ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇವರು ಗೆಳೆಯರಲ್ಲ...; ಹುಟ್ಟುಹಬ್ಬದ ಆಚರಣೆಗೆಂದು ಕರೆದು ಬೆಂಕಿ ಹಚ್ಚಿದ ಐವರು ಆರೋಪಿಗಳ ಬಂಧನ

Viral News: ಬರ್ತಡೇ ಪಾರ್ಟಿಗಾಗಿ ಯುವಕನೊಬ್ಬನನ್ನು ಕರೆಸಿಕೊಂಡು ಬಳಿಕ ಆತನನ್ನು ಗೆಳೆಯರೆಲ್ಲ ಒಟ್ಟಾಗಿ ಸೇರಿ ಹತ್ಯೆ ಮಾಡಲು ಮುಂದಾದ ಘಟನೆ ಮಹಾರಾಷ್ಟ್ರದ ಕುರ್ಲಾದಲ್ಲಿ ನಡೆದಿದೆ. 21 ವರ್ಷದ ಯುವಕನ ಹುಟ್ಟುಹಬ್ಬದಂದು ಆತನ ಫ್ರೆಂಡ್ಸ್ ಸರ್‌ಪ್ರೈಸ್‌ ಪಾರ್ಟಿಗೆ ಬರುವಂತೆ ಹೇಳಿದ್ದಾರೆ. ಹೀಗಾಗಿ ಆತ ಸ್ನೇಹಿತರು ತಿಳಿಸಿದ್ದ ಸ್ಥಳಕ್ಕೆ ತೆರಳಿದ್ದಾನೆ. ಅಲ್ಲಿಗೆ ಕರೆಸಿಕೊಂಡ ನಂತರ ಆತನ ಐವರು ಗೆಳೆಯರು ಒಟ್ಟಾಗಿ ಸೇರಿ ಬೆಂಕಿ ಹಚ್ಚಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂಇದೆ.

ಸಾಂದರ್ಭಿಕ ಚಿತ್ರ

ಮುಂಬೈ, ನ. 26: ಬರ್ತ್‌ಡೇ ಪಾರ್ಟಿಗಾಗಿ ಯುವಕನೊಬ್ಬನನ್ನು ಕರೆಸಿಕೊಂಡು ಬಳಿಕ ಆತನನ್ನೇ ಗೆಳೆಯರೆಲ್ಲ ಒಟ್ಟಾಗಿ ಸೇರಿ ಹತ್ಯೆ ಮಾಡಲು ಮುಂದಾದ ಘಟನೆ ಮಹಾರಾಷ್ಟ್ರದ ಕುರ್ಲಾದಲ್ಲಿ ನಡೆದಿದೆ. 21 ವರ್ಷದ ಯುವಕ ಅಬುಲ್ ರೆಹಮಾನ್ ಮಕ್ಸುದ್ ಆಲಂ ಖಾನ್ ಹುಟ್ಟುಹಬ್ಬ ಇತ್ತು. ಅಂದು ಆತನ ಫ್ರೆಂಡ್ಸ್ ಸರ್ಪ್ರೈಸ್‌ ಪಾರ್ಟಿಗೆ ಬರುವಂತೆ ಹೇಳಿದ್ದರು. ಹೀಗಾಗಿ ಸ್ನೇಹಿತರು ತಿಳಿಸಿದ್ದ ಸ್ಥಳಕ್ಕೆ ತೆರಳಿದ್ದ. ಆತನನ್ನು ಅಲ್ಲಿಗೆ ಕರೆಸಿಕೊಂಡ ನಂತರ ಐವರು ಗೆಳೆಯರು ಒಟ್ಟಾಗಿ ಸೇರಿ ಬೆಂಕಿ ಹಚ್ಚಲು ಮುಂದಾಗಿದ್ದರು. ವೈಯಕ್ತಿಕ ದ್ವೇಷದ ಕಾರಣಕ್ಕೆ ಈ ಕೃತ್ಯ ನಡೆದಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಸದ್ಯ ಈ ಸುದ್ದಿ ಸೋಶಿಯಲ್ ‌ಮಿಡಿಯಾದಲ್ಲಿ ಸಂಚಲನ ಉಂಟು ಮಾಡಿದೆ.

ಹುಟ್ಟುಹಬ್ಬ ಸಂಭದ್ರಮದಲ್ಲಿದ್ದ ಅಬುಲ್ ರೆಹಮಾನ್ ಮಕ್ಸುದ್ ಆಲಂ ಖಾನ್‌ನನ್ನು ಆತನ ಗೆಳೆಯರೇ ಕರೆದಿದ್ದರು. ಆತನ ಸ್ನೇಹಿತರಾದ ಅಯಾಜ್ ಮಲಿಕ್, ಅಶ್ರಫ್ ಮಲಿಕ್, ಖಾಸಿಂ ಚೌಧರಿ, ಹುಜೈಫಾ ಖಾನ್ ಮತ್ತು ಷರೀಫ್ ಶೇಖ್ ಎಂಬವರು ಕೇಕ್ ಕಟ್ ಮಾಡಲು ಬರುವಂತೆ ಆಹ್ವಾನಿಸಿದ್ದರು.

ಅಬುಲ್ ತನ್ನ ಸ್ನೇಹಿತರು ತಿಳಿಸಿದ್ದ ಸ್ಥಳಕ್ಕೆ ಬಂದು ಕರೆ ಮಾಡಿದ್ದ. ಅಲ್ಲಿಗೆ ಬಂದ ಆತನ ಸ್ನೇಹಿತರು ಅಬುಲ್‌ನನ್ನು ಕರೆದುಕೊಂಡು ಹೋಗಿ ಕೇಕ್ ಕಟ್ ಮಾಡಿಸಿದರು. ಅದಾಗಿ ತತ್‌ಕ್ಷಣ ಆತನ ಮೇಲೆ ಕಲ್ಲು ಮತ್ತು ಮೊಟ್ಟೆ ಎಸೆಯಲು ಪ್ರಾರಂಭಿಸಿದರು. ಅನಂತರ ಅಯಾಜ್ ತನ್ನ ಬಳಿ ಇದ್ದ ಪೆಟ್ರೋಲ್ (Petrol) ಅನ್ನು ಅಬುಲ್ ಮೇಲೆ ಸುರಿಯಲು ಪ್ರಾರಂಭಿಸಿದ್ದ. ಅಬುಲ್ ಪೆಟ್ರೋಲ್ ವಾಸನೆ ಬಂದ ಕೂಡಲೇ ಅವರಿಂದ ತಪ್ಪಿಸಿಕೊಳ್ಳಲು ಅಲ್ಲಿಂದ ಓಡಲು ಮುಂದಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಾಕಿಂಗ್ ತೆರಳಿದ್ದ ಮಾಜಿ ಶಾಸಕಿ ಮೇಲೆ ಏಕಾಏಕಿಯಾಗಿ ಹರಿದ ಕಾರು

ಆ ವೇಳೆ ಇತರ ಸ್ನೇಹಿತರು ಆತನನ್ನು ಹಿಡಿದಿದ್ದರು. ಅಶ್ರಫ್ ಎಂಬಾತನು ಲೈಟರ್‌ನಿಂದ ಅಬುಲ್‌ಗೆ ಬೆಂಕಿ ಹಚ್ಚಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬೆಂಕಿ ಬಿದ್ದ ಕೂಡಲೇ ಅಬುಲ್ ಸಹಾಯಕ್ಕಾಗಿ ಕೂಗಲು ಪ್ರಾರಂಭಿಸಿದ. ತಕ್ಷಣ ಬೆಂಕಿ ಹಚ್ಚಿದ ಸ್ನೇಹಿತರು ಅಲ್ಲಿಂದ ಓಡಿ ಹೋದರು. ಬಳಿಕ ಅಬುಲ್ ಬೆಂಕಿ ಹತ್ತಿಕೊಂಡಿದ್ದ ಶರ್ಟ್‌ ಬಿಚ್ಚಿ ದೂರ ಎಸೆದ. ಬಳಿಕ ನಲ್ಲಿಯೊಂದರ ಸಹಾಯದಿಂದ ಮೈಗೆ ಹತ್ತಿದ್ದ ಬೆಂಕಿ ನಂದಿಸಿ ಅಪಾಯದಿಂದ ಪಾರಾದ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ.

ಅಬುಲ್ ತಲೆ, ಕಿವಿ, ಎದೆ, ಕೈ ಭಾಗಗಳಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಕುರ್ಲಾದ ಬಾಬಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ನರಹತ್ಯೆ ಯತ್ನಕ್ಕಾಗಿ ಸೆಕ್ಷನ್ 110ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಂಬೈ ಪೊಲೀಸರು ಇದುವರೆಗೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಇದನ್ನು ತಮಾಷೆಗಾಗಿ ಮಾಡಿದ್ದು ಎಂದು ಹೇಳಿಕೆ ನೀಡಿದ್ದರು‌. ಬಳಿಕ ಮತ್ತಷ್ಟು ತನಿಖೆ ಮಾಡಿದಾಗ ವೈಯಕ್ತಿಕ ದ್ವೇಷಕ್ಕೆ ಹೀಗೆ ಮಾಡಿದ್ದಾಗಿ ಒಪ್ಪೊಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಹೆಚ್ಚಿನ ತನಿಖೆ ನಡೆಯುತ್ತಿರುವುದಾಗಿ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.