ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಿಮಾನ ದುರಂತದ ನೋವಿನ್ನೂ ಮಾಸಿಲ್ಲ; ಡಿಜೆ ಪಾರ್ಟಿ ಮಾಡಿ ಕುಣಿದ ಸಿಬ್ಬಂದಿ: ಏನಿದು ವೈರಲ್‌ ಸ್ಟೋರಿ?

ಏರ್‌ ಇಂಡಿಯಾ ವಿಮಾನ AI171 ದುರಂತ ನಡೆದ ಎಂಟು ದಿನಗಳ ನಂತರ ಏರ್ ಇಂಡಿಯಾ SATS (AISATS)ನ ಹಿರಿಯ ಕಾರ್ಯನಿರ್ವಾಹಕರು ಗುರುಗ್ರಾಮ ಕಚೇರಿಯಲ್ಲಿ ಡಿಜೆ ಪಾರ್ಟಿ ಆಯೋಜಿಸಿದ್ದು, ಇದರಲ್ಲಿ ಎಲ್ಲರೂ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಜನರ ಆಕ್ರೋಶಕ್ಕೆ ಗುರಿಯಾಗಿದೆ.

ಚಂಡೀಗಢ: ಅಹಮದಾಬಾದ್‍ನಲ್ಲಿ ನಡೆದ ಏರ್ ಇಂಡಿಯಾ(Air India) ವಿಮಾನ ಅಪಘಾತದಲ್ಲಿ ಸುಮಾರು 270 ಜನರು ಸಾವನ್ನಪ್ಪಿರುವ ಭಯಾನಕ ದುರಂತ ಇನ್ನು ಜನರ ಮನಸ್ಸಿನಿಂದ ಮಾಸಿಲ್ಲ. ಹೀಗಿರುವಾಗ ಏರ್ ಇಂಡಿಯಾ SATS (AISATS)ನ ಹಿರಿಯ ಕಾರ್ಯನಿರ್ವಾಹಕರು ದುರಂತದ ಎಂಟು ದಿನಗಳ ನಂತರ ಗುರುಗ್ರಾಮ ಕಚೇರಿಯಲ್ಲಿ ಡಿಜೆ ಪಾರ್ಟಿ ಆಯೋಜಿಸಿದ್ದು, ಎಲ್ಲರೂ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿದ್ದು, ನೆಟ್ಟಿಗರು ಕಿಡಿಕಾರಿದ್ದಾರೆ.

ಈ ಡಿಜೆ ಪಾರ್ಟಿಯಲ್ಲಿ AISATSನ ಮುಖ್ಯ ಕಾರ್ಯಾಚರಣಾ ಅಧಿಕಾರಿ ಅಬ್ರಹಾಂ ಜಕಾರಿಯಾ, ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸಂಪ್ರೀತ್ ಕೋಟ್ಯಾನ್ ಭಾಗವಹಿಸಿದ್ದರು ಎಂದು ವರದಿಯಾಗಿದೆ. ಇದು AISATS ಬಗ್ಗೆ ಕೇಳಿಬಂದ ವಿವಾದದ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ವಿಡಿಯೊ ಇದೆ ನೋಡಿ...



ಸೋಶಿಯಲ್ ಮಿಡಿಯಾದಲ್ಲಿ ವಿಡಿಯೊ ವೈರಲ್‌ ಆದ ಬಳಿಕ AISATS ಕ್ಷಮೆಯನ್ನೂ ಕೇಳಿದೆ. ತಮ್ಮವರನ್ನು ಕಳೆದುಕೊಂಡ ಕುಟುಂಬಗಳು ಇನ್ನೂ ದುಃಖದಿಂದ ಹೊರಬರದೇ ಒದ್ದಾಡುತ್ತಿರುವಾಗ ಈ ರೀತಿ ಪಾರ್ಟಿ ಮಾಡುವುದು ಸರಿಯಾ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಕೆನಡಾಕ್ಕಿಂತ ಭಾರತ ಬೆಸ್ಟ್ ಎಂದ ಅಲ್ಲಿನ ಕಂಟೆಂಟ್ ಕ್ರಿಯೇಟರ್; ಕಾರಣವೇನು ಗೊತ್ತಾ?

ಜೂನ್ 12ರಂದು ಏರ್ ಇಂಡಿಯಾ ವಿಮಾನ AI171 ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಸಂಭವಿಸಿದ ಅಪಘಾತದಲ್ಲಿ ಅಹಮದಾಬಾದ್‌ನ ಜನನಿಬಿಡ ಪ್ರದೇಶದಲ್ಲಿನ ಹಾಸ್ಟೆಲ್ ಕಟ್ಟಡದ ಮೇಲೆ ಸ್ಫೋಟಗೊಂಡಿತ್ತು. ವಿಮಾನದಲ್ಲಿದ್ದ 242 ಮಂದಿಯ ಪೈಕಿ 241 ಜನರು ಮೃತಪಟ್ಟಿದ್ದರು. ಜತೆಗೆ ಹಾಸ್ಟೆಲ್‍ನಲ್ಲಿದ್ದ ಹಲವರು ಅಸುನೀಗಿದ್ದಾರೆ.