ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Guruvayur Temple: ಗುರುವಾಯೂರು ದೇವಾಲಯದ ಪವಿತ್ರ ಕೊಳದಲ್ಲಿ ರೀಲ್ಸ್! ಶುದ್ಧೀಕರಣಕ್ಕೆ ಮುಂದಾದ ಅರ್ಚಕರು

Purification Rituals at Guruvayur Temple: ಕೇರಳದ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದಲ್ಲಿ ಶುದ್ಧೀಕರಣ ವಿಧಿಗಳನ್ನು ನಡೆಸಲಾಯಿತು. ದೇವಸ್ಥಾನದಲ್ಲಿ ಹಿಂದೂಯೇತರ ವ್ಲಾಗರ್ ಜಾಸ್ಮಿನ್ ಜಾಫರ್ ದೇವಾಲಯದ ಕೊಳಕ್ಕೆ ಪ್ರವೇಶಿಸಿ ರೀಲ್ ಚಿತ್ರೀಕರಿಸಿದ್ದಾರೆ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಗುರುವಾಯೂರು ದೇವಾಲಯದ ಪವಿತ್ರ ಕೊಳದಲ್ಲಿ ರೀಲ್ಸ್! ಭುಗಿಲೆದ್ದ ವಿವಾದ

Priyanka P Priyanka P Aug 26, 2025 4:04 PM

ಗುರುವಾಯೂರು: ಕೇರಳದ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದಲ್ಲಿ (Guruvayur Sree Krishna Temple) ಹಿಂದೂಯೇತರ ವ್ಲಾಗರ್ ಜಾಸ್ಮಿನ್ ಜಾಫರ್ (Jasmin Jaffer) ದೇವಾಲಯದ ಕೊಳಕ್ಕೆ ಪ್ರವೇಶಿಸಿ ರೀಲ್ ಚಿತ್ರೀಕರಿಸಿದ ನಂತರ ದೇವಸ್ಥಾನದಲ್ಲಿ ಶುದ್ಧೀಕರಣ ವಿಧಿಗಳನ್ನು ನಡೆಸಲಾಯಿತು. ಅಲ್ಲದೆ ಜಾಸ್ಮಿನ್ ವಿರುದ್ಧ ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಮಂಗಳವಾರ ಸಂಜೆ 5 ಗಂಟೆಯ ನಂತರ ಮಾತ್ರ ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ದೇವಾಲಯದ ಗರ್ಭಗುಡಿ ತೆರೆಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನವು ಕೇರಳದ ಗುರುವಾಯೂರು ಎಂಬ ಸಣ್ಣ ಪಟ್ಟಣದಲ್ಲಿರುವ ಭಗವಾನ್ ಗುರುವಾಯೂರಪ್ಪ (ಕೃಷ್ಣ) ನಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ. ಬಿಗ್ ಬಾಸ್ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿ (social media influencer) ಜಾಸ್ಮಿನ್ ಜಾಫರ್ ಆರು ದಿನಗಳ ಹಿಂದೆ ಕೊಳದಲ್ಲಿ ತನ್ನ ಪಾದಗಳನ್ನು ತೊಳೆಯುವ ರೀಲ್ ಅನ್ನು ಚಿತ್ರೀಕರಿಸಿದ್ದರು. ಅಧಿಕಾರಿಗಳ ಪ್ರಕಾರ, ಇದು ದೇವಾಲಯದ ಆಚರಣೆಗಳನ್ನು ಉಲ್ಲಂಘಿಸಿದೆ. ಹಿಂದೂಯೇತರರಿಗೆ ದೇವಾಲಯಕ್ಕೆ ಪ್ರವೇಶವಿಲ್ಲ.

ದೇವಾಲಯದ ಅಧಿಕಾರಿಗಳ ಪ್ರಕಾರ, ಅರ್ಚಕರು ದೇವಾಲಯವನ್ನು ಪ್ರವೇಶಿಸುವ ಮೊದಲು ಈ ಕೊಳವನ್ನು ಬಳಸುತ್ತಾರೆ. ಈ ಆಚರಣೆಗಳು ಆರು ದಿನಗಳ ಪೂಜೆಯನ್ನು ಒಳಗೊಂಡಿರುತ್ತವೆ. ಇದರಲ್ಲಿ 18 ಪೂಜೆಗಳು ಮತ್ತು 18 ಶೀವೇಲಿಗಳು ಇರುತ್ತವೆ.

ಇದನ್ನೂ ಓದಿ: Viral Video: ಗಣೇಶ ಮೂರ್ತಿಯ ತೋಳಿನ ಮೇಲೆ ಶಾಂತವಾಗಿ ನಿದ್ದೆ ಮಾಡಿದ ಬೆಕ್ಕು; ವಿಡಿಯೊ ವೈರಲ್

ದೇವಾಲಯದ ಕೊಳದಲ್ಲಿ ರೀಲ್‌ಗಳನ್ನು ಚಿತ್ರೀಕರಿಸಿದ್ದಕ್ಕಾಗಿ ದೇವಸ್ವಂ ಅವರ ವಿರುದ್ಧ ಗುರುವಾಯೂರು ದೇವಾಲಯ ಪೊಲೀಸರಿಗೆ ದೂರು ನೀಡಲಾಗಿದೆ. ಕೊಳದ ಪಾವಿತ್ರ್ಯದ ಉಲ್ಲಂಘನೆ ಮತ್ತು ದೇವಾಲಯದ ನಿರ್ಬಂಧಿತ ವಲಯಗಳಲ್ಲಿ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿ ನಿಷೇಧದ ಕುರಿತು ಹೈಕೋರ್ಟ್‌ನ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ನ್ಯಾಯಾಲಯದ ನಿರ್ದೇಶನದ ಪ್ರಕಾರ, ಈ ಕುರಿತು ಪ್ರಕರಣ ದಾಖಲಿಸುವುದಾಗಿ ಪೊಲೀಸರು ತಿಳಿಸಿದರು. ಗುರುವಾಯೂರು ದೇವಾಲಯದ ಆವರಣದಲ್ಲಿ ಚಿತ್ರೀಕರಣಕ್ಕೆ ನಿರ್ಬಂಧವಿದೆ. ಇನ್ನು ಜಾಸ್ಮಿನ್ ಜಾಫರ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ರೀಲ್ ಅನ್ನು ಡಿಲೀಟ್ ಮಾಡಲಾಗಿದೆ. ಹಾಗೆಯೇ ಜನರಲ್ಲಿ ಕ್ಷಮೆಯಾಚಿಸಿದ್ದಾರೆ. ದೇವಾಲಯದ ಆವರಣದಲ್ಲಿನ ನಿರ್ಬಂಧಗಳ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.