ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ಇಲ್ಲಿ ಬದುಕುವುದು ಸುಲಭವಲ್ಲ": ವಿದೇಶದಲ್ಲಿ ವಾಸ್ತವ್ಯ ಹೂಡಬೇಕೆಂದು ಕನಸು ಕಾಣುವವರ ಕಣ್ತೆರೆಸುವ ಅಮೆರಿಕದಲ್ಲಿ 10 ವರ್ಷ ಕಳೆದ ಭಾರತೀಯ ವ್ಯಕ್ತಿಯ ಅನುಭವ

Viral Video: ವಿದೇಶದಲ್ಲಿ ಕೆಲಸ ಮಾಡುವುದು ಹೊರಗಿನಿಂದ ಕಾಣುವಷ್ಟು ಸುಲಭವಲ್ಲ ಎಂದು ಅಮೆರಿಕದಲ್ಲಿ ಉದ್ಯೋಗಿಯಾಗಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ಹತ್ತು ವರ್ಷಗಳನ್ನು ಕಳೆದ ಅವರು ಅಲ್ಲಿ ಯಶಸ್ಸನ್ನು ಬೆನ್ನಟ್ಟುವ ಕಠಿಣ ಪರಿಶ್ರಮ ಹೇಗಿದೆ ಎಂದು ವಿವರಿಸಿದ್ದಾರೆ.

ಅಮೆರಿಕದ ದುಬಾರಿ ಜೀವನ ಶೈಲಿ ಬಗ್ಗೆ ಬೇಸರ ಹೊರಹಾಕಿದ ಭಾರತೀಯ

ವಾಷಿಂಗ್ಟನ್‌, ಜು. 12: ಸಾಮಾನ್ಯವಾಗಿ ಬಹುತೇಕರು ಉದ್ಯೋಗಕ್ಕಾಗಿ ವಿದೇಶವನ್ನೇ ಆಯ್ಕೆ ಮಾಡುತ್ತಾರೆ. ಅಲ್ಲಿನ ಜೀವನ ಶೈಲಿ, ಉತ್ತಮ ಪ್ಯಾಕೇಜ್ ಭಾರತೀಯರನ್ನು ಆಕರ್ಷಿಸುತ್ತದೆ. ಆದರೆ ವಿದೇಶದಲ್ಲಿ ಕೆಲಸ ಮಾಡುವುದು ಹೊರಗಿನಿಂದ ಕಾಣುವಷ್ಟು ಸುಲಭವಲ್ಲ ಎಂದು ಅಮೆರಿಕದ ನ್ಯಾಯಾರ್ಕ್‌ನಲ್ಲಿ ಉದ್ಯೋಗಿಯಾಗಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಅಲ್ಲಿನ ಕಷ್ಟವನ್ನು (Viral News) ಹಂಚಿಕೊಂಡಿದ್ದಾರೆ. ನ್ಯೂಯಾರ್ಕ್‌ನಲ್ಲಿ ಹತ್ತು ವರ್ಷ ಕಳೆದ ಅವರು ಯಶಸ್ಸನ್ನು ಬೆನ್ನಟ್ಟುವ ಕಠಿಣ ಪರಿಶ್ರಮ ಹೇಗಿದೆ ಎನ್ನುವುದನ್ನು ವಿವರಿಸಿದ್ದಾರೆ.

​ಭಾರತೀಯ ಪ್ರವಾಸಿ ಹಾಗೂ ಕಂಟೆಂಟ್ ಕ್ರಿಯೇಟರ್ ಒಬ್ಬರು ಅಮೆರಿಕದಲ್ಲಿ ನೆಲೆಸಿರುವ ಕುನಾಲ್ ದತ್ ಅವರೊಂದಿಗೆ ಮಾತನಾಡಿದ್ದು, ʼʼನ್ಯೂಯಾರ್ಕ್ ನಗರವನ್ನು ಜನರು ದೊಡ್ಡ ಕನಸು ಮತ್ತು ವೃತ್ತಿಜೀವನದ ಯಶಸ್ಸನ್ನು ಗಳಿಸುವ ಸ್ಥಳವೆಂದು ಅಂದುಕೊಳ್ಳುತ್ತಾರೆ. ಆದರೆ ಅಲ್ಲಿ ವಾಸಿಸುವವರಿಗೆ ವೇಗದ ಜೀವನಶೈಲಿಯು ಒತ್ತಡ ಮತ್ತು ಸವಾಲುಗಳನ್ನು ತರಬಹುದು. ಈ ನಗರದಲ್ಲಿ ಬದುಕಲು ವಿಪರೀತ ಆತ್ಮವಿಶ್ವಾಸ ಮತ್ತು ನಿರಂತರ ಶ್ರಮದ ಅಗತ್ಯವಿದೆ. ಇಲ್ಲದಿದ್ದರೆ, ಇಲ್ಲಿನ ಸ್ಪರ್ಧಾತ್ಮಕ ವಾತಾವರಣ ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಬಹುದುʼʼ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಡಿಯೊ ನೋಡಿ:



ʼʼನ್ಯೂಯಾರ್ಕ್‌ನಲ್ಲಿರುವ ಇತರರು ಬೆಳೆಯುವುದನ್ನು ನೋಡಿ ನೀವು ಹಿಂದುಳಿದಂತೆ ಭಾಸವಾಗಬಹುದು. ನಗರದ ದುಬಾರಿ ಜೀವನಶೈಲಿಯಂತೂ ನಿಮ್ಮನ್ನು ಮತ್ತಷ್ಟು ಒತ್ತಡಕ್ಕೆ ತಳ್ಳಬಹುದು. ಒಂದು ಸಾಧಾರಣ ರೆಸ್ಟೋರೆಂಟ್‌ನಲ್ಲಿ ಊಟ ಮಾಡಬೇಕೆಂದರೂ ಕನಿಷ್ಠ 9,000ರಿಂದ 14,000 ರುಪಾಯಿ ಖರ್ಚಾಗುತ್ತದೆ. ಹೀಗಾಗಿ ಒಂದು ಊಟಕ್ಕೂ ಇಷ್ಟು ವ್ಯಯಿಸಬೇಕಾಗಿತ್ತದೆʼʼ ಎಂದು ಬೇಸರ ಹೊರ ಹಾಕಿದರು.

ಸ್ವಿಟ್ಜರ್‌ಲ್ಯಾಂಡ್‌ನ 7 ಲಕ್ಷ ರುಪಾಯಿ ಭಾರತದ 40 ಸಾವಿರ ರುಪಾಯಿಗೆ ಸಮ: ದುಬಾರಿ ಜೀವನದ ಬಗ್ಗೆ ವಿವರಿಸಿದ ದಂಪತಿ

ʼʼಕೆಲವರು ಇಲ್ಲಿ ವರ್ಷಗಳನ್ನು ಕಳೆದ ನಂತರ ಅಂತಿಮವಾಗಿ ನ್ಯೂಯಾರ್ಕ್‌ನಿಂದ ಹೊರ ಬರಲು ಇಚ್ಚಿಸುತ್ತಾರೆ‌. ಯಾಕಂದರೆ ಮದುವೆ, ಮಕ್ಕಳು ಮತ್ತು ಮನೆ ಹೊಂದುವ ಬಗ್ಗೆ ಯೋಚಿಸುವಾಗ ಅನೇಕರು ಇತರ ಸ್ಥಳಗಳನ್ನು ಹುಡುಕಲು ಪ್ರಾರಂಭಿಸುತ್ತಾರೆ. ಮನುಷ್ಯನಿಗೆ ಅತಿ ಹೆಚ್ಚು ಶಕ್ತಿಯಿರುವ 23ರಿಂದ 36 ವರ್ಷದ ವಯಸ್ಸಿನ ಅವಧಿಯಲ್ಲಿ ಮಾತ್ರ ಈ ನಗರದಲ್ಲಿ ಜೀವಿಸಲು ಸಾಧ್ಯವಾಗುತ್ತದೆʼʼ ಎಂದರು.

ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದು, ನೆಟ್ಟಿಗರೊಬ್ಬರು ʼʼಇಂದು ಜಗತ್ತೇ ವೇಗದ ಪ್ರಯಾಣದಲ್ಲಿ ಸಾಗುತ್ತಿದೆʼʼ ಎಂದು ಹೇಳಿದ್ದಾರೆ. ಮತ್ತೊಬ್ಬರು, ʼʼಎಷ್ಟು ವರ್ಷಗಳ ಕಾಲ ವಿದೇಶದಲ್ಲೂ ನೆಲಿಸಿದರೂ ತಾಯ್ನಾಡು ನಮ್ಮನ್ನು ನೆನಪಿಸುತ್ತದೆʼʼ ಎಂದಿದ್ದಾರೆ.