ನವದೆಹಲಿ, ಸೆ. 1: ಮದುವೆ ವಯಸ್ಸಿಗೆ ಬಂದ ಯುವಕ-ಯುವತಿಯರಿಗೆ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡುವುದೇ ದೊಡ್ಡ ಸಾಹಸ. ಅದರಲ್ಲೂ ಇಂದು ಗೌರವಯುತ, ಉತ್ತಮ ಸಂಬಂಧಕ್ಕಿಂತ ಶ್ರೀಮಂತಿಕೆ, ಉದ್ಯೋಗ, ರೂಪ ನೋಡಿಯೇ ಆಯ್ಕೆ ಮಾಡಿಕೊಳ್ಳುವುದೇ ಹೆಚ್ಚು. ಇದಕ್ಕೆ ಉದಾಹರಣೆ ಎಂಬಂತೆ ಯುವತಿಯೊಬ್ಬಳು ಉತ್ತಮ ಗುಣವಿರುವ ಹುಡುಗ ಸಿಕ್ಕರೂ ಆತನ ಎತ್ತರ ಕಡಿಮೆ ಎನ್ನುವ ಕಾರಣಕ್ಕೆ ನಿರಾಕರಿಸಿದ್ದಾಳೆ. ಉತ್ತಮ ನಡತೆಯ ವ್ಯಕ್ತಿ ಎಂಬ ಅರಿವಾದರೂ ಆತನ ಮೈಕಟ್ಟು ತನಗೆ ಹಿಡಿಸಲಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ (Viral News) ಬರೆದುಕೊಂಡಿದ್ದಾಳೆ.
ಈ ವಿಚಾರವನ್ನು ಆಕೆ ಸೋಚಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, "ಒಳ್ಳೆಯ ಸಂಬಂಧ, ಉತ್ತಮ ಗುಣದ ಜತೆಗೆ ರೂಪ, ಮೈಕಟ್ಟು ಕೂಡ ಮುಖ್ಯ ಅಲ್ವಾ?" ಎಂದು ನೆಟ್ಟಿಗರ ಬಳಿ ಕೇಳಿದ್ದಾಳೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಭಾರಿ ಚರ್ಚೆ ಆರಂಭವಾಗಿದೆ. ಕೆಲವರು ದೈಹಿಕ ಆಕರ್ಷಣೆಗಿಂತ ಉತ್ತಮ ನಡತೆಯೇ ಮುಖ್ಯ. ಸರಿ ಹೊಂದುವ ಹುಡುಗನನ್ನು ಕಳೆದುಕೊಂಡಿದ್ದೀರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರೈಲ್ವೆ ಗೇಟ್‌ನಲ್ಲೇ ಟ್ರೈನ್ ನಿಲ್ಲಿಸಿ ಹತ್ತಿದ ಕುಟುಂಬ
ಪೋಸ್ಟ್‌ನಲ್ಲಿ ಯುವತಿ ಆತ ದಯಾಳು, ಗೌರವಾನ್ವಿತ ಮತ್ತು ಉತ್ತಮ ನಡತೆಯ ವ್ಯಕ್ತಿ ಎಂದು ಹೇಳಿದ್ದಾಳೆ. ಆದರೆ ಎತ್ತರದ ವಿಷಯಕ್ಕೆ ಬಂದಾಗ ಆತ ತನ್ನ ಆದ್ಯತೆಯನ್ನು ಆತ ಪೂರೈಸಲಿಲ್ಲ ಎಂದಿದ್ದಾಳೆ. ಆಕೆ ತನ್ನ ನಿರ್ಧಾರವನ್ನು ವಿವರಿಸುತ್ತಾ, ʼʼದೈಹಿಕ ಆಕರ್ಷಣೆ ಸಂಬಂಧದ ಪ್ರಮುಖ ಭಾಗವೇ? ಅಥವಾ ಒಳ್ಳೆಯ ವ್ಯಕ್ತಿ ಆಗಿದ್ದರೆ ಸಾಕೇ?ʼʼ ಎಂದು ಪ್ರಶ್ನಿಸಿದ್ದಾಳೆ.
ಭಾವನಾತ್ಮಕ ಬೆಂಬಲದಷ್ಟೇ ಶಾರೀರಿಕ ಆಕರ್ಷಣೆ ಕೂಡ ಮದುವೆಗೆ ಮುಖ್ಯ ಎನಿಸಿತು. ಇಷ್ಟವಿಲ್ಲದೆ ಮದುವೆಯಾಗುವುದು ಸರಿಯಲ್ಲ ಎಂದು ಪ್ರಪೋಸಲ್ ರಿಜೆಕ್ಟ್ ಮಾಡಿದ್ದಾಗಿ ಹೇಳಿದ್ದಾಳೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು, ʼʼಮನುಷ್ಯನ ಎತ್ತರ ಆತನ ಕೈಯಲ್ಲಿರುವುದಿಲ್ಲ. ಒಳ್ಳೆಯ ಗುಣ ಮತ್ತು ಗೌರವ ನೀಡುವ ವ್ಯಕ್ತಿ ಸಿಗುವುದು ಇಂದಿನ ದಿನಗಳಲ್ಲಿ ಅಪರೂಪ. ಇಂತಹ ಜನರನ್ನು ಕಳೆದುಕೊಳ್ಳುವುದು ಮೂರ್ಖತನ" ಎಂದು ಆಕೆಯ ನಿರ್ಧಾರವನ್ನು ಟೀಕಿಸಿದ್ದಾರೆ. ಇನ್ನೊಬ್ಬರು, ಆಕೆಯ ನಿಲುವನ್ನು ಬೆಂಬಲಿಸಿದ್ದು, ʼʼದೈಹಿಕ ನೋಟವು ಆಕರ್ಷಣೆಯಲ್ಲಿ ಪಾತ್ರ ವಹಿಸುತ್ತದೆʼʼ ಎಂದು ವಾದಿಸಿದ್ದಾರೆ.