ರಿಚ್ಮಂಡ್: ವರ್ಜೀನಿಯಾದ ಫೇರ್‌ಫ್ಯಾಕ್ಸ್ ಕೌಂಟಿಯಲ್ಲಿರುವ ಮೋಟೆಲ್(Motel)ಕೋಣೆಯ ಹೊರಗೆ 6 ಅಡಿ ಉದ್ದದ ಮೊಸಳೆಯೊಂದು ಆರಾಮಾಗಿ ಅಡ್ಡಾಡುತ್ತಿರುವಂತಹ ಆಘಾತಕಾರಿ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮೊಸಳೆ(Alligator)ಯನ್ನು ನೋಡಿ ಸ್ಥಳೀಯರು ಕೂಡ ಬೆಚ್ಚಿಬಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವೈರಲ್(Viral Video) ಆದ ವಿಡಿಯೊದಲ್ಲಿ ಮೊಸಳೆಯು ಮೋಟೆಲ್ ಕೊಠಡಿ ಮತ್ತು ಲಾಬಿಯ ಹೊರಗೆ ಅಡ್ಡಾಡುವುದನ್ನು ಸೆರೆಹಿಡಿಯಲಾಗಿದೆ. ಬೃಹದಾಕಾರದ ಮೊಸಳೆಯನ್ನು ನೋಡಿ ನೆಟ್ಟಿಗರು ಕೂಡ ಶಾಕ್ ಆಗಿದ್ದಾರೆ.
ವರದಿ ಪ್ರಕಾರ,ಮೊಸಳೆಯನ್ನು ನ್ಯೂಯಾರ್ಕ್‌ನಿಂದ ಉತ್ತರ ಕೆರೊಲಿನಾದ ಮೃಗಾಲಯಕ್ಕೆ ಸಾಗಿಸುತ್ತಿದ್ದಾಗ ಅದು ಮಾಲೀಕರಿಂದ ತಪ್ಪಿಸಿಕೊಂಡಿತಂತೆ. ಈ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ ಮತ್ತು ಮೊಸಳೆಯನ್ನು ಹಿಡಿದು ಅದನ್ನು ಸಂಬಂಧಪಟ್ಟ ಮಾಲೀಕರಿಗೆ ನೀಡಲಾಯಿತು.
ವಿಡಿಯೊ ಇಲ್ಲಿದೆ ನೋಡಿ...
ಈ ಸುದ್ದಿಯನ್ನೂ ಓದಿ:Viral Video: ಟಿಬೇಟಿಯನ್ ವ್ಯಕ್ತಿಯ ಬಾಯಲ್ಲಿ ಸವಿಗನ್ನಡ! ಕನ್ನಡಿಗರ ವಿಡಿಯೊ ಫುಲ್ ವೈರಲ್
ಕಾಡುಪ್ರಾಣಿಗಳು ಈ ರೀತಿ ನಗರಕ್ಕೆ ನುಗ್ಗಿದ್ದು ಇದೇ ಮೊದಲಲ್ಲ. ಈ ಹಿಂದೆ ನೇಪಾಳದ ಪಟ್ಟಣವೊಂದರಲ್ಲಿ ದೈತ್ಯಾಕಾರದ ಖಡ್ಗಮೃಗವೊಂದು ಮದುವೆ ಮನೆಗೆ ನುಗ್ಗಿತ್ತು. ಈ ಅನಿರೀಕ್ಷಿತ ಅತಿಥಿಯನ್ನು ಕಂಡು ಅಲ್ಲಿದ್ದ ಜನರು ಹೌಹಾರಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅನೇಕ ಜನರು ಈ ಘಟನೆಯ ಬಗ್ಗೆ ತಮಾಷೆ ಮಾಡಿದ್ದರು. ಈ ಖಡ್ಗಮೃಗ ಚಿಟ್ವಾನ್ ರಾಷ್ಟ್ರೀಯ ಉದ್ಯಾನವನದಿಂದ ಪಟ್ಟಣಕ್ಕೆ ಬಂದಿದೆ ಎನ್ನಲಾಗಿದೆ.