ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹೋಳಿ ಆಚರಿಸಲು ವಿದೇಶದಿಂದ ವೃಂದಾವನಕ್ಕೆ ಬಂದ ಮಹಿಳೆಗೆ ಭಯಾನಕ ಅನುಭವ; ಕಣ್ಣಿಗೆ ಬಣ್ಣ ಎರಚಿ ಕಿರುಕುಳ

Viral Video: ಹೋಳಿ ಹಬ್ಬ ಆಚರಿಸಲು ವಿದೇಶದಿಂದ ಭಾರತಕ್ಕೆ ಆಗಮಿಸಿದ ಪ್ರವಾಸಿಗರೊಬ್ಬರಿಗೆ ಕಹಿ ಅನುಭವ ಆಗಿದೆ. ಆಸ್ಟ್ರಿಯಾದ ಮಹಿಳೆಯೊಬ್ಬರು ಉತ್ತರ ಪ್ರದೇಶದ ವೃಂದಾವನಕ್ಕೆ ಭೇಟಿ ನೀಡಿದ್ದು ಈ ಸಂದರ್ಭದಲ್ಲಿ ಅವರ ಕಣ್ಣಿಗೆ ತೀವ್ರ ಹಾನಿಯಾಗಿದೆ. ಘಟನೆಯ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಹೋಳಿ ಆಚರಿಸಲು ಬಂದ ಪ್ರವಾಸಿಗೆ ಸಂಕಷ್ಟ

ಲಖನೌ, ಮಾ. 4: ದೇಶದ ಎಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಜೋರಾಗಿದೆ. ಬಣ್ಣದ ಓಕುಳಿಯಲ್ಲಿ ಮಿಂದೇಳುವ ಮೂಲಕ ಸಂಭ್ರಮ ಪಡುವ ಹಬ್ಬ ಇದಾಗಿದೆ‌. ಆದರೆ ಈ ಹೋಳಿ ಹಬ್ಬ ನೋಡಲು ಬಂದ ಪ್ರವಾಸಿಗರೊಬ್ಬರಿಗೆ ಕಹಿ ಅನುಭವ ಆಗಿದೆ. ಆಸ್ಟ್ರಿಯಾದ ಮಹಿಳೆಯೊಬ್ಬರು ಉತ್ತರ ಪ್ರದೇಶದ ವೃಂದಾವನಕ್ಕೆ ಭೇಟಿ ನೀಡಿದ್ದು ಈ ಸಂದರ್ಭದಲ್ಲಿ ಆಕೆಯ ಕಣ್ಣಿಗೆ ತೀವ್ರ ಹಾನಿಯಾಗಿದೆ. ಈ ಘಟನೆಯ ವಿಡಿಯೊವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ (Viral Video) ಶೇರ್‌ ಮಾಡಿದ್ದಾರೆ.

ಭಾರತದ ಸಾಂಪ್ರದಾಯಿಕ, ಕಲರ್‌ಫುಲ್‌ ಹಬ್ಬ ಹೋಳಿಯನ್ನು ನೋಡಲು ಆಸ್ಟ್ರಿಯಾದ ಮಹಿಳೆಯೊಬ್ಬರು ಭೇಟಿ ನೀಡಿದ್ದರು. ಆದರೆ ಬಣ್ಣದ ಹೆಸರಿನಲ್ಲಿ ನಡೆದ ಅಮಾನವೀಯ ಕೃತ್ಯದಿಂದಾಗಿ ಅವರ ಕಣ್ಣಿಗೆ ತೀವ್ರ ಪೆಟ್ಟಾಗಿದೆ.

ವಿಡಿಯೊ ನೋಡಿ:



ಹೋಳಿ ಆಚರಣೆಯ ಸಂಪ್ರದಾಯ ವಿಭಿನ್ನವಾಗಿರುತ್ತದೆ. ಹೀಗಾಗಿ ಹೆಚ್ಚಿನವರು ಇದನ್ನು ಕಣ್ತುಂಬಿಕೊಳ್ಳಲು ವಿದೇಶದಿಂದಲೂ ಆಗಮಿಸುತ್ತಾರೆ. ಅದರಂತೆ ಆಸ್ಟ್ರಿಯಾದ ಪ್ರವಾಸಿ ಬ್ರಿಟ್ಟಾ ಸ್ಲಾಗ್‌ಬೌರ್ ಎನ್ನುವ ಯುವತಿ ಹೋಳಿ ಹಬ್ಬವನ್ನು ನೋಡಲು ವೃಂದಾವನಕ್ಕೆ ಆಗಮಿಸಿದ್ದರು. ಆರಂಭದಲ್ಲಿ ದೇವಸ್ಥಾನಗಳ ದರ್ಶನ, ಅಲ್ಲಿನ ಆಚರಣೆ ಬಗ್ಗೆ ಅವರು ಖುಷಿ ಪಟ್ಟಿದ್ದರು‌. ಆದರೆ ಹೋಳಿ ಆಚರಣೆ ಸಂದರ್ಭದಲ್ಲಿ ಕೆಲವರು ಬಣ್ಣದ ಪುಡಿಯ ಜತೆಗೆ ಕಲ್ಲು ಬೆರೆಸಿ ನೇರವಾಗಿ ಬ್ರಿಟ್ಟಾ ಅವರ ಕಣ್ಣಿಗೆ ಎಸೆದಿದ್ದಾರೆ. ಹಲವು ಮಹಿಳೆಯರ ಮೇಲೆ ಅಪರಿಚಿತರು ಬಲವಂತವಾಗಿ ಬಣ್ಣ ಎಸೆಯುತ್ತಿದ್ದರು. ಮಹಿಳೆಯರಿಗೆ ಅಲ್ಲಿನ ವಾತಾವರಣ ಖುಷಿ ನೀಡುವಂತೆ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ರೀಲ್ಸ್ ತಂದ ಅವಾಂತರ; ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ

ಈ ಬಗ್ಗೆ ಅವರು ಬೇಸರ ಹೊರಹಾಕಿದ್ದು, ʼʼನಾನು ಇದನ್ನು ಸುಧಾರಿಸಿಕೊಂಡು ಕಣ್ಣನ್ನು ತೊಳೆದುಕೊಂಡೆ. ಆದರೆ ಕೆಲವು ದಿನಗಳ ನಂತರವೂ ನನ್ನ ದೃಷ್ಟಿ ಮಂಜಾಗಿದೆʼʼ ಎಂದು ಅವರು ಹೇಳಿಕೊಂಡಿದ್ದಾರೆ. ಅವರು ಮಹಿಳೆಯರಿಗೆ ಎಚ್ಚರಿಕೆ ನೀಡಿದ್ದು ʼʼಹೋಳಿ ಆಚರಿಸಿ, ಆದರೆ ಸುರಕ್ಷಿತ ವಾಗಿರಿ. ವೃಂದಾವನದಲ್ಲಿ ಕಹಿ ಹೋಳಿ ಅನುಭವʼʼ ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾವಿರಾರು ಭಾರತೀಯರು ಅವರಿಗೆ ಬೆಂಬಲ ಸೂಚಿಸಿದ್ದಾರೆ. ಕೆಲವರು ಇಂತಹ ನೀಚ ಕೆಲಸದಿಂದ ದೇಶಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.