ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ʼಡಸ್ಟಿಂಗ್ʼ ಚಾಲೆಂಜ್ ಟ್ರೆಂಡ್ ಆಗಿದೆ. ಇದು ಕೆಮಿಕಲ್‌ಗಳನ್ನು ಉಸಿರಾಡುವ ಒಂದು ಸವಾಲಾಗಿದ್ದು, ಇದರಿಂದ ಅನೇಕರು ತಮ್ಮ ಜೀವಕ್ಕೆ ಕುತ್ತು ತಂದುಕೊಂಡಿದ್ದಾರೆ. ಇದೀಗ ಅರಿಜೋನಾದ 19 ವರ್ಷದ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ಈ ಅಪಾಯಕಾರಿ ಚಾಲೆಂಜ್ ಅನ್ನು ಪ್ರಯತ್ನಿಸಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾಳೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನ ವ್ಯೂವ್ಸ್ ಮತ್ತು ವೈರಲ್ ಆಗುವ ಗೀಳಿಗೆ ಬಿದ್ದು ಕೆಲವರು ಈ ಕೀಬೋರ್ಡ್ ಶುಚಿಗೊಳಿಸುವ ಸ್ಪ್ರೇ ಅನ್ನು ಉಸಿರಾಡುವ ಚಾಲೆಂಜ್ ಸ್ವೀಕರಿಸುತ್ತಾರೆ.
ಈ ಸವಾಲನ್ನು ಸ್ವೀಕರಿಸಿದ ಅರಿಜೋನಾದ 19 ವರ್ಷದ ರೆನ್ನಾ ಒ'ರೂರ್ಕ್ ಹೃದಯಾಘಾತಕ್ಕೆ ಒಳಗಾಗಿದ್ದಾಳೆ. ತಕ್ಷಣ ಆಕೆಯ ಪೋಷಕರು ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಸುಮಾರು ಒಂದು ವಾರ ಕೋಮಾದಲ್ಲಿಯೇ ಇದ್ದಳು. ನಂತರ ಆಕೆಯ ಬ್ರೈನ್ ಡೆಡ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ವಿಚಾರವನ್ನು ರೆನ್ನಾ ಒ'ರೂರ್ಕ್ ಅವಳ ಪೋಷಕರು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಂತಹ ಮಾರಕ ಸೋಶಿಯಲ್ ಮೀಡಿಯಾ ಚಾಲೆಂಜ್‍ಗಳ ಬಗ್ಗೆ ಪೋಷಕರು ಹೆಚ್ಚು ಎಚ್ಚರಿಕೆ ವಹಿಸಬೇಕೆಂದು ಅವರು ಶಾಲೆ ಮತ್ತು ಸಮುದಾಯಗಳನ್ನು ಒತ್ತಾಯಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಪ್ರಿಯಕರನ ಜೊತೆ ಚಕ್ಕಂದವಾಡುತ್ತಿದ್ದಾಗ ಎಂಟ್ರಿ ಕೊಟ್ಟೇ ಬಿಟ್ಟ ಗಂಡ! ಆಮೇಲೆ ನಡೆದಿದ್ದೇ ಬೇರೆ
ʼಡಸ್ಟಿಂಗ್ʼ ಚಾಲೆಂಜ್ ಅತ್ಯಂತ ಅಪಾಯಕಾರಿ ಎಂದು ಅರಿಜೋನಾದ ಡಾ. ರಾಂಡಿ ವೈಸ್ಮನ್ ಎಚ್ಚರಿಸಿದ್ದಾರೆ. ಕೀಬೋರ್ಡ್ ಕ್ಲೀನ್ ಮಾಡುವಂತಹ ಸ್ಪ್ರೇಗಳನ್ನು ಉಸಿರಾಡುವುದರಿಂದ ಶ್ವಾಸಕೋಶ ಮತ್ತು ರಕ್ತಪ್ರವಾಹದಲ್ಲಿನ ಆಮ್ಲಜನಕದ ಮಟ್ಟ ಕಡಿಮೆಯಾಗುತ್ತದೆ ಮತ್ತು ಇದರಿಂದ ಪ್ರಮುಖ ಅಂಗಗಳಿಗೆ ಆಮ್ಲಜನಕ ಸರಿಯಾಗಿ ಸಿಗದೆ ಸಮಸ್ಯೆ ಉಂಟಾಗುತ್ತದೆ. ಇದು ಯಕೃತ್ತು ವೈಫಲ್ಯ, ಹೃದಯ ವೈಫಲ್ಯ ಮತ್ತು ಗಂಭೀರ ಶ್ವಾಸಕೋಶದ ಹಾನಿಗೆ ಕಾರಣವಾಗಬಹುದು ಎಂದು ಡಾ. ವೈಸ್ಮನ್ ಹೇಳಿದ್ದಾರೆ. ಈ ಘಟನೆ ರೆನ್ನಾ ಒ'ರೂರ್ಕ್ ಜೀವವನ್ನು ತೆಗೆದಿದ್ದು ಮಾತ್ರವಲ್ಲ ಅದೇ ಚಾಲೆಂಜ್ ಸ್ವೀಕರಿಸಿದ ಇತರ ಹದಿಹರೆಯದವರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.