ನವದೆಹಲಿ, ಸೆ. 15: ಎಲ್ಲೆಡೆ ಗೌರಿ-ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಕೆಲಸ, ಕಾಲೇಜ್ ಎಲ್ಲ ಬದಿಗಿಟ್ಟು ಜನರು ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ವಿದೇಶದಲ್ಲೂ ಗಣಪತಿ ಪೂಜೆ ನಡೆದಿದೆ. ಈ ನಡುವೆ ಏರ್ ಇಂಡಿಯಾ (Air India) ವಿಮಾನದ ಕ್ಯಾಬಿನ್ ಸಿಬ್ಬಂದಿ ಅನುರಾಧಾ ಅವರಿಗೆ ಕರ್ತವ್ಯದಲ್ಲಿದ್ದಾಗ ವಿಶೇಷವಾಗಿ ಗಣೇಶ ಹಬ್ಬವೊಂದನ್ನು ಆಚರಿಸಿಕೊಂಡಿದ್ದಾರೆ (Viral News). ವಿಮಾನ ಸಮಯ ಕೊನೆ ಕ್ಷಣದಲ್ಲಿ ಬದಲಾದ ಕಾರಣ ಆ ಸಿಬ್ಬಂದಿಗೆ ತಮ್ಮ ಮನೆಯಲ್ಲಿ ನಡೆಯುವ ಗಣೇಶ ಹಬ್ಬಕ್ಕೆ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಆರಂಭದಲ್ಲಿ, ಮನೆಯಲ್ಲಿ ಆಚರಿಸುವ ಗಣಪತಿ ಪೂಜೆಗೆ ಹಾಜರಾಗಲು ಆಗುತ್ತಿಲ್ಲ ಎಂದು ತುಂಬಾ ದುಃಖಿತರಾಗಿದ್ದರು. ಆದಾಗ್ಯೂ ಗಣಪನ ಆಶೀವಾರ್ದ ಎಂಬಂತೆ ಒಬ್ಬ ಪ್ರಯಾಣಿಕರು ವಿಮಾನದಲ್ಲಿ ಗಣಪತಿ ವಿಗ್ರಹವನ್ನು ತಂದಿದ್ದು ಇದನ್ನು ಕಂಡ ಅನುರಾಧಾ ಹಾಗೂ ಅವರ ಸಹೋದ್ಯೋಗಿ ಸಿಬ್ಬಂದಿ ಆಕಾಶದಲ್ಲೇ ಗಣಪತಿಗೆ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಕೊನೆಯ ನಿಮಿಷದಲ್ಲಿ ಫ್ಲೈಟ್ ವೇಳಾಪಟ್ಟಿ ಬದಲಾಗಿದ್ದರಿಂದ ಮನೆಯಲ್ಲಿ ಗಣಪತಿ ಪೂಜೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಫ್ಲೈಟ್ ಅಟೆಂಡೆಂಟ್ ಅನುರಾಧಾ ಸೋನಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಅವರು ಬಹಳಷ್ಟು ಬೇಸರಗೊಂಡಿದ್ದರು. ಆದಾಗ್ಯೂ, ಕೊನೆಯಲ್ಲಿ ಅಚ್ಚರಿ ಕಾದಿದೆ, ಗಣಪತಿ ಆಶೀರ್ವಾದ ದೊರೆಯುತ್ತದೆ ಎಂದು ಅವರು ಅಂದುಕೊಂಡಿರಲಿಲ್ಲ.
ವಿಡಿಯೊ ನೋಡಿ:
ಗಣಪತಿ ಹಬ್ಬದ ಸಮಯದಲ್ಲಿ ಮನೆಗೆ ಹೋಗಲು ಸಾಧ್ಯವಾಗದಿದ್ದರೂ ವಿಮಾನದಲ್ಲೇ ಭಗವಂತನ ದರ್ಶನ ಪಡೆದ ಬಗ್ಗೆ ಏರ್ ಇಂಡಿಯಾ ಸಿಬ್ಬಂದಿ ಭಾವುಕರಾಗಿದ್ದಾರೆ. ಹಬ್ಬದ ಸಮಯದಲ್ಲಿ ಒಬ್ಬ ಪ್ರಯಾಣಿಕರು ವಿಮಾನಕ್ಕೆ ಗಣಪತಿ ವಿಗ್ರಹವನ್ನು ತಂದಿದ್ದು, ಇದನ್ನು ಕಂಡ ಅನುರಾಧಾ ಹಾಗೂ ಅವರ ಸಹೋದ್ಯೋಗಿಗಳು ಆಕಾಶದಲ್ಲೇ ಗಣಪತಿಗೆ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು.
ಈ ಟ್ಯಾಕ್ಸಿಯಲ್ಲಿದೆ ಮಿನಿ ಮಾರ್ಟ್; ನೀವು ಪ್ರಯಾಣ ಮಾಡ್ತಾ ಶಾಪಿಂಗ್ ಮಾಡಬಹುದು
ಸುಮಾರು 35,000 ಅಡಿ ಎತ್ತರದಲ್ಲಿ ಗಣಪತಿಗೆ ಪೂಜೆಯನ್ನು ಮಾಡಿ, ಪ್ರಾರ್ಥನೆಗಳನ್ನು ಹೇಳಿ ಬಪ್ಪನ ಆಶೀರ್ವಾದವನ್ನು ಪಡೆದಿದ್ದಾರೆ. ಗಣಪತಿ ಎಲ್ಲಿದ್ದರೂ ತನ್ನೊಂದಿಗೆ ಇದ್ದಾನೆ ಎಂದು ಅನಿಸಿತು ಎಂದಿದ್ದಾರೆ. "ಧನ್ಯವಾದಗಳು, ಬಪ್ಪಾ...ಈ ಸುಂದರ ಆಶೀರ್ವಾದ, ಈ ಸುಂದರ ಕ್ಷಣ ಮತ್ತು ಈ ಮರೆಯಲಾಗದ ಅನುಭವಕ್ಕಾಗಿ" ಎಂದು ಅವರು ಬರೆದುಕೊಂಡಿದ್ದಾರೆ.
ವಿಡಿಯೊ ಆರಾಧನಾ ಸೋನಿ ವಿಮಾನದಲ್ಲಿ ವಿಗ್ರಹವನ್ನು ಸ್ವಾಗತಿಸುತ್ತಾ ಪ್ರಾರ್ಥನೆಗಳನ್ನು ಹೇಳುತ್ತಿರುವುದನ್ನು ತೋರಿಸಲಾಗಿದೆ. ಅವರ ಸಹೋದ್ಯೋಗಿಗಳು ಆ ಕ್ಷಣವನ್ನು ಸಂತೋಷದಿಂದ ವೀಕ್ಷಿಸುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊ 6.5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿ ಜನರ ಮನ ಗೆದ್ದಿದೆ.