ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಸ್ತೆಯಲ್ಲಿ ಕಸ ಎಸೆಯುವವರೇ ಹುಶಾರ್‌! AIಕ್ಯಾಮೆರಾ ನೀಡುತ್ತೆ ತಕ್ಷಣದ ಸಂದೇಶ

Viral News: ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ಸಮಸ್ಯೆಯನ್ನು ನಿಭಾಯಿಸಲು ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಮುಂಬೈನಲ್ಲಿ ಕೃತಕ ಬುದ್ಧಿಮತ್ತೆ ಕ್ಯಾಮೆರಾಗಳನ್ನು ಅಳವಡಿಸಿದೆ. ಈ ಸ್ಮಾರ್ಟ್ ಕಣ್ಗಾವಲು ವ್ಯವಸ್ಥೆಯು ಕಸ ಎಸೆದ ವ್ಯಕ್ತಿಯನ್ನು ಪತ್ತೆಹಚ್ಚಿ ಧ್ವನಿವರ್ಧಕದ ಮೂಲಕ ತಕ್ಷಣದ ಆಡಿಯೊ ಎಚ್ಚರಿಕೆಯನ್ನು ನೀಡುತ್ತದೆ‌

ಮುಂಬೈನಲ್ಲಿ ಕಸ ಎಸೆಯುವ ಅನಾಗರಿಕರನ್ನು ಹಿಡಿಯಲು AI ಕ್ಯಾಮೆರಾ

ಮುಂಬೈ,ಅ.30: ಇತ್ತೀಚೆಗೆ ಜನರಲ್ಲಿ ನಾಗರಿಕ ಪ್ರಜ್ಞೆಯ ಕೊರತೆ ಅನ್ನೋದು ಕಾಡುತ್ತಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಎಸೆದು ಪರಿಸರವನ್ನು ಹಾನಿಗೊಳಿಸುತ್ತಿದ್ದಾರೆ. ಈ ಬಗ್ಗೆ ಅರಿವು ಮೂಡಿಸಿದರೂ ಜನ ಸ್ವಚ್ಚತೆ ಪಾಲಿಸುತ್ತಿಲ್ಲ. ಇದಕ್ಕಾಗಿ  ಮುಂಬೈನ ಮಹಾನಗರ ಪಾಲಿಕೆ (Mumbai Video) ಹೊಸ ತಂತ್ರವನ್ನು ಅಳವಡಿಸಿಕೊಂಡಿದೆ. ನಗರದ ಮಹೀಮ್ ಭಾಗದ 'ಗಜಾನನ್ ವಾಟಿಕಾ' ಎಂಬ ಪ್ರದೇಶದಲ್ಲಿ ಕೃತಕ ಬುದ್ಧಿಮತ್ತೆ  ಹೊಂದಿರುವ ಕ್ಯಾಮೆರಾಗಳನ್ನು ಅಳವಡಿಸಿದ್ದು ಕಸ ಎಸೆಯುವವರನ್ನು ಅಲ್ಲೆ ಪತ್ತೆ ಮಾಡಲು ಈ ನೂತನ ವ್ಯವಸ್ಥೆ ಜಾರಿ ಮಾಡಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ಸಮಸ್ಯೆಯನ್ನು ನಿಭಾಯಿಸಲು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಮುಂಬೈನಲ್ಲಿ ಕೃತಕ ಬುದ್ಧಿಮತ್ತೆ ಕ್ಯಾಮೆರಾಗಳನ್ನು ಅಳವಡಿಸಿದೆ. ಈ ಸ್ಮಾರ್ಟ್ ಕಣ್ಗಾವಲು ವ್ಯವಸ್ಥೆಯು ಕಸ ಎಸೆದ ವ್ಯಕ್ತಿಯನ್ನು ಪತ್ತೆಹಚ್ಚಿ ಧ್ವನಿವರ್ಧಕದ ಮೂಲಕ ತಕ್ಷಣದ ಆಡಿಯೊ ಎಚ್ಚರಿಕೆಯನ್ನು ನೀಡುತ್ತದೆ‌.

ವಿಡಿಯೋ ನೋಡಿ:



ಈ ಎಐ ಕ್ಯಾಮೆರಾ ಅವರ ಚಲನವಲನಗಳನ್ನು ಕೂಡಲೇ ಪತ್ತೆ ಮಾಡುತ್ತದೆ. ಅಲ್ಲೇ ಇರುವ ಧ್ವನಿವರ್ಧಕದ ಮೂಲಕ "ಇಲ್ಲಿ ಕಸ ಚೆಲ್ಲಬೇಡಿ, ಸ್ವಚ್ಛತೆ ಕಾಪಾಡಿ" ಎಂದು ಧ್ವನಿಯ ಮೂಲಕ ಎಚ್ಚರಿಕೆಯನ್ನು ನೀಡುತ್ತದೆ. ಈ ಪ್ರಯೋಗ ಯಶಸ್ವಿಯಾದರೆ  ಮುಂಬೈನಾದ್ಯಂತ ಹೆಚ್ಚು ಕಸ ಬೀಳುವ ಇತರ ಪ್ರದೇಶಗಳಿಗೂ ಇಂತಹ ಕ್ಯಾಮೆರಾಗಳನ್ನು ಅಳವಡಿಸಲು ಬಿಎಂಸಿ ಯೋಜನೆ ರೂಪಿಸಿದೆ.

Viral Video: ಈ ಟ್ಯಾಕ್ಸಿಯಲ್ಲಿದೆ ಮಿನಿ ಮಾರ್ಟ್; ನೀವು ಪ್ರಯಾಣ ಮಾಡ್ತಾ ಉಚಿತ ಶಾಪಿಂಗ್‌ ಕೂಡ ಮಾಡಬಹುದು

ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ನಾಗರಿಕ ಸಮಸ್ಯೆಗಳನ್ನು ಪರಿಹರಿಸಲು ತಂತ್ರಜ್ಞಾನದ ಬಳಕೆಯನ್ನು ಜನ ಸ್ವಾಗತಿಸಿದರು. ಬಳಕೆದಾರರೊಬ್ಬರು ನಾಗರಿಕರು ಸ್ವಚ್ಛತೆಯನ್ನು ಕಾಪಾಡಿ ಕೊಳ್ಳಲು ಪ್ರೋತ್ಸಾಹಿಸಬೇಕು, ಆದರೆ ನಾಗರಿಕ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುವವರು ಸೂಕ್ತ ದಂಡವನ್ನು ಕಟ್ಟಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.