ಪುಣೆ: ಪುಣೆಯ (Pune) ಕೊಂಧವಾ (Kondhwa) ಪ್ರದೇಶದ ತಿಲೇಕರ್‌ನಗರದ ಶ್ರೀರಾಮ್ ಚೌಕ್ (Shriram Chowk ) ಬಳಿ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ನಡೆದ ಅಪಘಾತದ ಸಂದರ್ಭದಲ್ಲಿ, ಸಹಾಯದ ನೆಪದಲ್ಲಿ ಇಬ್ಬರು ಅಪರಿಚಿತರು ದಂಪತಿಯಿಂದ ₹75,000 ಮೌಲ್ಯದ ಚಿನ್ನದ ಸರವನ್ನು ಕಳವು ಮಾಡಿದ ಘಟನೆ ನಡೆದಿದೆ.
ವರದಿಯ ಪ್ರಕಾರ, 32 ವರ್ಷದ ಸಚಿನ್ ಸಂಜಯ್ ಮಹಾಜನ್ ಮತ್ತು ಅವರ ಪತ್ನಿ ಯೇವಲೇವಾಡಿಯಿಂದ ಮನೆಗೆ ತೆರಳುತ್ತಿದ್ದಾಗ, ರಸ್ತೆಯ ಗುಂಡಿಯಿಂದ ಬೈಕ್ ಮೇಲಿಂದ ಬಿದ್ದಿದ್ದಾರೆ. ಕೊಂಧವಾದಲ್ಲಿ ಅಂಗಡಿ ನಡೆಸುವ ಸಚಿನ್ ಕೆಲ ಕಾಲ ಪ್ರಜ್ಞೆ ಕಳೆದುಕೊಂಡಿದ್ದು, ಅವರ ಪತ್ನಿಯ ಕೈಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ವೇಳೆ ಇಬ್ಬರು ವ್ಯಕ್ತಿಗಳು ಸಹಾಯ ಮಾಡುವವರಂತೆ ಬಂದು, ದಂಪತಿಗೆ ನೆರವು ನೀಡಿದರು. ಬೈಕ್ ಎತ್ತಿ ಸರಿಯಾಗಿ ನಿಲ್ಲಿಸಿದರು. ಈ ಸಹೃದಯ ಕಾರ್ಯಕ್ಕೆ ದಂಪತಿ ಧನ್ಯವಾದ ಹೇಳಿ, ಆ ಇಬ್ಬರು ಅಲ್ಲಿಂದ ತೆರಳಿದರು. ಆದರೆ, ಅಪಘಾತದ ನಂತರ ಪತ್ನಿಯೊಂದಿಗೆ ಮಾತನಾಡುವಾಗ ಸಚಿನ್‌ಗೆ ತಮ್ಮ ₹75,000 ಮೌಲ್ಯದ ಚಿನ್ನದ ಸರ ಕಾಣೆಯಾದದ್ದು ಗೊತ್ತಾಯಿತು. ದಂಪತಿ ಸ್ಥಳದಲ್ಲಿ ಹುಡುಕಿದರೂ ಸರ ಕಂಡುಬರಲಿಲ್ಲ. ಆಗ ಅವರ ಅನುಮಾನ ಸಹಾಯ ಮಾಡಿದ ಇಬ್ಬರ ಮೇಲೆ ಬಿತ್ತು.
ಈ ಸುದ್ದಿಯನ್ನೂ ಓದಿ: Jagan Reddy: ಜಗನ್ ಮೋಹನ್ ರೆಡ್ಡಿ ಬೆಂಗಾವಲು ಪಡೆಯ ವಾಹನದ ಅಡಿಗೆ ಬಿದ್ದು ವೈಎಸ್‌ಆರ್‌ಸಿಪಿಯ ಕಾರ್ಯಕರ್ತ ಸಾವು; ವಿಡಿಯೊ ವೈರಲ್
ಆ ಇಬ್ಬರು ಬೈಕ್ ಕೀ ಅನ್ನೂ ಕಳವು ಮಾಡಿರಬಹುದು ಎಂದು ತಿಳಿಯಿತು. ದಂಪತಿ ತಕ್ಷಣ ಕೊಂಧವಾ ಪೊಲೀಸ್ ಠಾಣೆಗೆ ಧಾವಿಸಿ, ಆ ಇಬ್ಬರ ವಿರುದ್ಧ ದೂರು ದಾಖಲಿಸಿದರು. ಈ ಬಗ್ಗೆ“ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ” ಎಂದು ಕೊಂಧವಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಚಿನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ತಿಲೇಕರ್‌ನಗರದಲ್ಲಿ ಡಿಸ್ಪೋಸಬಲ್ ಅಂಗಡಿ ಆರಂಭಿಸಿದ್ದಾರೆ. “ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಕಳ್ಳರನ್ನು ಶೀಘ್ರ ಬಂಧಿಸಲಾಗುವುದು” ಎಂದು ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ವಿನಯ್ ಪಾಟಂಕರ್ ತಿಳಿಸಿದ್ದಾರೆ.