ನವದೆಹಲಿ, ಜ. 19: ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡುವ ವಿದೇಶಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿನ ಸಂಸ್ಕೃತಿ, ಪ್ರೇಕ್ಷಣೀಯ ಸ್ಥಳ, ಭಾರತೀಯ ಆಹಾರಕ್ಕೆ ವಿದೇಶಿಗರು ಮನ ಸೋಲುತ್ತಿದ್ದಾರೆ. ಬೀದಿ ಬದಿಯ ಆಹಾರಕ್ಕೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಇದೀಗ ಅಮೆರಿಕ ಮೂಲದ ಕಂಟೆಂಟ್ ಕ್ರಿಯೇಟರ್ ಒಬ್ಬರು ಇಲ್ಲಿನ ಮೊಮೊಸ್ ಅನ್ನು ಎಷ್ಟು ಇಷ್ಟಪಡುತ್ತೇನೆ ಎಂಬುದನ್ನು ವಿವರಿಸಿ ವಿಡಿಯೊ ಮಾಡಿದ್ದಾರೆ. ಈ ವಿಡಿಯೊ ಭಾರಿ ವೈರಲ್ (Viral Video) ಆಗಿದೆ. ದೆಹಲಿಯ ಸಾಕೇತ್‌ನಲ್ಲಿ ವಾಸವಾಗಿರುವ ಅಮೆರಿಕ ಮೂಲದ ಕಂಟೆಂಟ್ ಕ್ರಿಯೇಟರ್ ಇತ್ತೀಚೆಗೆ ಇಗ್ನೋ ರಸ್ತೆಯಲ್ಲಿ ಹೋಗುವಾಗ ಅಲ್ಲಿನ ಮೊಮೊಸ್ ಸ್ಟಾಲ್‌ಗಳ ಸುಗಂಧಕ್ಕೆ ಮನಸೋತಿದ್ದಾಗಿ ಹೇಳಿದ್ದಾರೆ.
ಬೇಯಿಸಿದ ಮಾಂಸ ಅಥವಾ ತರಕಾರಿಗಳಿಂದ ತುಂಬಿಸಿ ಮಸಾಲೆಯುಕ್ತ ಚಟ್ನಿಯೊಂದಿಗೆ ಬಡಿಸುವ ಮೋದಕ ಆಕಾರದ ಮೊಮೊಸ್ ಜನಪ್ರಿಯ ಬೀದಿ ಆಹಾರ. ಅವುಗಳ ಪರಿಮಳ, ರುಚಿ ಮತ್ತು ಕಡಿಮೆ ಬೆಲೆ ಎಲ್ಲರನ್ನೂ ಆಕರ್ಷಿಸುತ್ತದೆ. ಈಗ ಮೊಮೊಸ್‌ನ ರುಚಿ ವಿದೇಶಿಗರನ್ನೂ ಆಕರ್ಷಿಸಿದೆ. ದೆಹಲಿಯ ಸಾಕೇತ್‌ನಲ್ಲಿ ವಾಸಿಸುವ ಅಮೆರಿಕ ಮೂಲದ ಕಂಟೆಂಟ್ ಕ್ರಿಯೇಟರ್ ಇತ್ತೀಚೆಗೆ ಇಗ್ನೋ ರಸ್ತೆಯಲ್ಲಿ ಹೋಗುವಾಗ ಅಲ್ಲಿನ ಮೊಮೊಸ್‌ನ ರುಚಿ ನೋಡಿದ್ದಾಗಿ ತಿಳಿಸಿದ್ದಾರೆ.
ವಿಡಿಯೊ ನೋಡಿ:
ವಿಡಿಯೊದಲ್ಲಿ ಅವರು ಇಗ್ನೋ ಬೀದಿಯ ಆಹಾರದ ಬಗ್ಗೆ ಮಾತನಾಡಿದ್ದಾರೆ. ʼʼಇಲ್ಲಿನ ಮೊಮೊಸ್ ಸ್ಟಾಲ್‌ಗಳು ಆಕರ್ಷಕ ಪರಿಮಳಗಳಿಂದ ಸೆಳೆಯುತ್ತವೆ. ಕೆಲವು ಗಂಟೆಗಳ ಹಿಂದೆ ಮೊಮೊಸ್‌ಗಳನ್ನು ತಿಂದ ನಂತರವೂ, ಆ ಘಮಕ್ಕೆ ಮತ್ತೆ ತಿನ್ನಬೇಕು ಎನಿಸುತ್ತಿದೆ. ಇದು ತನಗೆ ಮೊಮೊಸ್ ಶಾಪʼʼ ಎಂದಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ ಈ ವಿಚಾರ ಹಂಚಿಕೊಂಡಿದ್ದು ಇದನ್ನು ಬೇಸರವಿಲ್ಲದೆ ದಿನವಿಡೀ ತಿನ್ನಬಹುದು ಎಂದು ಹೇಳಿದ್ದಾರೆ.
ರ್‌ಪೋರ್ಟ್ ರೋಡ್‌ನಲ್ಲಿ ಮಚ್ಚು ಹಿಡಿದು ವಿಲೀಂಗ್
ಭಾರತದ ಬೀದಿ ಬದಿಯ ಆಹಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇವು ದೇವರಿಗೆ ಸಮಾನ ಎಂದು ಬಣ್ಣಿಸಿದ್ದಾರೆ. ಅಷ್ಟೇ ಅಲ್ಲದೆ, "ನಾನು ಎಷ್ಟು ಮೊಮೊಸ್ ತಿನ್ನುತ್ತಿದ್ದೇನೆ ಎಂದರೆ ನಾನು ಪೂರ್ತಿ ಭಾರತೀಯನಾಗಿ ಬದಲಾಗುತ್ತಿದ್ದೇನೆ ಎಂದು ಎನಿಸುತ್ತಿದೆ. ಕೆಲವು ಗಂಟೆಗಳ ಹಿಂದೆ ಮೊಮೊಸ್ ತಿಂದ ನಂತರವೂ ಮತ್ತೊಮ್ಮೆ ತಿನ್ನಬೇಕು ಅನಿಸಿದೆʼʼ ಎಂದು ವಿವರಿಸಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಭಾರತೀಯ ನೆಟ್ಟಿಗರು ಈ ಅಮೆರಿಕನ್ ಯುವಕನ ಬಗ್ಗೆ ಮೆಚ್ಚುಗೆಯ ಕಮೆಂಟ್ ಮಾಡಿದ್ದಾರೆ. ಅನೇಕರು ದೆಹಲಿಯಲ್ಲಿ ಮೊಮೊಸ್‌ಗಳನ್ನು ಸೇವಿಸಲು ಸೂಕ್ತವಾದ ಇತರ ಜನಪ್ರಿಯ ಸ್ಥಳಗಳನ್ನು ಸೂಚಿಸಿದ್ದಾರೆ. ಬಳಕೆದಾರರೊಬ್ಬರು, ʼʼನೀವು ಭಾರತೀಯ ಆಹಾರವನ್ನು ಇಷ್ಟಪಡುವ ರೀತಿ ನೋಡಿದರೆ ನಿಮಗೆ ಭಾರತದ ಆಧಾರ್ ಕಾರ್ಡ್ ಕೂಡ ಸಿಗಬಹುದುʼʼ ಎಂದಿದ್ದಾರೆ. ಮತ್ತೊಬ್ಬರು "ಚಟ್ನಿಯೊಂದಿಗೆ ಮೊಮೊಸ್ ತಿನ್ನುವುದು ಬಹಳಷ್ಟು ರುಚಿಕರ" ಎಂದು ಹೇಳಿದ್ದಾರೆ.