ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತೀಯ ಚಾಲಕನ ಸೇವೆಗೂ ವೈಯಕ್ತಿಕವಾಗಿ ಧನ್ಯವಾದ ತಿಳಿಸಿದ ಅಬುಧಾಭಿ ಯುವರಾಜ ಶೇಖ್ ಖಾಲಿದ್: ಸರಳತೆಗೆ ನೆಟ್ಟಿಗರು ಫಿದಾ!

Viral Video: ಭಾರತಕ್ಕೆ ಭೇಟಿ ನೀಡಿದ ಅಬುಧಾಬಿ ಯುವರಾಜ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ಸರಳತೆ ಸಾರುವ ವಿಡಿಯೊವೊಂದು ಭಾರೀ ವೈರಲ್ ಆಗುತ್ತಿದೆ. ತಮ್ಮ ಭಾರತ ಪ್ರವಾಸವನ್ನು ಮುಗಿಸಿ ವಿಮಾನ ಏರಲು ಸಜ್ಜಾಗುತ್ತಿದ್ದಾಗ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದಲ್ಲದೆ ವಾಹನ ಚಾಲಕನಿಗೂ ವೈಯಕ್ತಿಕವಾಗಿ ಶುಭ ಹಾರೈಸಿದ್ದಾರೆ.

ಭಾರತೀಯ ಚಾಲಕನಿಗೆ ಶುಭಹಾರೈಸಿದ ಅಬುಧಾಭಿ ಯುವರಾಜ ಶೇಖ್ ಖಾಲಿದ್

ನವದೆಹಲಿ,ಸೆ.14: ಭಾರತಕ್ಕೆ ಭೇಟಿ ನೀಡಿದ ಅಬುಧಾಬಿ ಯುವರಾಜ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ಸರಳತೆ ಸಾರುವ ವಿಡಿಯೊವೊಂದು ಭಾರೀ ವೈರಲ್ (Viral News) ಆಗುತ್ತಿದೆ. ತಮ್ಮ ಭಾರತ ಪ್ರವಾಸವನ್ನು ಮುಗಿಸಿ ವಿಮಾನ ಏರಲು ಸಜ್ಜಾಗುತ್ತಿದ್ದಾಗ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದಲ್ಲದೆ ವಾಹನ ಚಾಲಕನಿಗೂ ವೈಯಕ್ತಿಕವಾಗಿ ಶುಭ ಹಾರೈಸಿದ್ದಾರೆ. ಈ ದೃಶ್ಯ ನೆಟ್ಟಿಗರ ಮನಗೆದ್ದಿದ್ದು ಅವರ ಸರಳತೆ ಬಗ್ಗೆ ಕೊಂಡಾಡಿದ್ದಾರೆ.

ದೆಹಲಿಯಲ್ಲಿ ನಡೆದ ಬ್ರಿಕ್ಸ್ (BRICS) ಶೃಂಗಸಭೆ 2026 ರಲ್ಲಿ ಯುಎಇ ಪರವಾಗಿ ಅಬುಧಾಬಿ ಯುವರಾಜ ಶೇಖ್ ಖಾಲಿದ್ ಬಿನ್ ಅವರು ಭಾಗವಹಿಸಿದ್ದರು. ಈ ಸಭೆಯಲ್ಲಿ ಆರ್ಥಿಕ ಸಹಕಾರ, ಇಂಧನ ಪರಿವರ್ತನೆ, ಭಾರತ ಮತ್ತು ಯುಎಇ (UAE) ನಡುವಿನ ಸುದೀರ್ಘ ಸಂಬಂಧ ಬೆಳೆಸುವತ್ತ ಪ್ರಧಾನಿ ಜೊತೆಗೆ ಮಾತ ಕತೆ ನಡೆಸಿದ್ದಾರೆ. ಈ ನಡುವೆ ಅವರು ತೋರಿದ ಹೃದಯಸ್ಪರ್ಶಿ ದೃಶ್ಯವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಡಿಯೋ ನೋಡಿ:



ಶೇಖ್ ಖಲೀದ್ ಅವರ ಭಾರತ ಭೇಟಿಯ ಕೊನೆಯಲ್ಲಿ ಈ ಕ್ಷಣ ಸೆರೆಯಾಗಿದೆ. ಶೇಖ್ ಖಲೀದ್ ತಮಗೆ ಮತ್ತು ಯುಎಇ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ‌. ಭಾರತದ ನಿರಂತರ ಪ್ರಗತಿ ಮತ್ತು ಸಮೃದ್ಧಿಗಾಗಿ ಶುಭಾಶಯಗಳನ್ನು ಸಹ ಕೋರಿದರು.

ಅದೇ ರೀತಿ ಭಾರತದ ಪ್ರಯಾಣದುದ್ದಕ್ಕೂ ಚಾಲಕನಾಗಿ ಸೇವೆ ಸಲ್ಲಿಸಿದ್ದ ವ್ಯಕ್ತಿಗೂ ಧನ್ಯವಾದ ತಿಳಿಸಿದ್ದಾರೆ‌. ಚಾಲಕನ ಬಳಿಗೆ ವೈಯಕ್ತಿಕವಾಗಿ ತೆರಳಿ ಅವರ ಸೇವೆಗೆ ಶ್ಲಾಘನೆ ವ್ಯಕ್ತ ಪಡಿಸಿ ಹ್ಯಾಂಡ್ ಶೇಖ್ ಕೊಟ್ಟು ಹೆಗಲ ಮೇಲೆ ಕೈಯಿಟ್ಟು ಶುಭ ಹಾರೈಕೆ ನೀಡಿದ್ದಾರೆ. ಅವರು ತಮ್ಮ ಪ್ರವಾಸ ಮುಗಿಸಿ ಹಿಂತಿರುಗುವಾಗ ತೋರಿದ ಸರಳತೆ ಮತ್ತು ಗೌರವದ ನಡೆ ಈಗ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಅಂತಾರಾಷ್ಟ್ರೀಯ ಮಟ್ಟದ ಅಧಿಕಾರಿಗಳು ಸೇರಿರುವ ಸಭೆಯಾದರೂ ಚಾಲಕನ ಸೇವೆಯನ್ನು ಸ್ಮರಿಸಿದ್ದಕ್ಕಾಗಿ ಅವರ ನಡೆ ವಿರುದ್ಧ ಎಲ್ಲರೂ ಕೊಂಡಾಡಿದ್ದಾರೆ.​ ಅವರ ಈ ವ್ಯಕ್ತಿತ್ವ ಝಾಯೆದ್ ಆಡಳಿತ ಶೈಲಿಯ ಗೌರವ, ವಿನಯ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸಿದೆ.