ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: 'ನಾನು ಅವಳ ಮೊದಲ ರೋಗಿ, ಅವಳು ನನ್ನ ಕೊನೆಯ ವೈದ್ಯೆ'! ಈ ರೀತಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಈ ಯುವಕ?

Self Harming Case: ವೈದ್ಯೆಯೊಬ್ಬರ ಹೆಸರು ಬರೆದಿಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೈದ್ಯಯ ಹೆಸರನ್ನುಲ್ಲೇಖಿಸಿ ನಾನು ಅವಳ ಮೊದಲ ರೋಗಿಯಾಗಿದ್ದೇನೆ ಮತ್ತು ಅವಳು ನನ್ನ ಕೊನೆಯ ವೈದ್ಯೆ ಎಂದು ಡೆತ್‍ನೋಟ್‍ನಲ್ಲಿ ಬರೆದಿದ್ದಾನೆ. ಉತ್ತರ ಪ್ರದೇಶದ ಆಗ್ರಾದ ಹೋಟೆಲ್‍ವೊಂದರ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವೈದ್ಯೆಯ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಯುವಕ

Priyanka P Priyanka P Aug 7, 2025 5:06 PM

ಮೀರತ್: ವೈದ್ಯೆಯೊಬ್ಬರ ಹೆಸರು ಬರೆದಿಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಮೀರತ್‌ನ 30 ವರ್ಷದ ಎಂಜಿನಿಯರ್ ರೋಹಿತ್ ಕುಮಾರ್ ಮೃತ ದುರ್ದೈವಿ. ಆಗ್ರಾದ ಹೋಟೆಲ್‍ವೊಂದರ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೋಹಿತ್ ಆತ್ಮಹತ್ಯೆ(Self harming Case) ಸುದ್ದಿ ಕೇಳಿ ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಪೆನ್‍ಡ್ರೈವ್ ಮತ್ತು ಡೆತ್‍ನೋಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ರೋಹಿತ್ ತನ್ನ ಕೊನೆಯ ಆಸೆಯನ್ನು ಪತ್ರದಲ್ಲಿ ಬರೆದಿದ್ದಾನೆ ಹಾಗೂ ಮಹಿಳಾ ವೈದ್ಯರೊಬ್ಬರ ಹೆಸರನ್ನು ಉಲ್ಲೇಖಿಸಿದ್ದಾನೆ.

ವರದಿಯ ಪ್ರಕಾರ, ಆಗಸ್ಟ್ 4 ರಂದು ಆಗ್ರಾದ ಶಹಗಂಜ್ ಪ್ರದೇಶದಲ್ಲಿರುವ ಹೋಟೆಲ್‌ನಲ್ಲಿ ಬಿಳಿ ಬೆಡ್‌ಶೀಟ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ರೋಹಿತ್ ಪತ್ತೆಯಾಗಿದ್ದಾನೆ. ಘಟನಾ ಸ್ಥಳಕ್ಕೆ ತಲುಪಿದ ಪೊಲೀಸರು ಪರಿಶೀಲನೆ ನಡೆಸಿದಾಗ ವಿವರವಾದ ಡೆತ್‌ನೋಟ್‌ ಮತ್ತು ಪೆನ್ ಡ್ರೈವ್ ಪತ್ತೆಯಾಗಿದೆ.

'ನಾನು ಅವಳ ಮೊದಲ ರೋಗಿ, ಅವಳು ನನ್ನ ಕೊನೆಯ ವೈದ್ಯೆ'

ಆತ್ಮಹತ್ಯೆ ಪತ್ರದಲ್ಲಿ, ರೋಹಿತ್ ತನ್ನ ದೇಹವನ್ನು ಕುಟುಂಬ ಸದಸ್ಯರು ಅಥವಾ ಸಂಬಂಧಿಕರಿಗೆ ಹಸ್ತಾಂತರಿಸಬಾರದು ಎಂದು ವಿನಂತಿಸಿದ್ದಾನೆ. ಬದಲಾಗಿ, ಅದನ್ನು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಥವಾ ಅಂಗಾಂಗ ದಾನಕ್ಕಾಗಿ ದಾನ ಮಾಡಬೇಕೆಂದು ಒತ್ತಾಯಿಸಿದ್ದಾನೆ. ಸತ್ತ ಮೇಲೆ 13 ದಿನಗಳ ಶೋಕಾಚರಣೆ ಮಾಡಬೇಡಿ. ಎಲ್ಲರನ್ನು ಮನೆಗೆ ಕರೆಯಿರಿ ಎಂದು ಪತ್ರದಲ್ಲಿ ವಿನಂತಿಸಿದ್ದಾನೆ. ಹಾಗೆಯೇ ವೈದ್ಯೆ ಹೆಸರನ್ನುಲ್ಲೇಖಿಸಿ ನಾನು ಅವಳ ಮೊದಲ ರೋಗಿಯಾಗಿದ್ದೇನೆ ಮತ್ತು ಅವಳು ನನ್ನ ಕೊನೆಯ ವೈದ್ಯೆ ಎಂದು ಬರೆದಿದ್ದಾನೆ.

ಈ ಸುದ್ದಿಯನ್ನೂ ಓದಿ: Khalistan Terrorists: ಗುರುದ್ವಾರ ಆವರಣದಲ್ಲಿ ಖಲಿಸ್ತಾನ್ ರಾಯಭಾರ ಕಚೇರಿ; ಫೋಟೋ ವೈರಲ್‌

ಪೆನ್ ಡ್ರೈವ್‌ನಲ್ಲಿ ಕಂಡುಬಂದ ಪಿಡಿಎಫ್ ಫೈಲ್‌ನಲ್ಲಿ, ರೋಹಿತ್ ಮಹಿಳಾ ವೈದ್ಯೆಯ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಬರೆದಿದ್ದಾನೆ. ಪೊಲೀಸರ ಪ್ರಕಾರ, ಈ ವೈದ್ಯರು ಪ್ರಸ್ತುತ ಬೇರೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತನಿಖಾಧಿಕಾರಿಗಳು, ವೈದ್ಯೆಯು ರೋಹಿತ್ ಅವರೊಂದಿಗೆ ಯಾವ ಸಂಬಂಧ ಹೊಂದಿದ್ದರು ಮತ್ತು ಟಿಪ್ಪಣಿಯಲ್ಲಿ ಆಕೆಯ ಹೆಸರನ್ನು ಏಕೆ ಉಲ್ಲೇಖಿಸಲಾಗಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಅಂದಹಾಗೆ, ರೋಹಿತ್ ಮೀರತ್ ನಿವಾಸಿ. ತಂದೆ ಸಲೇಖ್ ಚಂದ್ ಐದು ವರ್ಷಗಳ ಹಿಂದೆ ವಿಜಿಲೆನ್ಸ್ ಇಲಾಖೆಯಿಂದ ನಿವೃತ್ತರಾಗಿದ್ದರು. ತಾಯಿ ಸುಮಾರು ಎರಡು ವರ್ಷಗಳ ಹಿಂದೆ ನಿಧನರಾದರು. ರೋಹಿತ್ ಅವಿವಾಹಿತರಾಗಿದ್ದರು. ಅವರಿಗೆ ಒಬ್ಬ ಸಹೋದರ ಮತ್ತು ಇಬ್ಬರು ಸಹೋದರಿಯರು ಇದ್ದರು. ಸಹೋದರ ಮತ್ತು ಅತ್ತಿಗೆ ದುಬೈನಲ್ಲಿ ಪ್ರಾಧ್ಯಾಪಕರಾಗಿದ್ದರೆ, ಇಬ್ಬರೂ ಸಹೋದರಿಯರು ವಿವಾಹಿತರಾಗಿದ್ದಾರೆ. ರೋಹಿತ್ ಗಾಜಿಯಾಬಾದ್‌ನಲ್ಲಿ ಎಂಜಿನಿಯರಿಂಗ್ ಓದಿದ್ದರು. ಆದರೆ, ದೀರ್ಘಕಾಲದಿಂದ ನಿರುದ್ಯೋಗಿಯಾಗಿದ್ದರಿಂದ ಮಾನಸಿಕ ಒತ್ತಡದಲ್ಲಿದ್ದರು ಎಂದು ಹೇಳಲಾಗಿದೆ.