ತಿರುವನಂತಪುರಂ: ಕೇರಳದ ಭಾರತ್ ಪೆಟ್ರೋಲಿಯಂ ಬಂಕ್‍ನಲ್ಲಿ ಆಟೋಗೆ ಪೆಟ್ರೋಲ್ ತುಂಬಿಸಿಕೊಳ್ಳಲು ಬಂದ ಆಟೋ ಚಾಲಕನೊಬ್ಬ ಪೆಟ್ರೋಲ್ ಪಂಪ್ ಕೌಂಟರ್‌ಗೆ ಡಿಕ್ಕಿ ಹೊಡೆದ ಘಟನೆಯೊಂದು ನಡೆದಿದೆ. ಈ ವಿಡಿಯೊ ಪೆಟ್ರೋಲ್ ಬಂಕ್‍ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ನೆಟ್ಟಿಗರು ವಿಡಿಯೊ ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ. ವೈರಲ್ ವಿಡಿಯೊದಲ್ಲಿ ಕಪ್ಪು ಮತ್ತು ಹಳದಿ ಬಣ್ಣದ ಆಟೋರಿಕ್ಷಾ ಪೆಟ್ರೋಲ್ ಬಂಕ್ ಬಳಿ ಬಂದಿರುವುದು ಸೆರೆಯಾಗಿದೆ. ನಂತರ ಆಟೋ ಟರ್ನ್ ಮಾಡುವಾಗ ಅದರ ವೇಗ ಇದ್ದಕ್ಕಿದ್ದಂತೆ ಹೆಚ್ಚಾಗಿ ಪಂಪ್‍ಗೆ ಡಿಕ್ಕಿ ಹೊಡೆದಿದೆ. ಆದರೆ ಈ ಘಟನೆಯಲ್ಲಿ ಆತ ತನ್ನ ಸೀಟಿನಿಂದ ಕೆಳಗೆ ಬಿದ್ದಿದ್ದಾನೆ. ಇದರಿಂದ ಪೆಟ್ರೋಲ್ ಬಂಕ್‍ಗಾಗಲಿ, ಚಾಲಕನಿಗಾಗಲಿ ಯಾವುದೇ ಹಾನಿಯಾಗಲಿಲ್ಲ.
ಘಟನೆಗೆ ಕಾರಣವೇನು?
ಕೇರಳದ ಭಾರತ್ ಪೆಟ್ರೋಲಿಯಲ್ ಬಂಕ್‌ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆದರೆ ನಿಖರವಾದ ಸ್ಥಳವು ಇನ್ನೂ ಸ್ಪಷ್ಟವಾಗಿಲ್ಲ. ಹಾಗೂ ಈ ಅಜಾಗರೂಕ ಕೃತ್ಯಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದಿಲ್ಲ. ಇದು ಸಿಟ್ಟಿನಿಂದ ಮಾಡಿದ್ದೇ ಅಥವಾ ಬ್ರೇಕ್ ಫೇಲ್ ಅಥವಾ ವೈರಲ್ ಆಗಲು ರಚಿಸಲಾದ ರೀಲ್ ಆಗಿರಬಹುದೇ ಎಂಬ ಅನುಮಾನ ಕಾಡಿದೆ ಎಂಬ ಬಗ್ಗೆ ಯಾವುದೇ ಅಧಿಕೃತ ವಿವರಣೆ ತಿಳಿದುಬಂದಿಲ್ಲ. ಆದರೆ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಟೋ ಪೆಟ್ರೋಲ್ ಬಂಕ್‌ಗೆ ಡಿಕ್ಕಿ ಹೊಡೆದ ದೃಶ್ಯ ಇಲ್ಲಿದೆ ನೋಡಿ
ಈ ವಿಡಿಯೊಗೆ ಹಲವು ನೆಟ್ಟಿಗರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವು ನೆಟ್ಟಿಗರು ಈ ವಿಡಿಯೊಗೆ ತಮಾಷೆಯಾಗಿ ಕಾಮೆಂಟ್ ಮಾಡಿದರೆ, ಕೆಲವರು ಚಾಲಕನನ್ನು ಜೆಸಿಬಿ ಆಪರೇಟರ್‌ಗೆ ಹೋಲಿಸಿದ್ದಾರೆ. “ಅವರು ತಮ್ಮ ಆಟೋ ರಿಕ್ಷಾವನ್ನು ಜೆಸಿಬಿ ಎಂದು ತಪ್ಪಾಗಿ ಭಾವಿಸಿ ಪೆಟ್ರೋಲ್ ಬಂಕ್ ಅನ್ನು ನೆಲಸಮಗೊಳಿಸುವ ಕೆಲಸಕ್ಕೆ ಪ್ರಯತ್ನಿಸಿರಬೇಕು” ಎಂದು ಒಬ್ಬರು ವ್ಯಂಗ್ಯವಾಡಿದ್ದಾರೆ. "ಅವರು ಜೆಸಿಬಿ ಓಡಿಸುತ್ತಿದ್ದಾರೆಂದು ಭಾವಿಸಿದ್ದರು" ಎಂದು ಇನ್ನೊಬ್ಬರು ಬರೆದಿದ್ದಾರೆ.
ಪೆಟ್ರೋಲ್ ಬಂಕ್‌ನ ಮೇಲ್ಛಾವಣಿ ಕುಸಿದು ವ್ಯಕ್ತಿ ಸಾವು!
ಪೆಟ್ರೋಲ್ ಬಂಕ್‍ಗಳಲ್ಲಿ ಅಪಾಯಗಳು ಸಂಭವಿಸಿದ ಘಟನೆಗಳು ಈ ಹಿಂದೆ ವರದಿಯಾಗಿತ್ತು. ಈ ಹಿಂದೆ ಚೆನ್ನೈನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸೈದಾಪೇಟೆಯಲ್ಲಿರುವ ಇಂಡಿಯನ್ ಆಯಿಲ್ ಇಂಧನ ಕೇಂದ್ರದ ಮೇಲ್ಛಾವಣಿ ಕುಸಿದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಕನಿಷ್ಠ 10 ಜನರು ಗಾಯಗೊಂಡಿದ್ದ ಘಟನೆ ನಡೆದಿತ್ತು. ಮಳೆ ನೀರಿನ ಭಾರದಿಂದ ಛಾವಣಿ ಕುಸಿದಿದೆಯೇ ಅಥವಾ ಸಿಡಿಲು ಬಡಿದು ಮರದ ಕೊಂಬೆ ಅದರ ಮೇಲೆ ಬಿದ್ದಿದ್ದರಿಂದ ಅದು ಕುಸಿದಿದೆಯೇ ಎಂದು ಪೊಲೀಸರು ತನಿಖೆ ಮಾಡಿದ್ದರು. ಮೃತಪಟ್ಟ ವ್ಯಕ್ತಿಯನ್ನು ಮಧುರಂಗಕಂನ ಕಂದಸಾಮಿ (54) ಎಂದು ಗುರುತಿಸಲಾಗಿದ್ದು, ಸೈದಾಪೇಟೆಯ ಈಸ್ಟ್ ಜೋನ್ಸ್ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಉದ್ಯೋಗಿಯಾಗಿದ್ದರು ಎನ್ನಲಾಗಿದೆ.