ಬಾಲಿ: ಇಂಡೋನೇಷ್ಯಾದ (Indonesia) ಒಂದು ಸಣ್ಣ ಪಟ್ಟಣದಲ್ಲಿ ಹೃದಯಸ್ಪರ್ಶಿ ಕಥೆಯೊಂದು ಬೆಳಕಿಗೆ ಬಂದಿದೆ. ಗೂಗಲ್ ನಕ್ಷೆಯು ಆಕಸ್ಮಿಕವಾಗಿ ದಂಪತಿಗಳ ದಶಕದ ಪ್ರಯಾಣವನ್ನು ದಾಖಲಿಸಿದೆ. ಗೂಗಲ್ ನಕ್ಷೆಯ ಸ್ಟ್ರೀಟ್ ವ್ಯೂನಲ್ಲಿ (Google Maps’ Street View) ವೃದ್ಧ ವ್ಯಕ್ತಿ ಮತ್ತು ಮಹಿಳೆಯ ಚಿತ್ರಗಳನ್ನು ಅದು(Viral News) ಸೆರೆಹಿಡಿದಿದೆ. ಇಬ್ಬರೂ ಇಹಲೋಕ ತ್ಯಜಿಸುವ ಮೊದಲು ತಮ್ಮ ನೀಲಿ ಬಣ್ಣ ಬಳಿದ ಮನೆಯ ಹೊರಗೆ ಒಟ್ಟಿಗೆ ಕುಳಿತುಕೊಳ್ಳುತ್ತಿದ್ದರು.
ಅಕ್ಕಪಕ್ಕದಲ್ಲಿ ಕುಳಿತುಕೊಳ್ಳುವುದರಿಂದ ಹಿಡಿದು, ಒಂಟಿಯಾಗಿ ಉಳಿದು ಕೊನೆಗೆ ಇಹಲೋಕ ತ್ಯಜಿಸುವವರೆಗೆ ದಂಪತಿಗಳ ಈ ಫೋಟೋವನ್ನು ಗೂಗಲ್ ನಕ್ಷೆ ಸೆರೆಹಿಡಿದಿದೆ. ಈ ಸರಣಿ ಚಿತ್ರಗಳನ್ನು ಜನಪ್ರಿಯ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ವೊಂದು ಬಹಿರಂಗಪಡಿಸಿದೆ. ಈ ಕಥೆಯು ಸಾಮಾಜಿಕ ಮಾಧ್ಯಮದಲ್ಲಿ ಹಲವರ ಹೃದಯಗಳನ್ನು ತಟ್ಟಿದ್ದರೆ, ಇನ್ನೂ ಕೆಲವರು ಬಳಕೆದಾರರು ಕಂಬನಿ ಮಿಡಿದಿದ್ದಾರೆ.
ದಂಪತಿಗಳ 10 ವರ್ಷಗಳ ಪ್ರಯಾಣವನ್ನು ಗೂಗಲ್ ನಕ್ಷೆ ಸೆರೆಹಿಡಿದಿವೆ. ಒಂದು ಫೋಟೋದಲ್ಲಿ ಅವರು 2015 ಮತ್ತು 2016 ರಲ್ಲಿ ತಮ್ಮ ಪುಟ್ಟ ನೀಲಿ ಬಣ್ಣದ ಮನೆಯ ಹೊರಗೆ ಒಟ್ಟಿಗೆ ಕುಳಿತಿರುವುದನ್ನು ಕಾಣಬಹುದು. 2017 ರ ಹೊತ್ತಿಗೆ, ಆ ವ್ಯಕ್ತಿ ಇಲ್ಲವಾದರು. ವೃದ್ಧ ಮಹಿಳೆಯೊಬ್ಬರೇ ಒಬ್ಬಂಟಿಯಾಗಿ ಉಳಿದರು. ಆ ಮಹಿಳೆಯನ್ನು 2021ರ ವರೆಗೆ ಗೂಗಲ್ ನಕ್ಷೆಗಳ ಸ್ಟ್ರೀಟ್ ವ್ಯೂ ಗುರುತಿಸಿದೆ. ನಂತರ ಅವರು ಸಹ ನಿಧನರಾದರು. 2025ರ ಹೊತ್ತಿಗೆ ದಂಪತಿಗಳ ಮನೆ ಕಣ್ಮರೆಯಾಯಿತು.
ಇಲ್ಲಿದೆ ಫೋಟೊ:
ಅಂದಹಾಗೆ, ಗೂಗಲ್ ದಂಪತಿಗಳ ಚಿತ್ರಣವನ್ನು ದಾಖಲಿಸಲು ಉದ್ದೇಶಿಸಿರಲಿಲ್ಲ. ಆದರೆ, ಅದು ತಿಳಿಯದೆಯೇ ದಂಪತಿಗಳ ಪ್ರಯಾಣವನ್ನು ಸೆರೆಹಿಡಿದಿದೆ. ಆದರೆ, ಈ ಫೋಟೋಗಳು ಜನರನ್ನು ಭಾವನಾತ್ಮಕವನ್ನಾಗಿಸಿದೆ. ಪ್ರತಿದಿನ ಒಟ್ಟಿಗೆ ಇರುವ ಇಬ್ಬರು, ಒಂದು ದಿನ ಇಲ್ಲವಾದರೆ ಆ ಕ್ಷಣ ಹೇಗಿರಬಹುದು. ಇವತ್ತಿದ್ದ ಮನುಷ್ಯ ನಾಳೆಯಿರುತ್ತಾನೆ ಎಂದು ಹೇಳಲಿಕ್ಕಾಗುವುದಿಲ್ಲ. ಅದಕ್ಕಾಗಿ ಎಲ್ಲರನ್ನೂ ಪ್ರೀತಿಸಿ. ಏಕೆಂದರೆ ಸಮಯವು ಎಲ್ಲವನ್ನೂ ಸೆರೆಹಿಡಿಯುತ್ತದೆ. ನಾವು ಲಘುವಾಗಿ ಪರಿಗಣಿಸುವ ಪ್ರೀತಿಯನ್ನು ಸಹ ಅದು ಸೆರೆಹಿಡಿಯುತ್ತದೆ ಎಂದು ಈ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೈರಲ್ ಪೋಸ್ಟ್ (Viral Post) ನೆಟ್ಟಿಗರನ್ನು ಆಕರ್ಷಿಸಿದೆ.
ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಹೃದಯಸ್ಪರ್ಶಿ ಕಾಮೆಂಟ್‌ಗಳ ಪ್ರವಾಹವನ್ನೇ ಸೃಷ್ಟಿಸಿದೆ. ಗೂಗಲ್ ನಕ್ಷೆಗಳ ಚಿತ್ರಗಳಲ್ಲಿ ಸೆರೆಯಾದ ವೃದ್ಧ ದಂಪತಿಗಳ ಪ್ರಯಾಣದ ಬಗ್ಗೆ ಅನೇಕರು ಸಹಾನುಭೂತಿ ವ್ಯಕ್ತಪಡಿಸಿದರು. ಇತರರು ಈ ಫೋಟೋ ಸರಣಿಯಿಂದ ಅಮೂಲ್ಯವಾದ ಜೀವನ ಪಾಠವನ್ನು ಕಲಿತರು.
ಈ ಸುದ್ದಿಯನ್ನೂ ಓದಿ: Delhi CM: ದೆಹಲಿ ಸಿಎಂ ಹಲ್ಲೆ ಪ್ರಕರಣ; ಒಂದು ದಿನ ಮೊದಲು ರೇಖಾ ಗುಪ್ತಾ ಮೇಲೆ ಮನೆ ಬಳಿ ವಿಡಿಯೊ ಚಿತ್ರೀಕರಿಸಿದ್ದ ಆರೋಪಿ