ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral News: ನಾಯಿಯ ಪಾಲನೆಗೆ ತಿಂಗಳಿಗೆ 15,000 ರೂ. ಖರ್ಚು! ಬೆಂಗಳೂರಿನ ದಂಪತಿ ಶ್ವಾನ ಪ್ರೇಮ

ದಂಪತಿ ನಾಯಿಯ ಪಾಲನೆಗೆ ದುಪ್ಪಟ್ಟು ಹಣ ವ್ಯಯಿಸುತ್ತಿರುವ ಸುದ್ದಿವೊಂದು ಭಾರೀ ವೈರಲ್ ಆಗಿದೆ. ಅವರು ತಮ್ಮ ನಾಯಿಗಾಗಿ ತಿಂಗಳಿಗೆ ಸುಮಾರು ರೂ. 12,000 ರಿಂದ ರೂ. 15,000 ಖರ್ಚು ಮಾಡುತ್ತಾರೆ. ಆದರೆ ಇದು ಅವರ ಸ್ವಂತ ದಿನಸಿ ವೆಚ್ಚಗಳನ್ನು ಕೂಡ ಮೀರುತ್ತದೆ.

ಸಂಗ್ರಹ ಚಿತ್ರ

ಬೆಂಗಳೂರು,ಮಾ.28: ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಬದುಕು ಸಾಗಿಸಲು ದುಬಾರಿ ಖರ್ಚಾಗುತ್ತದೆ ಎಂಬುದನ್ನು ಹಲವಾರು ಹೇಳುತ್ತಾರೆ. ಆದರೆ ದಂಪತಿ ನಾಯಿಯ ಪಾಲನೆಗೆ ದುಪ್ಪಟ್ಟು ಹಣ ವ್ಯಯಿಸುತ್ತಿರುವ ಸುದ್ದಿವೊಂದು ಭಾರೀ ವೈರಲ್ (Viral News) ಆಗಿದೆ. ಅವರು ತಮ್ಮ ನಾಯಿಗಾಗಿ ತಿಂಗಳಿಗೆ ಸುಮಾರು ರೂ. 12,000 ರಿಂದ ರೂ. 15,000 ಖರ್ಚು ಮಾಡುತ್ತಾರೆ. ಆದರೆ ಇದು ಅವರ ಸ್ವಂತ ದಿನಸಿ ವೆಚ್ಚಗಳನ್ನು ಕೂಡ ಮೀರುತ್ತದೆ.

ಬೆಂಗಳೂರು ಮೂಲದ ದಂಪತಿಗಳು ತಮ್ಮ ಸಾಕು ನಾಯಿಗಾಗಿ ಖರ್ಚು ಮಾಡುವ ಐಷಾರಾಮಿ ಖರ್ಚು ಇದೀಗ ಚರ್ಚೆಯನ್ನು ಹುಟ್ಟುಹಾಕಿದೆ. ತಮ್ಮ ವೈಯಕ್ತಿಕ ವೆಚ್ಚಗಳಿಗಿಂತ ತಮ್ಮ ಸಾಕು ಪ್ರಾಣಿಗಳಿಗೆ ಹೇಗೆ ಆದ್ಯತೆ ನೀಡುತ್ತಿದ್ದಾರೆ ಎಂಬುದು ಇಲ್ಲಿ ಕಂಡು ಬರುತ್ತದೆ.

Viral Video: ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ಬೀದಿ ನಾಯಿಗಳಿಗೆ ರಾಯಲ್‌ ಟ್ರೀಟ್‌ಮೆಂಟ್‌; ವೈರಲ್‌ ಆಗ್ತಿದೆ ವಿಡಿಯೋ

ಸದ್ಯ ಈ ಡಿಂಕ್‌ವಾಡ್ ಟ್ರೆಂಡ್ (DINKWAD) ಭಾರೀ ಸುದ್ದಿಯಲ್ಲಿದೆ. ಆಂದ್ರೆ ಡಬಲ್ ಇನ್ಕಮ್, ಮಕ್ಕಳಿಲ್ಲ ಅಂದರ್ಥ ಪತಿ- ಪತ್ನಿ ಇಬ್ಬರು ಕೆಲಸ ಮಾಡುತ್ತಿದ್ದು ಮಕ್ಕಳು ಇಲ್ಲದೆ ಸಾಕು ನಾಯಿಯನ್ನೇ ಸಾಕುವುದು. ನಗರ ಪ್ರದೇಶದಲ್ಲಿ ಇತ್ತೀಚೆಗೆ ಇಂತಹ ಟ್ರೆಂಡ್ ಹೆಚ್ಚಾಗಿದೆ. ಗೋಕ್ವೆಸ್ಟ್ ಸಂಸ್ಥಾಪಕ ಗಗನ್ ಅರೋರಾ ಅವರು ಇಂದಿರಾನಗರದಲ್ಲಿರುವ ದಂಪತಿಗಳ ಮನೆಗೆ ಭೇಟಿ ನೀಡಿದ ನಂತರ ಈ ಸ್ಟೋರಿ ಶೇರ್ ಮಾಡಿಕೊಂಡಿದ್ದಾರೆ.

ಐಟಿ ಉದ್ಯೋಗಿಯಾಗಿ ಕೆಲಸ ಮಾಡುವ ಈ ದಂಪತಿ ಗೋಲ್ಡನ್ ರಿಟ್ರೈವರ್ ತಳಿಯ ನಾಯಿಯನ್ನು ಸಾಕುತ್ತಿದ್ದಾರೆ. ತಿಂಗಳಿಗೆ 12,000 ದಿಂದ 15,000 ರೂಪಾಯಿ ಖರ್ಚು ಮಾಡಿದ್ದಾರೆ‌. ವಿಶೇಷ ಸಂಗತಿ ಅಂದ್ರೆ ಅವರ ವೆಚ್ಚಕ್ಕಿಂತ ಹೆಚ್ಚು ನಾಯಿಗೆ ಅವರು ಜಾಸ್ತಿ ಹಣ ವ್ಯಯಿಸುತ್ತಾರೆ.

ಕೀಲುಗಳ ಆರೋಗ್ಯಕ್ಕಾಗಿ, ಅತ್ಯುತ್ತಮ ಗುಣಮಟ್ಟದ ಆಹಾರ ಅಂದಗೊಳಿಸುವಿಕೆ, ಪಶುವೈದ್ಯರ ಭೇಟಿಗಳು, ಆಟಿಕೆಗಳು ಇತ್ಯಾದಿಗೆ‌ ಸುಮಾರು ರೂ. 12,000 ರಿಂದ ರೂ. 15,000 ರೂಪಾಯಿ ಖರ್ಚು ಮಾಡುತ್ತಾರೆ. ಫ್ರಿಡ್ಜ್‌ನಲ್ಲಿ ನಾಯಿಗಾಗಿಯೇ ಪ್ರತ್ಯೇಕ ಶೆಲ್ಫ್ ಮೀಸಲಿಡಲಾಗಿದ್ದು, ದಿನಕ್ಕಾಗುವಷ್ಟು ಚಿಕನ್ ತುಂಡುಗಳನ್ನು ಸಿದ್ದಪಡಿಸಿ ಇಡುತ್ತಾರೆ. ಈ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.