ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

HIV Infected Girl: ಡ್ರಗ್ಸ್‌ ಚಟಕ್ಕೆ ಬಿದ್ದ ಬಾಲಕಿ ಸಿಕ್ಕ ಸಿಕ್ಕವ್ರ ಜೊತೆ ಸೆಕ್ಸ್‌! ಈಕೆಯ ಸಹವಾಸ ಮಾಡಿದವ್ರಿಗೆ HIV

Girl addicted drugs: ಮಾದಕ ವ್ಯಸನಿಯಾಗಿದ್ದ 17 ವರ್ಷದ ಬಾಲಕಿಯೊಬ್ಬಳು ಕಳೆದ ಒಂದೂವರೆ ವರ್ಷಗಳಲ್ಲಿ ಕನಿಷ್ಠ 19 ಪುರುಷರಿಗೆ HIV ಹರಡಿದ್ದಾಳೆ ಎನ್ನಲಾಗಿದೆ. ಈ ಘಟನೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನೈನಿತಾಲ್ ಜಿಲ್ಲೆಯ ಗುಲರ್‌ಘಟ್ಟಿ ಪ್ರದೇಶದಲ್ಲಿ ಬೆಳಕಿಗೆ ಬಂದಿತ್ತು. ಹದಿಹರೆಯದ ಬಾಲಕಿ ಹಲವಾರು ಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದಳು.

ಸಿಕ್ಕ ಸಿಕ್ಕವ್ರ ಜೊತೆ ಸೆಕ್ಸ್‌... ಈಕೆಯ ಸಹವಾಸ ಮಾಡಿದವ್ರಿಗೆ HIV!

Priyanka P Priyanka P Aug 7, 2025 4:49 PM

ಉತ್ತರಾಖಂಡ: ಮಾದಕ ವ್ಯಸನಕ್ಕೆ ದಾಸಳಾಗಿದ್ದ 17 ವರ್ಷದ ಬಾಲಕಿಯೊಬ್ಬಳು ಹಲವರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಲ್ಲದೆ, ಎಚ್ಐವಿ ಹರಡಿಸಿರುವ ಆತಂಕಕಾರಿ ಘಟನೆ ಉತ್ತರಾಖಂಡದ ರಾಮನಗರ್ ಪಟ್ಟಣದಲ್ಲಿ ನಡೆದಿದೆ. ಮಾದಕ ವ್ಯಸನಿಯಾಗಿದ್ದ 17 ವರ್ಷದ ಬಾಲಕಿಯೊಬ್ಬಳು ಕಳೆದ ಒಂದೂವರೆ ವರ್ಷಗಳಲ್ಲಿ ಕನಿಷ್ಠ 19 ಪುರುಷರಿಗೆ ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ (HIV) ಹರಡಿದ್ದಾಳೆ ಎನ್ನಲಾಗಿದೆ.

ಈ ಘಟನೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನೈನಿತಾಲ್ ಜಿಲ್ಲೆಯ ಗುಲರ್‌ಘಟ್ಟಿ ಪ್ರದೇಶದಲ್ಲಿ ಬೆಳಕಿಗೆ ಬಂದಿತ್ತು. ಹದಿಹರೆಯದ ಬಾಲಕಿ ಹಲವಾರು ಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದಳು. ಅವರಲ್ಲಿ ಹಲವರಿಗೆ ಎಚ್‌ಐವಿ ಪಾಸಿಟಿವ್ ಕಂಡುಬಂದಿದೆ. ಬಾಲಕಿ ತನಗೆ ಬಂದ ಹಣವನ್ನು ತನ್ನ ಮಾದಕ ವ್ಯಸನಕ್ಕೆ ಖರ್ಚು ಮಾಡುತ್ತಿದ್ದಳು ಎನ್ನಲಾಗಿದೆ.

ಸೋಂಕಿನ ಬಗ್ಗೆ ಅರಿವಿಲ್ಲದ ಪುರುಷರು

ಹದಿಹರೆಯದ ಬಾಲಕಿಯೊಂದಿಗೆ ಸಂಪರ್ಕ ಹೊಂದಿದ ಪುರುಷರಿಗೆ ಅವಳು ಎಚ್ಐವಿ ಪಾಸಿಟಿವ್ ಎಂದು ತಿಳಿದಿರಲಿಲ್ಲ ಎನ್ನಲಾಗಿದೆ. ವಿವಾಹಿತ ಪುರುಷರೊಂದಿಗೂ ಆಕೆ ಮಲಗಿದ್ದಳು. ಇದು ಅವರ ಹೆಂಡತಿಯರಿಗೆ ವೈರಸ್ ಮತ್ತಷ್ಟು ಹರಡಲು ಕಾರಣವಾಯಿತು ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ.



ಆ ಪ್ರದೇಶದ ಹಲವಾರು ಯುವಕರು ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲಿದ್ದಾರೆ. ಇದಕ್ಕಾಗಿ ಇಂಟಿಗ್ರೇಟೆಡ್ ಕೌನ್ಸೆಲಿಂಗ್ ಮತ್ತು ಟೆಸ್ಟಿಂಗ್ ಸೆಂಟರ್ (ಐಸಿಟಿಸಿ) ಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿದ್ದಾರೆ. ಅಲ್ಲಿ ಪರೀಕ್ಷೆ ವೇಳೆ ಅವರಿಗೆ ಎಚ್ಐವಿ ಪಾಸಿಟಿವ್ ಇರುವುದು ದೃಢಪಡಿಸಿತು. ನಂತರ ನಡೆದ ತನಿಖೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತು. ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹದಿಹರೆಯದ ಬಾಲಕಿ ಹೆರಾಯಿನ್ ಸೇವಿಸುತ್ತಿದ್ದಳು. ಕೌನ್ಸೆಲಿಂಗ್ ಸಮಯದಲ್ಲಿ, ಅವಳು ಹಲವಾರು ತಿಂಗಳುಗಳಿಂದ ಅನೇಕ ಸೋಂಕಿತ ಪುರುಷರೊಂದಿಗೆ ಲೈಂಗಿಕವಾಗಿ ಸಕ್ರಿಯಳಾಗಿದ್ದಳು ಎಂದು ತಿಳಿದುಬಂದಿದೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ. ಪುರುಷರು ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದು ಶಿಕ್ಷಾರ್ಹ ಅಪರಾಧ ಎಂದು ಕೆಲವು ಬಳಕೆದಾರರು ಹೇಳಿದ್ದಾರೆ. ವಿವಾಹಿತ ಪುರುಷರು ತಮ್ಮ ಹೆಂಡತಿಯರಿಗೆ ಮೋಸ ಮಾಡಿ ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಪರ್ಕ ಸಾಧಿಸಿದರು. ಪತ್ನಿಗೆ ಮೋಸ ಮಾಡಿದವರು ಈ ರೋಗ ಅಂಟಿಸಿಕೊಂಡಿರುವುದಕ್ಕೆ ಅರ್ಹರು ಎಂದು ಕೆಲವು ಬಳಕೆದಾರರು ಟೀಕಿಸಿದ್ದಾರೆ.

ಅಪ್ರಾಪ್ತೆ ಜೊತೆ ಮಲಗಿದ ವಿವಾಹಿತ ಪುರುಷರಿಗೆ ಯಾರೂ ಸಹಾನುಭೂತಿ ತೋರಿಸಕೂಡದು. ಈ ಪ್ರಕರಣದಲ್ಲಿ ನಿಜವಾದ ಬಲಿಪಶುಗಳೆಂದರೆ ಈ ಅಸಹ್ಯಕರ ಪುರುಷರನ್ನು ಮದುವೆಯಾದ ಮಹಿಳೆಯರು ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಅಂತಹ ಪುರುಷರ ವಿರುದ್ಧ ಪೋಸ್ಕೋ ಕೇಸ್ ದಾಖಲಿಸುವಂತೆ ಒತ್ತಾಯಿಸಿದರು.

ಜಾಗೃತಿ ಅಭಿಯಾನ

ಇನ್ನು ಈ ಘಟನೆಯ ನಂತರ, ಆ ಪ್ರದೇಶದ ಆರೋಗ್ಯ ಇಲಾಖೆಯು ಎಚ್ಐವಿ/ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲು ಹಲವಾರು ಕ್ರಮಗಳನ್ನು ಕೈಗೊಂಡಿತು. ಸೆಮಿನಾರ್‌ಗಳು ಮತ್ತು ಜಾಗೃತಿ ಅಭಿಯಾನಗಳನ್ನು ಆಯೋಜಿಸಲಾಯಿತು. ಅಲ್ಲಿ ಬಾಧಿತರಿಗೆ ಉಚಿತ ಪರೀಕ್ಷೆ ಮತ್ತು ಔಷಧಗಳನ್ನು ಲಭ್ಯವಾಗುವಂತೆ ಮಾಡಲಾಯಿತು. ರೋಗನಿರ್ಣಯ ಮಾಡಿದ ಎಲ್ಲಾ ವ್ಯಕ್ತಿಗಳ ಗುರುತನ್ನು ಕಟ್ಟುನಿಟ್ಟಾಗಿ ಗೌಪ್ಯವಾಗಿಡಲಾಗಿತ್ತು.