ಬೆಂಗಳೂರು, ಜೂ.19: ಇಂದು ನಗರ ಪ್ರದೇಶದಲ್ಲಿ ಜೀವನ ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ. ರೂಮ್ ಬಾಡಿಗೆ, ದೈನಂದಿನ ಖರ್ಚು ವೆಚ್ಚ ಎಂದು ದುಡಿದ ಅರ್ಧದಷ್ಟು ಭಾಗ ವ್ಯಯಿಸಬೇಕಾಗುತ್ತದೆ. ಅದರಲ್ಲೂ ಬೆಂಗಳೂರು ಅಂದಕ್ಷಣ ಇಲ್ಲಿ ಆಧುನಿಕ ಜೀವನ ಶೈಲಿ ಅನುಸರಿಸಲೆಂದೇ ಹಣ ನಿಗದಿಪಡಿಸಬೇಕಾಗುತ್ತದೆ. ಇದೀಗ ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಯುವಕನೊಬ್ಬ ತನ್ನ ಗರ್ಲ್ ಫ್ರೆಂಡ್ ನ ತಿಂಗಳ ಖರ್ಚು ಕಂಡು ದಂಗಾಗಿ ಹೋಗಿದ್ದಾನೆ. ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳಿಗೆ ಇಷ್ಟೊಂದು ಖರ್ಚು? ಎಂದು ಆತ ಸೋಷಿಯಲ್ ಮೀಡಿಯಾದಲ್ಲಿ (Viral News) ಅಚ್ಚರಿ ವ್ಯಕ್ತಪಡಿಸಿದ್ದಾನೆ.
ಬೆಂಗಳೂರಿನಲ್ಲಿ ಯುವಕನೊಬ್ಬ ತನ್ನ ಗೆಳತಿಯ ಮಾಸಿಕ ಖರ್ಚು- ವೆಚ್ಚಗಳ ಬಗ್ಗೆ ಪೋಸ್ಟ್ ವೊಂದನ್ನು ಶೇರ್ ಮಾಡಿ ಕೊಂಡಿದ್ದು ಚರ್ಚೆಗೆ ಕಾರಣವಾಗಿದೆ. ಈ ಪೋಸ್ಟ್‌ನಲ್ಲಿ, ಕಾಫಿ, ಟೀ ಚರ್ಮದ ಆರೈಕೆಯಿಂದ ಹಿಡಿದು ಬಾಡಿಗೆ ಮತ್ತು ಶಾಪಿಂಗ್‌ವರೆಗೆ ಎಲ್ಲವನ್ನೂ ಪಟ್ಟಿ ಮಾಡಿದ್ದಾರೆ. ಇದರ ಒಟ್ಟು ಮೊತ್ತ ಕಂಡು ತನಗೆ ಗಣಿತವೇ ಮರೆತು ಹೋಗಿದೆ ಎಂದು ಯುವಕ ತಮಾಷೆ ಮಾಡಿದ್ದಾನೆ.
ವಿಡಿಯೋ
ಈಕೆಯ ಇಂದಿರಾನಗರದ ಅಪಾರ್ಟ್‌ಮೆಂಟ್‌ಗೆ ತಿಂಗಳಿಗೆ 35,000, ಫೋರಂ ಅಥವಾ ಫೀನಿಕ್ಸ್ ಮಾಲ್‌ಗಳಲ್ಲಿನ ಶಾಪಿಂಗ್‌ಗೆ 15,000, ಜಾರಾ ಬ್ರ್ಯಾಂಡ್ ಹಾಗೂ ಓವರ್‌ಸೈಸ್ಡ್ ಹೂಡೀಸ್ ಖರೀದಿಗೆ 12,000 ರೂ ನಿಗದಿ ಪಡಿಸಬೇಕು. ವಾರಾಂತ್ಯದಲ್ಲಿ ಪ್ರಸಿದ್ಧ ಕೆಫೆಗಳಲ್ಲಿನ ಊಟಕ್ಕೆ 11,000, ಸೌಂದರ್ಯವರ್ಧಕ ಉತ್ಪನ್ನಗಳಿಗಾಗಿ ತಿಂಗಳಿಗೆ 8,000 ಹಾಗೂ ಕ್ಯಾಬ್ ಸೇವೆಗಾಗಿ 7,000 ರೂ.ಎಂದು ಪಟ್ಟಿ ಮಾಡಲಾಗಿದೆ.
Viral Video: ವಾರಾಣಸಿ ಕೋರ್ಟ್‌ನಲ್ಲಿ ಮಹಿಳೆಯ ಹುಚ್ಚಾಟ; ನ್ಯಾಯಾಧೀಶರ ಕುರ್ಚಿಯಲ್ಲಿಯೇ ಕುಳಿತು 'ಆರ್ಡರ್' ಎಂದು ಆದೇಶ
ಪ್ರತಿ 3 ವಾರಕೊಮ್ಮೆ ತೆರಳುವ ಸಲೋನ್ ವೆಚ್ಚ 6,650 ಆಗುತ್ತದೆ. ತಿಂಗಳಿಗೆ 2 ಬಾರಿ ಮಾತ್ರ ಹೋಗುವ ಜಿಮ್‌ಗೆ 4,000 ನೀಡಲಾಗುತ್ತದೆ. ನೆಟ್‌ಫ್ಲಿಕ್ಸ್, 3,500 ಖರ್ಚಾಗುತ್ತದೆ. ಈಗ ಸರಿ ಸುಮಾರು1,08,650 ರೂ ಎಂದು ಯುವಕ ಪೋಸ್ಟ್ ನಲ್ಲಿ ತಿಳಿಸಿದ್ದಾನೆ .ಈ ಬಗ್ಗೆ ನೆಟ್ಟಿಗರು ಕೂಡ ನಾನಾ ರೀತಿಯ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಇಲ್ಲಿ ಅತ್ಯಂತ ದುಬಾರಿ ವಸ್ತು ಜರಾ ಅಲ್ಲ. ಅದು ಇಂದಿರಾನಗರ ಅಪಾರ್ಟ್ ಮೆಂಟ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಈ ರೀತಿಯ ಐಷಾರಾಮಿ ಜೀವನಶೈಲಿಯನ್ನು ನಡೆಸಲು 35 ಲಕ್ಷದಿಂದ 40 ಲಕ್ಷ ರೂಪಾಯಿ ಪ್ಯಾಕೇಜ್ ಇರುವ ಕೆಲಸ ಇರಬೇಕು ಎಂದು ಬರೆದಿದ್ದಾರೆ.