ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮುಂಗಾರು ಮಳೆಗೆ ರಸ್ತೆಯಲ್ಲೆ ರಾಜಗಾಂಭೀರ್ಯದಿಂದ ತಿರುಗಾಡಿದ ನವಿಲುಗಳು!

Viral Video: ಪ್ರಕೃತಿ ಪ್ರಿಯರನ್ನು ಗಮನ ಸೆಳೆಯುವಂತ ದೃಶ್ಯವೊಂದು ಕಂಡು ಬಂದಿದೆ. ವಾಣಿಜ್ಯ ನಗರಿಗೆ ನೈಋತ್ಯ ಮುಂಗಾರಿನ ಆಗಮನ ಆಗುತ್ತಿದ್ದಂತೆ ಪ್ರಸಿದ್ಧ ಪೆದ್ದರ್ ರಸ್ತೆಯಲ್ಲಿ ನವಿಲುಗಳು ರೆಕ್ಕೆ ಬಿಚ್ಚಿ ಕುಣಿದಾಡುತ್ತಿವೆ‌. ನವಿಲುಗಳು ಗರಿಬಿಚ್ಚಿ ಆಕಸ್ಮಿಕವಾಗಿ ಅಡ್ಡಾಡುತ್ತಿರುವ ವಿಡಿಯೊವೊಂದು ಭಾರೀ ವೈರಲ್ ಆಗುತ್ತಿದೆ...

ಮುಂಬೈ ರಸ್ತೆಯಲ್ಲಿ ಹೆಜ್ಜೆ ಹಾಕಿದ ನವಿಲುಗಳು

ಮುಂಬೈ, ಜೂ‌.24: ವಾಣಿಜ್ಯ ನಗರಿ ಅಂದಾಗ ಅಲ್ಲಿನ ಆಧುನಿಕ ತಂತ್ರಜ್ಞಾನ, ಗಮನ ಸೆಳೆಯುವ ಕಟ್ಟಡಗಳು, ಟ್ರಾಫಿಕ್ ನಡುವೆ ನೆರೆದಿರುವ ಜನ ಸಾಗರವೇ ನೆನಪಿಗೆ ಬರುತ್ತದೆ.‌ ಆದರೆ ಇದೀಗ ಪ್ರಕೃತಿ ಪ್ರಿಯರನ್ನು ಗಮನ ಸೆಳೆಯುವಂತ ದೃಶ್ಯವೊಂದು ಕಂಡು ಬಂದಿದೆ. ಮುಂಬೈಗೆ ನೈಋತ್ಯ ಮುಂಗಾರಿನ ಆಗಮನ ಆಗುತ್ತಿದ್ದಂತೆ ಪ್ರಸಿದ್ಧ ಪೆದ್ದರ್ ರಸ್ತೆಯಲ್ಲಿ ನವಿಲುಗಳು ರೆಕ್ಕೆ ಬಿಚ್ಚಿ ಕುಣಿದಾಡುತ್ತಿವೆ‌. ನವಿಲುಗಳು ಗರಿಬಿಚ್ಚಿ ಆಕಸ್ಮಿಕವಾಗಿ ಅಡ್ಡಾಡುತ್ತಿರುವ ವಿಡಿಯೊವೊಂದು ಭಾರೀ ವೈರಲ್ (Viral News) ಆಗುತ್ತಿದೆ.

ಇಂತಹ ದೃಶ್ಯವನ್ನು ಹೆಚ್ಚಾಗಿ ಹಳ್ಳಿ ಪ್ರದೇಶದಲ್ಲಿ ಮಾತ್ರ ಕಣ್ತುಂಬಿಕೊಳ್ಳಬಹುದು. ಆದರೆ ಈ ಭಾರೀ ಮುಂಬೈ ನಲ್ಲಿ ಮಳೆಯ ಆಗಮನವಾಗುತ್ತಿದ್ದಂತೆ ನವಿಲುಗಳು ಕೂಡ ರಾಜಾರೋಷವಾಗಿ ರಸ್ತೆಯಲ್ಲಿ ತಿರುಗಾಡುತ್ತೀವೆ‌. ಈ ವಿಡಿಯೊ ಪ್ರಕೃತಿ ಪ್ರಿಯರ ಗಮನ ಸೆಳೆದಿದ್ದು ನಿಜಕ್ಕೂ ಮುಂಬೈ ನಲ್ಲಿ ಇಂತಹ ದೃಶ್ಯ ಕಂಡುಬಂದಿರುವುದು ಆಶ್ಚರ್ಯ ಎಂದಿದ್ದಾರೆ.

ವಿಡಿಯೊ ನೋಡಿ:



ವೈರಲ್‌ ವಿಡಿಯೊದಲ್ಲಿ, ನವಿಲುಗಳ ಗುಂಪು ಪೆಡ್ಡರ್ ರಸ್ತೆಯಲ್ಲಿ ತಮ್ಮ ಪಾಡಿಗೆ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಮತ್ತೊಂದು ವಿಡಿಯೊ ಕೆಂಪ್ಸ್ ಕಾರ್ನರ್ ಪ್ರದೇಶದಲ್ಲಿ ಬಾಲ್ಕನಿ ರೇಲಿಂಗ್ ಮೇಲೆ ನವಿಲು ಆತ್ಮವಿಶ್ವಾಸದಿಂದ ಕುಳಿತಿರುವುದು ಕಂಡುಬಂದಿದೆ. ಮಳೆಯ ಆಗಮನದಿಂದ ನಗರದಲ್ಲಿ ತಂಪಾದ ವಾತಾವರಣ ನಿರ್ಮಾಣವಾಗಿದೆ. ಈ ಬೆನ್ನಲ್ಲೇ ರಸ್ತೆಗೆ ಇಳಿದ ನವಿಲುಗಳ ಗುಂಪು ರಸ್ತೆಯಲ್ಲೇ ಯಾವುದೇ ಭಯವಿಲ್ಲದೆ ಆರಾಮವಾಗಿ ಹೆಜ್ಜೆ ಹಾಕಿದ್ದಾವೆ.

Viral Video: ಭೀಕರ ಅಲೆಗಳಿಂದ ವೃದ್ಧರ ಪ್ರಾಣ ಉಳಿಸಿ ಕಪಾಳಮೋಕ್ಷ ಮಾಡಿದ ಯುವಕ; ಕಾರಣವೇನು?

ಈ ಅನಿರೀಕ್ಷಿತ ನೋಟ ದಾರಿಹೋಕರ ಗಮನವನ್ನು ಸೆಳೆದಿದ್ದು ಮನಮೋಹಕ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ ದೃಶ್ಯವನ್ನು ಹಂಚಿಕೊಂಡ ಇನ್‌ಸ್ಟಾಗ್ರಾಮ್ ಬಳಕೆದಾರರು ಈ ಮಳೆಯ ಆರಂಭಕ್ಕೆ ಕ್ಷಣಗಣನೆಎಂದು ಬಣ್ಣಿಸಿದ್ದಾರೆ. ಒಬ್ಬ ಬಳಕೆದಾರರು "ಮುಂಬೈ ಎಂದಿಗೂ ವಿಶೇಷ ಅನುಭವ ನೀಡುವಲ್ಲಿ ಮುಂಚುಣಿಯಲ್ಲಿದೆ, ಇದು ಸುಂದರವಾಗಿದೆ" ಎಂದು ಹೇಳಿದರು...