ದಿಸ್ಪುರ: ದುರ್ಗಾ ಪೂಜೆ ಸಂದರ್ಭದಲ್ಲಿ ಹಠಾತ್ ಬಿರುಗಾಳಿ ಬೀಸಿದ್ದರಿಂದ ಬೃಹತ್ ಹೋರ್ಡಿಂಗ್ ಕುಸಿದು ಬಿದ್ದಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಅಸ್ಸಾಂನ (Assam) ಸಿಲ್ಚಾರ್‌ನಲ್ಲಿ ಈ ಘಟನೆ ನಡೆದಿದ್ದು, ಆಟೋ ಮೇಲೆ ಹೋರ್ಡಿಂಗ್ ಬಿದ್ದಿದೆ. ಅದೃಷ್ಟವಶಾತ್ ಆಟೋ ಚಾಲಕ (Auto driver) ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಚಂಡಮಾರುತವು ಕಚಾರ್ ಜಿಲ್ಲೆಯಾದ್ಯಂತ ಹಾನಿಯನ್ನುಂಟು ಮಾಡಿದೆ. ದುರ್ಗಾ ಪೂಜಾ ಪೆಂಡಲ್‌ಗಳು ಮತ್ತು ಇತರ ತಾತ್ಕಾಲಿಕ ರಚನೆಗಳೂ ಕುಸಿದಿವೆ. ಬೃಹತ್ ಹೋರ್ಡಿಂಗ್ ಆಟೋ ಮೇಲೆ ಬಿದ್ದಿರುವ ಭಯಾನಕ ಕ್ಷಣವನ್ನು ಸೆರೆಹಿಡಿದಿರುವ ಘಟನೆಯ ವಿಡಿಯೊ ವೈರಲ್ ಆಗಿದೆ. ಈಗ ವೈರಲ್ ಆಗಿರುವ ವಿಡಿಯೊದಲ್ಲಿ ಕಂಡುಬರುವಂತೆ, ಹೋರ್ಡಿಂಗ್ ಆಟೋ ಮೇಲೆ ಬೀಳುತ್ತಿದ್ದಂತೆ ಚಾಲಕ ಹೊರಗೆ ಓಡಿದ್ದಾನೆ. ಗಾಬರಿಗೊಂಡ ಆತ ತನ್ನನ್ನು ತಾನು ಉಳಿಸಿಕೊಳ್ಳಲು ಓಡಿಹೋಗಿ ನೆಲಕ್ಕೆ ಬಿದಿದ್ದಾನೆ. ಈ ವೇಳೆ ಆಟೋ ನಜ್ಜುಗುಜ್ಜಾಗಿದೆ. ಆಘಾತದಿಂದ ತನ್ನ ನಜ್ಜುಗುಜ್ಜಾದ ವಾಹನವನ್ನು ಆತ ನೋಡುತ್ತಾ ನಿಂತಿದ್ದಾನೆ.
ವಿಡಿಯೊ ವೀಕ್ಷಿಸಿ:
ಹೋರ್ಡಿಂಗ್ ಕುಸಿದು ಎರಡು ಸಣ್ಣ ಕಾರುಗಳು, ಒಂದು ಸ್ಕೂಟರ್ ಮತ್ತು ಒಂದು ಮೋಟಾರ್ ಸೈಕಲ್ ಜಖಂಗೊಂಡಿದ್ದು, ಗಂಟೆಗಟ್ಟಲೆ ಸಂಚಾರಕ್ಕೆ ಅಡ್ಡಿಯುಂಟಾಯಿತು. ದುರ್ಗಾ ಪೂಜೆ ಹಬ್ಬದ ಸಂದರ್ಭದಲ್ಲಿ ಅಪಾರ ಭಕ್ತರು ಅಲ್ಲಿ ಸೇರಿದ್ದರು. ಹೀಗಾಗಿ ಘಟನೆಯು ಭಕ್ತರಲ್ಲಿ ಭೀತಿಯನ್ನುಂಟು ಮಾಡಿತು. ಅದೃಷ್ಟವಶಾತ್, ಯಾವುದೇ ಸಾವುವನೋವು ಸಂಭವಿಸಿಲ್ಲ.
ಪರಿಸ್ಥಿತಿಯನ್ನು ನಿರ್ವಹಿಸಲು ಅಸ್ಸಾಂ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿದರು. ಸುಮಾರು ಒಂದು ಗಂಟೆಯ ಪ್ರಯತ್ನದ ನಂತರ ರಸ್ತೆಯನ್ನು ತೆರವುಗೊಳಿಸಲಾಯಿತು.
ಸಿಲ್ಚಾರ್‌ನಾದ್ಯಂತ ದುರ್ಗಾ ಪೂಜೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹೀಗಾಗಿ ಬೃಹತ್ ಪೆಂಡಾಲ್‍ಗಳನ್ನು ಹಾಕಲಾಗಿದೆ. ಆದರೆ ಬಿರುಗಾಳಿ ಮತ್ತು, ಭಾರಿ ಮಳೆಯು ಅಸ್ತವ್ಯಸ್ತ ಉಂಟು ಮಾಡಿದೆ.
ಇದನ್ನೂ ಓದಿ: Viral Video: ದಸರಾ ಕಾರ್ಯಕ್ರಮಕ್ಕೆ ಶೂ ಧರಿಸಿ ಬಂದ ತಹಸೀಲ್ದಾರ್ ಮೇಲೆ ಅಟ್ಯಾಕ್! ವಿಡಿಯೊ ನೋಡಿ