ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆನೆಗೆ ಬೆಲ್ಲ ತಿನ್ನಿಸಲು ಹೋಗಿ ಪ್ರಾಣ ಕಳೆದುಕೊಂಡ ಆಟೋ ಚಾಲಕ; ದಾಳಿಯ ಭಯಾನಕ ವಿಡಿಯೊ ವೈರಲ್

Viral Video: ಆಟೋರಿಕ್ಷಾ ಚಾಲಕನೊಬ್ಬ ಆನೆಗೆ ಬೆಲ್ಲ ತಿನ್ನಿಸಲು ಹೋಗಿ ಅದರ ದಿಢೀರ್ ದಾಳಿಯಿಂದ ಸಾವನ್ನಪ್ಪಿದ್ದಾನೆ. ಮೃತನನ್ನು ರಾಜ್ ನಗರ ಪೊಲೀಸ್ ಹೊರಠಾಣೆ ಬಳಿಯ ರಾಜ್ ನಗರದ ನಿವಾಸಿ ವಿಜಯ್ ಅಲಿಯಾಸ್ ಲಕ್ಷ್ಮಣ್ ರಾವ್ ಹೋಳ್ಕರ್ ಎಂದು ಗುರುತಿಸಲಾಗಿದೆ. ಈ ಅಘಾತಕಾರಿ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಆನೆ ತುಳಿತಕ್ಕೆ ಸಿಲುಕಿ ಆಟೋ ಚಾಲಕ ಸಾವು

ಭೋಪಾಲ್‌, ಜು. 28: ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಆಟೋರಿಕ್ಷಾ ಚಾಲಕನೊಬ್ಬ ಆನೆಗೆ ಬೆಲ್ಲ ತಿನ್ನಿಸಲು ಹೋಗಿ ಅದರ ದಿಢೀರ್ ದಾಳಿಯಿಂದ ಸಾವನ್ನಪ್ಪಿದ್ದಾನೆ. ಮೃತನನ್ನು ರಾಜ್ ನಗರ ಪೊಲೀಸ್ ಹೊರಠಾಣೆ ಬಳಿಯ ರಾಜ್ ನಗರದ ನಿವಾಸಿ ವಿಜಯ್ ಅಲಿಯಾಸ್ ಲಕ್ಷ್ಮಣ್ ರಾವ್ ಹೋಳ್ಕರ್ ಎಂದು ಗುರುತಿಸ ಲಾಗಿದೆ. ಈ ಅಘಾತಕಾರಿ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.

ಈ ಘಟನೆ ಸಂಜೆ 4:30ರ ಸುಮಾರಿಗೆ ಚಂದನ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಧಾರ್ಮಿಕ ಕಾರ್ಯಕ್ರಮವೊಂದಕ್ಕಾಗಿ ಉಜ್ಜಯಿನಿಯಿಂದ ಇಂದೋರ್‌ಗೆ ಆನೆಯನ್ನು ಕರೆ ತರಲಾಗಿತ್ತು. ಬಳಿಕ ಆನೆಯನ್ನು ಅದರ ಮಾವುತನ ಜತೆಗೆ ದೇಣಿಗೆ ಸಂಗ್ರಹಿಸಲು ರಾಜ್ ನಗರದ ಸುತ್ತಲೂ ಕರೆದೊಯ್ಯಲಾಯಿತು. ಈ ವೇಳೆ ವಿಜಯ್ ಆನೆಗೆ ಬೆಲ್ಲ ತಿನ್ನಿಸಲು ಮುಂದಾಗಿದ್ದರು.

ವಿಡಿಯೊ ನೋಡಿ:



ಆದರೆ ಆನೆಯೂ ಇದ್ದಕ್ಕಿದ್ದಂತೆ ಭಯಗೊಂಡಿದ್ದು, ದಾಳಿ ನಡೆಸಿತು. ತನ್ನ ಸೊಂಡಿಲಿನಲ್ಲಿ ಆತನನ್ನು ಎತ್ತಿ, ನೆಲಕ್ಕೆ ಎಸೆದು, ನಂತರ ಅವನ ಎದೆಯ ಮೇಲೆ ಕಾಲಿಟ್ಟಿದೆ ಎಂದು ವರದಿಯಾಗಿದೆ. ಅಲ್ಲಿ ನೆರೆದಿದ್ದ ಜನರು ತಕ್ಷಣ ವಿಜಯ್‌ಗೆ ಸಹಾಯ ಮಾಡಲು ಮುಂದೆ ಬಂದಿದ್ದು ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಯೋಧ ಯಾವತ್ತಿದ್ದರೂ ಯೋಧನೇ; ಚಾರ್ಜ್‌ ಖಾಲಿಯಾದ ಮಹಿಳೆಯ ಎಲೆಕ್ಟ್ರಿಕ್‌ ಕಾರ್‌ ತಳ್ಳಿದ ಸೈನಿಕ

ಬಳಿಕ ಕುಟುಂಬವು ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದರೂ ಅಷ್ಟರಲ್ಲಿ ಮೃತಪಟ್ಟಿದ್ದರು. ಈ ಘಟನೆ ನಡೆದ ಸಂದರ್ಭದಲ್ಲಿ ಮೃತ ವಿಜಯ್ ಕುಡಿತದ ಅಮಲಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

ಚಂದನ್ ನಗರ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆನೆಯ ಜತೆಗಿದ್ದ ಮಾವುತನನ್ನು ವಿಚಾರಣೆ ನಡೆಸಿದ್ದು ದಾಳಿಗೆ ಕಾರಣವಾದ ಸಂದರ್ಭಗಳನ್ನು ಕಂಡುಹಿಡಿಯಲು ಪರಿಶೀಲನೆ ನಡೆಸುತ್ತಿದ್ದಾರೆ.