಎಂದು ಆರೋಪ ಮಾಡಿದ್ದರು.

Viral Video: ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!

ಈ ಹೇಳಿಕೆ ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗಿದ್ದು ಸೈನಿಕರು ಮತ್ತು ಅವರ ಕುಟುಂಬವನ್ನು ಅಗೌರವಗೊಳಿಸಿದ್ದಾರೆ ಎಂದು ಅನೇಕರು ಆರೋಪಿಸಿದರು. ಇದಕ್ಕೆ ಪ್ರತಿಯಾಗಿ ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಯದುಪತಿ ಠಾಕೂರ್ ಅವರು ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪೊಲೀಸ್ ವರಿಷ್ಠಾಧಿಕಾರಿಗೆ ಲಿಖಿತ ದೂರು ಸಲ್ಲಿಕೆ ಮಾಡಿದ್ದಾರೆ.

ಇಶಿತಾ ಪುಂಡೀರ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ವಿರುದ್ಧ ಪೊಲೀಸರಿಗೆ ಈಗಾಗಲೇ ಹಲವಾರು ದೂರುಗಳು ಕೇಳಿ ಬಂದಿದ್ದು ಅದನ್ನು ತನಿಖೆ ಮಾಡಲಾಗುತ್ತಿದೆ ಎಂದಿದ್ದಾರೆ. ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿರ್ಮೌರ್ ಪೊಲೀಸ್ ವರಿಷ್ಠಾಧಿಕಾರಿ ನಿಶ್ಚಿಂತ್ ನೇಗಿ ಹೇಳಿದ್ದಾರೆ.

ಈ ಒತ್ತಡದ ನಡುವೆ, ಪುಂಡೀರ್ ಸಾರ್ವಜನಿಕವಾಗಿ ಕ್ಷಮೆಯಾಚಿಸುವ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ತನ್ನ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ತಪ್ಪುಗಳನ್ನು ಮಾಡುವುದು ಮಾನವ ಸ್ವಭಾವ ಎಂದು ಅವರು ಹೇಳಿದ್ದು ತಪ್ಪುಗಳನ್ನು ಅರಿತುಕೊಂಡ ನಂತರ ಅವುಗಳನ್ನು ಒಪ್ಪಿಕೊಳ್ಳಬೇಕು ಎಂದು ಕ್ಷಮೆಯಾಚಿಸಿದ್ದಾರೆ.