ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

‌Viral Video: ಶಾಪಿಂಗ್‌ ಮಾಲ್‌ಗೆ ನುಗ್ಗಿದ ಗಜರಾಜ; ಈ ವಿಡಿಯೊ ನೋಡಿದ್ರೆ ಎದೆ ಝಲ್ಲೆನ್ನೋದು ಗ್ಯಾರಂಟಿ

ಥೈಲ್ಯಾಂಡ್‌ನ ಖಾವೊ ಯಾಯ್ ಪ್ರದೇಶದಲ್ಲಿ ಕಾಡಾನೆಯೊಂದು ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ನುಗ್ಗಿ ಅಂಗಡಿಯೊಳಗೆ ಓಡಾಡಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಅಂಗಡಿಯೊಳಗೆ ನುಗ್ಗಿದರೂ ಏನೂ ಹಾನಿ ಮಾಡದೇ ಆನೆ ಸಂಯಮದಿಂದ ಇರುವುದನ್ನು ನೋಡಿ ನೆಟ್ಟಿಗರು ಆನೆಯನ್ನು ಹಾಡಿ ಹೊಗಳಿದ್ದಾರೆ.

ಬ್ಯಾಂಕಾಕ್: ಥೈಲ್ಯಾಂಡ್‌ನ ಖಾವೊ ಯಾಯ್ ಪ್ರದೇಶದಲ್ಲಿ ಕಾಡಾನೆಯೊಂದು ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ನುಗ್ಗಿ ಅಂಗಡಿಯೊಳಗೆ ಓಡಾಡಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಆನೆ(Elephant) ತನ್ನ ಸೊಂಡಿಲಿನಿಂದ ಅಂಗಡಿಗಳ ಕಪಾಟಿನಲ್ಲಿಟ್ಟ ತಿಂಡಿಗಳನ್ನು ತೆಗೆಯುತ್ತಿರುವುದು ಸೆರೆಯಾಗಿದೆ.ಇದು ಖಾವೊ ಯಾಯ್ ರಾಷ್ಟ್ರೀಯ ಉದ್ಯಾನವನದ ಕಾಡಾನೆಯಂತೆ. ಅಂಗಡಿಯೊಳಗೆ ನುಗ್ಗಿದರೂ ಏನೂ ಹಾನಿ ಮಾಡದೇ ಆನೆ ಸಂಯಮದಿಂದ ಇರುವುದನ್ನು ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು 2.7 ಮಿಲಿಯನ್ ವ್ಯೂವ್ಸ್‌ ಗಳಿಸಿದೆ. ಸೋಶಿಯಲ್ ಮೀಡಿಯಾ ನೆಟ್ಟಿಗರು ಸಾಕಷ್ಟು ಕಾಮೆಂಟ್‌ಗಳನ್ನು ಮಾಡಿದ್ದಾರೆ. ನೆಟ್ಟಿಗರೊಬ್ಬರು "ಆನೆಗಳಿಗೂ ಕೆಲವೊಮ್ಮೆ ತಿಂಡಿ ಸಿಗುತ್ತದೆ!" ಎಂದು ತಮಾಷೆ ಮಾಡಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



ಮತ್ತೊಬ್ಬರು ಆನೆಯ ಸೌಮ್ಯ ಸ್ವಭಾವವನ್ನು ಹೊಗಳುತ್ತಾ, "ಆನೆ ತುಂಬಾ ಸಭ್ಯವಾಗಿದೆ - ಒಂದೇ ಒಂದು ವಸ್ತುವನ್ನು ಸಹ ಕೆಡವಲಿಲ್ಲ. ಇದಕ್ಕಾಗಿಯೇ ನಾನು ವನ್ಯಜೀವಿಗಳನ್ನು ಪ್ರೀತಿಸುತ್ತೇನೆ" ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಪ್ರಿಯಕರನ ಜೊತೆ ಚಕ್ಕಂದವಾಡುತ್ತಿದ್ದಾಗ ಎಂಟ್ರಿ ಕೊಟ್ಟೇ ಬಿಟ್ಟ ಗಂಡ! ಆಮೇಲೆ ನಡೆದಿದ್ದೇ ಬೇರೆ

ಕಾಡಾನೆಗಳು ಯಾವಾಗಲೂ ಸೌಮ್ಯವಾಗಿರುವುದಿಲ್ಲ. ಈ ಹಿಂದೆ ಆನೆಗಳು ದಾಳಿ ಮಾಡಿದ ಘಟನೆ ಹಲವು ನಡೆದಿತ್ತು. ಇತ್ತೀಚೆಗಷ್ಟೇ ಕಾಫಿ ತೋಟದಲ್ಲಿ ಕಾಡಾನೆ ದಾಳಿಯಿಂದ ಮಾಲೀಕ ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲೂಕಿನ ಬೈಕೆರೆವ ಗ್ರಾಮದಲ್ಲಿ ನಡೆದಿತ್ತು. ಬೈಕೆರೆವ ಗ್ರಾಮದ ಷಣ್ಮುಖ(45) ಮೃತಪಟ್ಟವರು. ಅಮೃತೇಶ್ವರ ಕಾಫಿ ತೋಟದ ಮಾಲಿಕರಾಗಿದ್ದ ಇವರು ತೋಟದಲ್ಲಿ ಕೆಲಸ ಮಾಡಿಸಲು ತೆರಳಿದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದರು.