Physical Assault: ಗ್ಯಾಂಗ್‌ರೇಪ್ ಮಾಡಿ ಬೆಂಕಿ ಹಚ್ತೇವೆ... ಗಗನಸಖಿಗೆ ಪಾಕ್ ಕಿಡಿಗೇಡಿಯಿಂದ ಬೆದರಿಕೆ- ವಿಡಿಯೊ ನೋಡಿ
Threatened to Gang-Rape: ಪಾಕಿಸ್ತಾನ ಮೂಲಕ ವ್ಯಕ್ತಿಯೊಬ್ಬ ಗಗನಸಖಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ. 37 ವರ್ಷದ ಪಾಕಿಸ್ತಾನಿ ಮೂಲದ ಉದ್ಯಮಿ ಸಲ್ಮಾನ್ ಇಫ್ತಿಕರ್ ಗಗನಸಖಿ ಮೇಲೆ ದುರ್ವರ್ತನೆ ತೋರಿದಾತ. ಈತನಿಗೆ 15 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.


ಲಂಡನ್: ಪಾಕಿಸ್ತಾನ ಮೂಲಕ ವ್ಯಕ್ತಿಯೊಬ್ಬ ಗಗನಸಖಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ. 37 ವರ್ಷದ ಪಾಕಿಸ್ತಾನಿ ಮೂಲದ ಉದ್ಯಮಿ ಸಲ್ಮಾನ್ ಇಫ್ತಿಕರ್ ಗಗನಸಖಿ ಮೇಲೆ ದುರ್ವರ್ತನೆ ತೋರಿದಾತ. ಇತ್ತೀಚೆಗೆ ಲಂಡನ್‌ನಿಂದ ಲಾಹೋರ್‌ಗೆ ವರ್ಜಿನ್ ಅಟ್ಲಾಂಟಿಕ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಅಸಹ್ಯಕರವಾಗಿ ನಡೆದುಕೊಂಡಿದ್ದಾನೆ.
ಮೂರು ಮಕ್ಕಳ ತಂದೆ ಮತ್ತು ಇಬ್ಬರು ಹೆಂಡತಿಯರ ಪತಿಯಾಗಿರುವ ಇಫ್ತಿಕರ್, ಪ್ರಥಮ ದರ್ಜೆ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದಾಗ ಗಗನಸಖಿ ವಿರುದ್ಧ ಅಸಭ್ಯವಾಗಿ ವರ್ತಿಸಿದ್ದಾನೆ. ತನ್ನ ಪತ್ನಿ ಎರುಮ್ ಸಲ್ಮಾನ್ ಮತ್ತು ಅವರ ಮೂವರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದಾಗ ಶಾಂಪೇನ್ ಸೇವಿಸುತ್ತಿದ್ದ ಇಫ್ತಿಕರ್, ವಿಮಾನ ಸಿಬ್ಬಂದಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅಲ್ಲದೆ ಹೋಟೆಲ್ ಕೊಠಡಿಯಿಂದ ಹೊರಗೆಳೆದು, ಸಾಮೂಹಿಕ ಅತ್ಯಾಚಾರ ಮಾಡಿ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾನೆ. ಮಾಡಿದ್ದುಣ್ಣೋ ಮಹರಾಯ ಎಂಬಂತೆ, ಈ ಸಂಬಂಧ ಇಫ್ತಿಕರ್‌ಗೆ 15 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಸಲ್ಮಾನ್ ಇಫ್ತಿಕರ್ ಯಾರು?
ಸಲ್ಮಾನ್ ಇಫ್ತಿಕರ್ ಒಬ್ಬ ಉದ್ಯಮಿಯಾಗಿದ್ದು, ತನ್ನ ಪತ್ನಿ ಎರುಮ್ ಜೊತೆಗೂಡಿ ಲಂಡನ್‌ನಲ್ಲಿ ಕಂಪನಿಯನ್ನು ನಡೆಸುತ್ತಿದ್ದಾರೆ. ಈ ದಂಪತಿಗಳು ತಮ್ಮ ಮಕ್ಕಳೊಂದಿಗೆ ಬಕಿಂಗ್‌ಹ್ಯಾಮ್‌ಶೈರ್‌ನ ಐವರ್‌ನಲ್ಲಿರುವ ಆರು ಮಲಗುವ ಕೋಣೆಗಳ ಕೊಠಡಿಯಿರುವ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಇದರ ಮೌಲ್ಯ ಸುಮಾರು ಪೌಂಡ್ 2 ಮಿಲಿಯನ್. ಇಫ್ತಿಕರ್‌ನು ರೇಂಜ್ ರೋವರ್, ಬೆಂಟ್ಲಿ ಮತ್ತು ರೋಲ್ಸ್ ರಾಯ್ಸ್ ಸೇರಿದಂತೆ ಹಲವಾರು ಐಷಾರಾಮಿ ಕಾರುಗಳನ್ನು ಸಹ ಹೊಂದಿದ್ದಾನೆ.
ಈ ಸುದ್ದಿಯನ್ನೂ ಓದಿ: Digital Arrest: ಅಶ್ಲೀಲ ಫೋಟೋ ವೈರಲ್ ಮಾಡುವ ಬೆದರಿಕೆ; 3 ತಿಂಗಳಲ್ಲಿ 19 ಕೋಟಿ ರೂ ಕಳೆದುಕೊಂಡ ವೈದ್ಯೆ
ಪಾಕ್ ಮೂಲದ ಸಲ್ಮಾನ್ ಇಫ್ತಿಕರ್ ಲಂಡನ್‌ನಲ್ಲಿನ ನೆಲೆಸಿದ್ದರೂ ಪಾಕಿಸ್ತಾನದ ಸೂಪರ್ ಮಾಡೆಲ್ ಮತ್ತು ನಟಿ ಅಬೀರ್ ರಿಜ್ವಿ ಅವರನ್ನೂ ವಿವಾಹವಾಗಿದ್ದಾನೆ. ಈ ಜೋಡಿ ಐದು ವರ್ಷಗಳ ಹಿಂದೆ ವಿವಾಹವಾದರು. ರಿಜ್ವಿ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಆಗಾಗ ಇಫ್ತಿಕರ್‌ನೊಂದಿಗಿನ ಫೋಟೋವನ್ನು ಹಂಚಿಕೊಳ್ಳುತ್ತಾರೆ.