Viral Video: ಸ್ಪೈಡರ್‌ಮ್ಯಾನ್ ವೇಷ ಧರಿಸಿ ಜನನಿಬಿಡ ರಸ್ತೆಯಲ್ಲಿ ಸಾಹಸ; ಬೈಕ್ ಸವಾರನಿಗೆ 15,000 ರೂ. ದಂಡ
ಸ್ಪೈಡರ್‌ಮ್ಯಾನ್ ವೇಷ ಧರಿಸಿ ಜನದಟ್ಟಣೆಯ ರಸ್ತೆಗಳಲ್ಲಿ ಸಾಹಸ ಪ್ರದರ್ಶಿಸಿದ್ದಕ್ಕೆ ಬೈಕ್ ಸವಾರನಿಗೆ 15,000 ರೂ. ದಂಡ ವಿಧಿಸಲಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಒಡಿಶಾದ ರೂರ್ಕೆಲಾದಲ್ಲಿ ಈ ಘಟನೆ ನಡೆದಿದೆ.


ಭುವನೇಶ್ವರ: ವ್ಯಕ್ತಿಯೊಬ್ಬ ಸ್ಪೈಡರ್‌ಮ್ಯಾನ್ (Spider Man) ವೇಷ ಧರಿಸಿ ಜನದಟ್ಟಣೆಯ ರಸ್ತೆಗಳಲ್ಲಿ ಸಾಹಸ ಪ್ರದರ್ಶಿಸಿದ್ದಕ್ಕೆ ದಂಡ ವಿಧಿಸಲಾಗಿದೆ. ಒಡಿಶಾದ (Odisha) ರೂರ್ಕೆಲಾದಲ್ಲಿ ಈ ಘಟನೆ ನಡೆದಿದೆ. ಹೆಲ್ಮೆಟ್ ಇಲ್ಲದೆ ಜನದಟ್ಟಣೆಯ ನಗರದ ರಸ್ತೆಯಲ್ಲಿ ವಾಹನ ಚಲಾಯಿಸುವುದು ಸೇರಿದಂತೆ ಹಲವಾರು ಸಂಚಾರ ನಿಯಮಗಳ ಉಲ್ಲಂಘನೆಗಾಗಿ ಪೊಲೀಸರು ಅವನಿಗೆ 15,000 ರೂ. ದಂಡ ವಿಧಿಸಿದ್ದಾರೆ. ಸದ್ಯ ಘನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಈತ ಅತಿ ವೇಗವಾಗಿ ವಾಹನ ಚಲಾಯಿಸುತ್ತಿದ್ದಲ್ಲದೆ, ಬೈಕ್ ನಿಯಂತ್ರಿಸಲು ಕಷ್ಟಪಡುತ್ತಿದ್ದ ಮತ್ತು ಭಾರಿ ಶಬ್ಧ ಹೊರಡಿಸುತ್ತಿದ್ದ ಮಾರ್ಪಡಿಸಿದ ಸೈಲೆನ್ಸರ್ ಬಳಸಿದ್ದಾನೆ. ಇದನ್ನು ಗಮನಿಸಿದ ಸಂಚಾರ ಪೊಲೀಸರು ಆತನನ್ನು ತಡೆದಿದ್ದಾರೆ. ಪೊಲೀಸರಿಗೆ ಆತ ಸರಿಯಾದ ವಿವರಣೆಯನ್ನು ನೀಡಲು ವಿಫಲನಾದ ಕಾರಣ, ಅಧಿಕಾರಿಗಳು ಆತನ ವಾಹನವನ್ನು ವಶಪಡಿಸಿಕೊಂಡರು. ಹಾಗೆಯೇ ನಿಯಮ ಉಲ್ಲಂಘನೆಗಳಿಗಾಗಿ 15,000 ರೂ. ದಂಡ ವಿಧಿಸಿದರು.
ವಿಡಿಯೊ ವೀಕ್ಷಿಸಿ:
स्पाइडर मैन का कट गया चालान, बिना हेलमेट तेजी से चला रहा था मोटरसाइकिल#SpiderManBrandNewDay #SpiderMan pic.twitter.com/P11zJKQnzm
— Raajeev Chopra (@Raajeev_Chopra) August 21, 2025
ಪೊಲೀಸ್ ಸಿಬ್ಬಂದಿಯೊಬ್ಬರು ಸ್ಪೈಡರ್‌ಮ್ಯಾನ್ ವೇಷಧಾರಿಯ ಬೈಕ್ ಪರಿಶೀಲಿಸಿದ ಹಾಗೂ ಸೈಲೆನ್ಸರ್‌ನಿಂದ ಹೊರಡುವ ಶಬ್ಧದ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಕೆಲವು ಬಳಕೆದಾರರು ಸ್ಪೈಡರ್ ಮ್ಯಾನ್ ಸ್ಟಂಟ್ ಅನ್ನು ನೋಡಿ ನಕ್ಕರೆ, ಇನ್ನೂ ಅನೇಕರು ಇದನ್ನು ಅಜಾಗರೂಕ ಮತ್ತು ಅಪಾಯಕಾರಿ ಎಂದು ಖಂಡಿಸಿದ್ದಾರೆ.
ಕಾಲ್ಪನಿಕ ವೇಷಭೂಷಣವಿರಲಿ ಅಥವಾ ಇಲ್ಲದಿರಲಿ, ಸಂಚಾರ ನಿಯಮಗಳು ಎಲ್ಲರಿಗೂ ಅನ್ವಯಿಸುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ. ರಸ್ತೆಯಲ್ಲಿ ಹೀರೋನಂತೆ ಬಿಂಬಿಸುವುದರಿಂದ ಇತರರಿಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ. ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೇ ರೀತಿಯ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಚಲನಚಿತ್ರ ಪಾತ್ರದಂತೆ ವೇಷ ಧರಿಸುವುದು ಮನರಂಜನೆ ನೀಡಬಹುದು. ಆದರೆ ಸಾರ್ವಜನಿಕ ರಸ್ತೆಗಳು ಅಪಾಯಕಾರಿ ಸಾಹಸಗಳಿಗೆ ಸ್ಥಳವಲ್ಲ ಎಂದು ಜನರು ಹೇಳಿದ್ದಾರೆ.
ಇದನ್ನೂ ಓದಿ: Viral Video: ಗಣೇಶ ಮೂರ್ತಿಯ ತೋಳಿನ ಮೇಲೆ ಶಾಂತವಾಗಿ ನಿದ್ದೆ ಮಾಡಿದ ಬೆಕ್ಕು; ವಿಡಿಯೊ ವೈರಲ್