ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗುರುಗ್ರಾಮದಲ್ಲಿ ಭಾರಿ ಮಳೆಯಿಂದ ಸಂಚಾರ ಅಸ್ತವ್ಯಸ್ತ: ಟ್ರಾಫಿಕ್‌ ಕಿರಿಕಿರಿಯಿಂದ ವಾಹನ ಸಿಗದೆ 2.5 ಗಂಟೆ ನಡೆದು ಮನೆ ತಲುಪಿದ ಯುವತಿ

Viral News: ಐಷಾರಾಮಿ ವಸತಿ ಕೇಂದ್ರ ಹರಿಯಾಣದ ಗುರುಗ್ರಾಮದಲ್ಲಿ ತೀವ್ರ ಮಳೆಯಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಕಚೇರಿಯಿಂದ ಮನೆಗೆ ಹಿಂತಿರುಗಲು ವಾಹನ ಸಿಗದೆ ಉದ್ಯೋಗಿಗಳು ಪರದಾಡಿದ್ದಾರೆ. ಶಾಲಾ ಮಕ್ಕಳನ್ನು ಕರೆದೊಯ್ಯುವ ಬಸ್‌ಗಳು ರಸ್ತೆ ಮಧ್ಯೆ ಗಂಟೆಗಟ್ಟಲೆ ಸಿಲುಕಿಕೊಂಡವು. ಈ ನಡುವೆ ಯುವತಿಯೊಬ್ಬಳು ಸಂಚಾರ ದಟ್ಟಣೆಯಿಂದಾಗಿ 8 ಕಿ.ಮೀ. ದೂರವನ್ನು ಬರೋಬ್ಬರಿ 2.5 ಗಂಟೆಗಳ ಕಾಲ ನಡೆದೇ ಮನೆ ತಲುಪಿದ ವಿಡಿಯೊವೊಂದು ವೈರಲ್ ಆಗಿದೆ.

ಗುರುಗ್ರಾಮದಲ್ಲಿ ವಾಹನ ಸಿಗದೇ 2.5 ಗಂಟೆ ನಡೆದು ಮನೆ ತಲುಪಿದ ಯುವತಿ

ಚಂಡೀಗಢ, ಆ. 26: ನಗರ ಪ್ರದೇಶಗಳು ಆಧುನಿಕ ಸೌಕರ್ಯಗಳನ್ನು ಹೊಂದಿದ್ದರೂ ಮೂಲಭೂತ ಸೌಲಭ್ಯದಿಂದ ವಂಚಿತಗೊಳ್ಳುತ್ತಿವೆ. ಇದಕ್ಕೆ ಪೂರಕ ಎಂಬಂತೆ ಐಷಾರಾಮಿ ವಸತಿ ಕೇಂದ್ರವಾದ ಹರಿಯಾಣದ ಗುರುಗ್ರಾಮದಲ್ಲಿ ತೀವ್ರ ಮಳೆಯಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಕಚೇರಿಯಿಂದ ಮನೆಗೆ ಹಿಂತಿರುಗಲು ವಾಹನ ಸಿಗದೆ ಉದ್ಯೋಗಿಗಳು ಪರದಾಡಿದ್ದಾರೆ. ಶಾಲಾ ಮಕ್ಕಳನ್ನು ಕರೆದೊಯ್ಯುವ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದು ರಸ್ತೆ ಮಧ್ಯೆ ಗಂಟೆಗಟ್ಟಲೆ ಸಿಲುಕಿಕೊಂಡವು. ಈ ನಡುವೆ ಯುವತಿಯೊಬ್ಬಳು ಸಂಚಾರ ದಟ್ಟಣೆಯಿಂದಾಗಿ 8 ಕಿಲೋ ಮೀಟರ್ ದೂರವನ್ನು ಬರೋಬ್ಬರಿ 2.5 ಗಂಟೆಗಳ ಕಾಲ ನಡೆದೇ ಮನೆ ತಲುಪಿದ ವಿಡಿಯೊವೊಂದು ವೈರಲ್ (Viral News) ಆಗಿದೆ.

ಸಣ್ಣದಾದ ಮಳೆ ಬಂದರೂ ಸಾಕು‌ ಸೈಬರ್ ಸಿಟಿ ಗುರುಗ್ರಾಮದ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಳ್ಳುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕಚೇರಿಯಿಂದ ಮನೆಗೆ ಹಿಂತಿರುಗಲು ವಾಹನ ಸಿಗದೇ 8 ಕಿ.ಮೀ. ದೂರವನ್ನು ಯುವತಿ ಕಾಲ್ನಡಿಗೆಯಲ್ಲೇ ಕ್ರಮಿಸಿದ್ದಾರೆ. ಕೋಟಿಗಟ್ಟಲೆ ರುಪಾಯಿ ಆದಾಯಗಳಿಸುವ ನಗರದಲ್ಲಿ ಮೂಲಸೌಕರ್ಯ ಕೊರತೆ ಎದುರಾಗಿದೆ ಎಂದು ವಿಡಿಯೊದಲ್ಲಿ ವಿವರಿಸಲಾಗಿದೆ.

ವಿಡಿಯೊ ನೋಡಿ:



ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರುವ ವಿಡಿಯೊದಲ್ಲಿ ಹೆನ್ಸಿ ಸೋನಿ ಸಂಪೂರ್ಣ ಕಷ್ಟವನ್ನು ಹೇಳಿಕೊಂಡಿದ್ದಾರೆ‌. ಕೆಲಸ ಮುಗಿಸಿ ಮನೆಗೆ ಹೋಗಲು ಪ್ರಯತ್ನಿಸುವಾಗ ತೀವ್ರ ಮಳೆಯಿಂದಾಗಿ ತೊಂದರೆ ಅನುಭವಿಸಿದ್ದಾರೆ. ಯಾವುದೇ ವಾಹನ ನಿಲ್ಲಿಸದಿದ್ದಾಗ ಕಾಲ್ನಡಿಗೆ ಮೂಲಕವೇ ಮನೆ ತಲುಪಿದ್ದಾರೆ‌. ಮಳೆ ಬಂದಾಗಲೆಲ್ಲಾ ಗುರುಗ್ರಾಮದಲ್ಲಿ ಪ್ರಯಾಣಿಸುವುದು ದೊಡ್ಡ ಯುದ್ಧದಲ್ಲಿ ಭಾಗವಹಿಸಿದಂತೆ ಎಂದು ಹೇಳಿದ್ದಾರೆ.

1.9 ಕೋಟಿ ರುಪಾಯಿಯ ಮೈಕ್ರೋಸಾಫ್ಟ್ ಉದ್ಯೋಗ ತ್ಯಜಿಸಿ ಅವಲತ್ತುಕೊಂಡ ಯುವಕ

ಮನೆಗೆ ಯಾವುದೇ ವಾಹನ ಲಭ್ಯವಿಲ್ಲದ ಕಾರಣ, ಇಷ್ಟು ದೂರ ಹೋಗಲು ಸಾಧ್ಯವಾಗುತ್ತದೆಯೇ? ಎಂಬ ಪ್ರಶ್ನೆ ಇದ್ದರೂ ನಡೆಯಲು ಪ್ರಾರಂಭಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಅವರು ಹೇಳಿದ್ದಾರೆ. ಭಾರೀ ಸಂಚಾರ ದಟ್ಟಣೆಯ ನಡುವೆ 8 ಕಿ.ಮೀ. ದೂರವನ್ನು ಬರೋಬ್ಬರಿ 2.5 ಗಂಟೆಗಳ ಕಾಲ ನಡೆದೇ ತಲುಪಿದ್ದಾರೆ.

​ಸಾಮಾನ್ಯವಾಗಿ ಕೆಲವೇ ನಿಮಿಷಗಳಲ್ಲಿ ತಲುಪಬಹುದಾದ 8 ಕಿ.ಮೀ. ಅಂತರವನ್ನು ತಲುಪಲು ಅವರಿಗೆ 2.5 ಗಂಟೆ ಬೇಕಾಯಿತು. ಸೋನಿ ಕಾರುಗಳಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಸಹ ತೋರಿಸಿದರು. ʼʼಇಷ್ಟು ದೊಡ್ಡ ಕಾರ್ಪೊರೇಟ್ ಜಗತ್ತು ಇರುವ ಗುರುಗ್ರಾಮದ ರಿಯಾಲಿಟಿ ಇದು, ಎಲ್ಲವೂ ತುಂಬಾ ಇದೆ, ಆದರೆ ನಿರ್ವಹಣೆ ಮಾತ್ರ ಶೂನ್ಯʼʼ ಎಂದಿದ್ದಾರೆ. ಮಳೆಯಿಂದಾಗಿ ಉಂಟಾದ ಭಾರಿ ದಟ್ಟಣೆಯಿಂದಾಗಿ ಅನೇಕರು ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ.