ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಾಹ್ಯಾಕಾಶದಿಂದ ಆಕರ್ಷಿಸಿದ ಭೂಮಿಯ ಅದ್ಭುತ ನೋಟಕ್ಕೆ ನೆಟ್ಟಿಗರು ಫಿದಾ!

Viral News: ಗಗನ ಯಾತ್ರಿಗಳು ಚಂದ್ರನ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಸುಮಾರು 50ವರ್ಷಗಳ ಬಳಿಕ ಮಾನವರು ಮತ್ತೆ ಚಂದ್ರನ ಕಡೆ ಪ್ರಯಾಣ ಬೆಳೆಸಿದ್ದಾರೆ. ಈ ನಡುವೆ ಭೂಮಿಯ ಅದ್ಭುತ ಹೈ-ರೆಸ ಲ್ಯೂಶನ್ ಚಿತ್ರವನ್ನು ನಾಸಾ ಇದೀಗ ಹಂಚಿಕೊಂಡಿದೆ . ''ನಮ್ಮ ಭೂಮಿ.. ಇದೇ ನಾವು!" ಎಂಬ ಶೀರ್ಷಿಕೆಯೊಂದಿಗೆ ನಾಸಾ ಫೋಟೋವನ್ನು ಪೋಸ್ಟ್ ಮಾಡಿದೆ...

ಬಾಹ್ಯಾಕಾಶದಿಂದ ಆಕರ್ಷಿಸಿದ ಭೂಮಿಯ ಅದ್ಭುತ ನೋಟ

ನವದೆಹಲಿ,ಎ.4: ಬಾಹ್ಯಾಕಾಶದಿಂದ ಕಂಡ ಭೂಮಿಯ ಅದ್ಭುತ ನೋಟವನ್ನು ಗಗನ ಯಾತ್ರಿಗಳು ಸೆರೆಹಿಡಿದಿದ್ದಾರೆ. ಈ ದೃಶ್ಯವು ಜನರ ಗಮನ ಸೆಳೆದಿದ್ದು ಭೂಮಿಯು ಹೊಳೆಯುವ ನೀಲಿ ಗೋಲಿ ಯಂತೆ ಆಕರ್ಷಿಸುತ್ತಿದೆ. ವೈರಲ್ ಫೋಟೋ (Viral News) ನಮ್ಮ ಗ್ರಹವನ್ನು ಹಿಂದೆಂದೂ ಕಾಣದ ರೀತಿಯಲ್ಲಿ ವಿಭಿನ್ನವಾಗಿ ತೋರಿಸುವಂತಿದೆ. ಗಗನ ಯಾತ್ರಿಗಳು ಚಂದ್ರನ ಕಡೆಗೆ ಪ್ರಯಾಣಿಸುವಾಗ ಸೆರೆಹಿಡಿದ ಭೂಮಿಯ ಅದ್ಭುತ ಹೈ-ರೆಸಲ್ಯೂಶನ್ ಚಿತ್ರವನ್ನು ನಾಸಾ ಇದೀಗ ಶೇರ್ ಮಾಡಿದೆ.

ಗಗನ ಯಾತ್ರಿಗಳು ಚಂದ್ರನ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಸುಮಾರು 50ವರ್ಷಗಳ ಬಳಿಕ ಮಾನವರು ಮತ್ತೆ ಚಂದ್ರನ ಕಡೆ ಪ್ರಯಾಣ ಬೆಳೆಸಿದ್ದಾರೆ. ಈ ನಡುವೆ ಭೂಮಿಯ ಅದ್ಭುತ ಹೈ-ರೆಸಲ್ಯೂಶನ್ ಚಿತ್ರವನ್ನು ನಾಸಾ ಇದೀಗ ಹಂಚಿಕೊಂಡಿದೆ. ನಮ್ಮ ಭೂಮಿ.. ಇದೇ ನಾವು!" ಎಂಬ ಶೀರ್ಷಿಕೆಯೊಂದಿಗೆ ನಾಸಾ ಫೋಟೋವನ್ನು ಪೋಸ್ಟ್ ಮಾಡಿದೆ.

ಅಪೋಲೋ ನಂತರದ ಮೊದಲ ಸಿಬ್ಬಂದಿ ಆರ್ಟೆಮಿಸ್ ಮಿಷನ್ ಇದಾಗಿದ್ದು, 1970 ರ ದಶಕದ ನಂತರ ಭೂಮಿಯಿಂದ ಇಷ್ಟು ದೂರ ಪ್ರಯಾಣಿಸುತ್ತಿರುವಾಗ ಮಾನವರು ತೆಗೆದ ಮೊದಲ ಫೋಟೋ ಗಳಲ್ಲಿ ಇದಾಗಿದೆ. ಚಿತ್ರದಲ್ಲಿ, ಬಾಹ್ಯಾಕಾಶದ ಕಪ್ಪು ಬಣ್ಣಕ್ಕೆ ವಿರುದ್ಧವಾಗಿ ಹೊಳೆಯುವ ನೀಲಿ ಅಮೃತಶಿಲೆಯಂತೆ ಗೋಚರವಾಗುತ್ತದೆ. ಆಫ್ರಿಕಾವು ದೊಡ್ಡ ಭೂಪ್ರದೇಶವಾಗಿ ಸ್ಪಷ್ಟವಾಗಿ ಗೋಚರಿಸುತ್ತದೆ, ಎರಡು ಹೊಳೆಯುವ ಅರೋರಾಗಳು ಬೆಳಕಿನ ಚಿತ್ತಾರದಂತೆ ಕಾಣುತ್ತಿದೆ.

ಭೂಮಿಯ ಮೇಲೆ ಮತ್ತು ಕೆಳಗೆ ಧ್ರುವ ಜ್ಯೋತಿಗಳು ಹೊಳೆಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ‌. ಈ ಪೋಸ್ಟ್ ಈಗಾಗಲೇ 1.5 ಮಿಲಿಯನ್ ವೀಕ್ಷಣೆ, 91K ಲೈಕ್‌ಗಳು, 17K ರಿಪೋಸ್ಟ್‌ಗಳನ್ನು ಮಾಡಿದ್ದಾರೆ. ಕೆಲವು ಬಳಕೆದಾರರು “ಅಲ್ಲಿ ಗೋಚರಿಸುವ ಭೂ ದ್ರವ್ಯರಾಶಿ ಯಾವುದು ಎಂದು ಪ್ರಶ್ನಿಸಿದರು. ಇದಕ್ಕೆ ನಾಸಾ ಪ್ರತಿಕ್ರಿಯೆ ನೀಡಿದ್ದು “ಈ ಚಿತ್ರದಲ್ಲಿರುವ ದೊಡ್ಡ ಭೂ ದ್ರವ್ಯರಾಶಿ ಆಫ್ರಿಕಾ" ಎಂದಿದೆ. ಬಳಕೆದಾರರೊಬ್ಬರು ನಾವು ಇಷ್ಟೊಂದು ಸುಂದರವಾದ ಭೂಮಿಯಲ್ಲಿ ವಾಸಿಸುತ್ತಿದ್ದೇವೆ.. ನಿಜಕ್ಕೂ ಹೆಮ್ಮೆ ಎಂದು ಕಾಮೆಂಟ್ ಮಾಡಿದ್ದಾರೆ.