ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ರೂಮ್ ಹುಡುಕುತ್ತಿದ್ದ ಯುವಕನಿಗೆ ಶಾಕ್: ಮನೆ ಒಳಗಡೆ ಇರಬೇಕಾದ್ರೆ ಈ 'ವಿಚಿತ್ರ' ಕಂಡಿಷನ್‌ಗೆ ಒಪ್ಪಬೇಕು ಎಂದ ಮಾಲಕ

Viral News: ಇಲ್ಲೊಬ್ಬ ಯುವಕನಿಗೆ ಬೆಂಗಳೂರಿನಲ್ಲಿ ಮನೆ ಹುಡುಕಾಟದಲ್ಲಿದ್ದಾಗ ವಿಚಿತ್ರ ಅನುಭವವೊಂದು ಎದುರಾಗಿದೆ. ಕೊರಮಂಗಲದಲ್ಲಿ ಫ್ಲಾಟ್ ಹುಡುಕುತ್ತಿದ್ದ ಪ್ರಣವ್ ಎಂಬವರು ತಮಗೆ ಎದುರಾದ ವಿಚಿತ್ರ ಸಂದೇಶದ ಸ್ಕ್ರೀನ್ ಶಾಟ್ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ ಅನೇಕ ಸೋಷಿಯಲ್ ಮೀಡಿಯಾ ಬಳಕೆದಾರರನ್ನು ಗೊಂದಲಕ್ಕೀಡು ಮಾಡಿದೆ.

ರೂಮ್ ಬಾಡಿಗೆ ನೀಡಲು ಯುವಕನಿಗೆ ವಿಚಿತ್ರ ಷರತ್ತು ವಿಧಿಸಿದ ಮಾಲಕ

ಬೆಂಗಳೂರು, ಜೂ. 11: ಸಿಲಿಕಾನ್ ಸಿಟಿ ಬೆಂಗಳೂರು ಎಂದಾಗ ಇಲ್ಲಿನ ಜೀವನಶೈಲಿ ಬಹಳಷ್ಟು ದುಬಾರಿ ಎಂಬುದು ಎಲ್ಲರಿಗೂ ತಿಳಿದಿದೆ. ಅದರಲ್ಲೂ ರೂಮ್ ಬಾಡಿಗೆಯಂತೂ ದುಪ್ಪಟ್ಟು ಪ್ರಮಾಣದಲ್ಲಿ ಪಾವತಿಸಬೇಕಾಗುತ್ತದೆ. ಹೀಗಾಗಿ ತಮಗೆ ಬೇಕಾದಂತೆ ರೂಮ್ ಹುಡುಕುವುದು ಬಹುತೇಕರಿಗೆ ದೊಡ್ಡ ತಲೆನೋವು. ಅದೇ ರೀತಿ ಇಲ್ಲೊಬ್ಬ ಯುವಕನಿಗೆ ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ದಾಗ ವಿಚಿತ್ರ ಅನುಭವವೊಂದು ಎದುರಾಗಿದೆ. ಕೊರಮಂಗಲದಲ್ಲಿ ಫ್ಲಾಟ್ ಹುಡುಕುತ್ತಿದ್ದ ಪ್ರಣವ್ ತಮಗೆ ಎದುರಾದ ವಿಚಿತ್ರ ಸಂದೇಶದ ಸ್ಕ್ರೀನ್ ಶಾಟ್ ಶೇರ್ (Viral News) ಮಾಡಿಕೊಂಡಿದ್ದಾರೆ. ಈ ಪೋಸ್ಟ್ ಅನೇಕ ಸೋಷಿಯಲ್ ಮೀಡಿಯಾ ಬಳಕೆದಾರರನ್ನು ಗೊಂದಲಕ್ಕೀಡು ಮಾಡಿದೆ.

ಮುಂಬೈಯಿಂದ ಬೆಂಗಳೂರಿಗೆ ಆಗಮಿಸಿದ ಯುವಕ ಕೊರಮಂಗಲದಲ್ಲಿ ಫ್ಲಾಟ್ ಹುಡುಕುತ್ತಿದ್ದರು.‌ ಅದರಂತೆ ಅವರಿಗೆ ಶೇರ್‌ ಮಾಡಿಕೊಳ್ಳಲು ಫ್ಲಾಟ್ ಏನೋ ಸಿಕ್ಕಿತು. ಆರಂಭದಲ್ಲಿ ಎಲ್ಲ ಓಕೆ ಆಗಿದ್ದು, ರೂಮ್‌ ಮೇಟ್‌ ಬೇಕಾಗಿದ್ದಾರೆ ಎಂದ ವ್ಯಕ್ತಿಯ ಜತೆ ಮಾತುಕತೆ ಸಾಮಾನ್ಯವಾಗಿತ್ತು. ಆದರೆ ರೂಮ್ ಖಾಲಿ ಇದೆ ಎಂದು ಹೇಳಿದ ವ್ಯಕ್ತಿ ಬಳಿಕ ವಿಚಿತ್ರ ವರ್ತನೆ ತೋರಿಸಿ ಬಿಟ್ಟಿದ್ದಾನೆ‌.

ವೈರಲ್‌ ಪೋಸ್ಟ್‌:



ಫ್ಲಾಟ್‌ನ ವ್ಯಕ್ತಿ ಯುವಕನ ಜತೆ ಅಸಭ್ಯವಾಗಿ ಚಾಟ್ ಮಾಡಿದ್ದಾನೆ. ಸ್ಕ್ರೀನ್‌ಶಾಟ್ ಪ್ರಕಾರ, ವ್ಯಕ್ತಿಯು ಫ್ಲಾಟ್ ಹಂಚಿಕೊಳ್ಳಲು ಕಿಂಕ್‌ಸ್ಟರ್‌ಗಳನ್ನು ಹುಡುಕುತ್ತಿದ್ದೇನೆ. ವಿಭಿನ್ನ ಲೈಂಗಿಕ ಆಸಕ್ತಿಗೆ ಆದ್ಯತೆ ನೀಡುವ ಸಬ್‌ಗಳು ಬೇಕು ಎಂದು ಸಂದೇಶ ಕಳುಹಿಸಿದ್ದಾನೆ. ​ಈ ವಿಚಿತ್ರ ಷರತ್ತಿನ ಜತೆಗೆ ಆತ ನೀಡಿದ ಆಫರ್ ನೋಡಿ ಯುವಕನೇ ಅಚ್ಚರಿ ಪಟ್ಟಿದ್ದಾನೆ.

ರೀಲ್ಸ್ ಕ್ರೇಜ್‌ಗಾಗಿ ಪತ್ನಿ ಜೊತೆಗಿನ 'ಖಾಸಗಿ' ವೀಡಿಯೋ ಶೇರ್ ಮಾಡಿದ ಯುವಕ

ಬೆಂಗಳೂರಿನ ಹೈಲೆಟೇಡ್ ಪ್ರದೇಶವಾದ ಕೊರಮಂಗಲದಲ್ಲಿ ಟಿವಿ, ಬೆಡ್, ವಾಷಿಂಗ್ ಮಷಿನ್ ಸೇರಿ ಎಲ್ಲ ಸೌಲಭ್ಯ ಇದ್ದ ಫ್ಲಾಟ್‌ಗೆ ಕೇವಲ 9,000 ರುಪಾಯಿ ಬಾಡಿಗೆ ಮತ್ತು ಕೇವಲ ಎರಡು ತಿಂಗಳ ಡೆಪಾಸಿಟ್‌ ನೀಡಿದಾರೆ ಸಾಕು ಎಂದಿದ್ದಾನೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಈತನ ವರ್ತನೆಯ ಬಗ್ಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದು, ಬೆಂಗಳೂರಿನಲ್ಲಿ ಯಾವ ರೀತಿಯ ಜನರು ವಾಸಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ನೆಟ್ಟಿಗರೊಬ್ಬರು, ʼʼಈ 'ಸಬ್' ಅಂದರೆ ಏನು? ಈ ನಾನು ಈ ಪ್ರಪಂಚದದಿಂದ ತುಂಬಾ ದೂರವಿದ್ದೇನೆʼʼ ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ‌‌. ಮತ್ತೊಬ್ಬರು, ʼʼಹೀಗೂ ಬೆಂಗಳೂರಿನಲ್ಲಿ ಕಡಿಮೆ ಬಾಡಿಗೆ ಪಡೆಯಬಹುದು. ಸುಮ್ಮನೆ ಸೇರಿಕೊಂಡುಬಿಡು ಬ್ರದರ್ʼʼ ಎಂದು ಯುವಕನ ಕಾಲೆಳೆದಿದ್ದಾರೆ.