ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರನ್ನು ರಾಷ್ಟ್ರ ರಾಜಧಾನಿ ಮಾಡಿ: ದಿಲ್ಲಿ ಯುವತಿ ಆಗ್ರಹ

viral video: ಸುರಕ್ಷತೆ ಕುರಿತು ಪ್ರಸ್ತಾವಿಸಿರುವ ಮಖಿಜಾ, ‘ರಾತ್ರಿ ಸಹ ಮಹಿಳೆಯರಿಗೆ ಬೆಂಗಳೂರು ಹೆಚ್ಚು ಸುರಕ್ಷಿತವಾಗಿದೆ. ಸ್ನೇಹಿತರನ್ನು ಭೇಟಿಯಾಗಿ, ರಾತ್ರಿ 10 ಗಂಟೆಗೆ ಒಬ್ಬಳೇ ಮನೆಗೆ ಹೋಗುವಾಗಲೂ ಹಿತಕರ ಅನುಭವವಾಯಿತು. ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಕಾಳಜಿಯ ವಿಷಯವಾಗಿಲ್ಲ. ಬೆಂಗಳೂರಿಗೆ ಆದ್ಯತೆ ಕೊಡಲು ಇದೂ ಒಂದು ಮುಖ್ಯ ಕಾರಣ’ ಎಂದಿದ್ದಾರೆ.

simridhi makhija

ಬೆಂಗಳೂರು, ಡಿ.27: ದೆಹಲಿಯ ಮಹಿಳೆಯೊಬ್ಬರು ಬೆಂಗಳೂರನ್ನು ದೇಶದ ರಾಜಧಾನಿಯಾಗಿ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು ಉತ್ತಮ ಗುಣಮಟ್ಟದ ಜೀವನವನ್ನು ನೀಡುತ್ತದೆ. ವಾಯುಗುಣಮಟ್ಟ, ಸುರಕ್ಷತೆ, ರಸ್ತೆ ವ್ಯವಸ್ಥೆ- ಎಲ್ಲ ದೃಷ್ಟಿಯಿಂದಲೂ ದೆಹಲಿಗಿಂತ ಬೆಂಗಳೂರೇ ರಾಜಧಾನಿಯಾಗಲು ಅರ್ಹವಾಗಿದೆ ಎಂದು ಯುವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ಈ ವಿಡಿಯೊ(viral video) ಭಾರೀ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳಿಗೆ ಗ್ರಾಸವಾಗಿದೆ.

ಸಮೃದ್ಧಿ ಮಖಿಜಾ ಎನ್ನುವ ದೆಹಲಿ ಮೂಲಕ ಯುವತಿ ಅಲ್ಲಿನ ಜೀವನದಿಂದ ಬೇಸತ್ತು 2 ತಿಂಗಳ ಹಿಂದೆ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಾರೆ. ಬೆಂಗಳೂರಿನ ಉತ್ತಮ ಜನಜೀವನದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್‌ ಮಾಡಿದ್ದಾರೆ.

ವಿಡಿಯೊದಲ್ಲಿ ಸಮೃದ್ಧಿ ಮಖಿಜಾ, 'ಇತ್ತೀಚೆಗೆ ತನ್ನ ಹೆತ್ತವರನ್ನು ಭೇಟಿ ಮಾಡಲು ದೆಹಲಿಗೆ ಹೋದ ನಂತರ ತನ್ನ ಆಲೋಚನೆಗಳು ಬಲಗೊಂಡವು. ದೆಹಲಿಯ ಗಾಳಿಯು ತುಂಬಾ ಕೆಟ್ಟದಾಗಿ ಅನುಭವಿಸಿತು, ಉಸಿರಾಟ ಕಷ್ಟವಾಯಿತು ಮತ್ತು "ಅಕ್ಷರಶಃ ಗ್ಯಾಸ್ ಚೇಂಬರ್‌ನಲ್ಲಿರುವಂತೆ ಭಾಸವಾಯಿತು. ಆದರೆ ಬೆಂಗಳೂರಿನಲ್ಲಿ ಈ ಸಮಸ್ಯೆ ಇಲ್ಲ. ಹೀಗಾಗಿ ದೆಹಲಿಗಿಂತ ಬೆಂಗಳೂರೇ ರಾಜಧಾನಿಯಾಗಲು ಅರ್ಹವಾಗಿದೆ' ಎಂದು ಅವರು ಹೇಳಿದರು.

ಸುರಕ್ಷತೆ ಕುರಿತು ಪ್ರಸ್ತಾವಿಸಿರುವ ಮಖಿಜಾ, ‘ರಾತ್ರಿ ಸಹ ಮಹಿಳೆಯರಿಗೆ ಬೆಂಗಳೂರು ಹೆಚ್ಚು ಸುರಕ್ಷಿತವಾಗಿದೆ. ಸ್ನೇಹಿತರನ್ನು ಭೇಟಿಯಾಗಿ, ರಾತ್ರಿ 10 ಗಂಟೆಗೆ ಒಬ್ಬಳೇ ಮನೆಗೆ ಹೋಗುವಾಗಲೂ ಹಿತಕರ ಅನುಭವವಾಯಿತು. ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಕಾಳಜಿಯ ವಿಷಯವಾಗಿಲ್ಲ. ಬೆಂಗಳೂರಿಗೆ ಆದ್ಯತೆ ಕೊಡಲು ಇದೂ ಒಂದು ಮುಖ್ಯ ಕಾರಣ’ ಎಂದಿದ್ದಾರೆ.

ನಮಾಜ್ ಮಾಡುತ್ತಿದ್ದ ಪ್ಯಾಲೆಸ್ಟೀನಿಯನ್ ವ್ಯಕ್ತಿ ಮೇಲೆ ವಾಹನ ಹತ್ತಿಸಿದ ಇಸ್ರೇಲ್ ಸೈನಿಕ!; ವೈರಲ್‌ ವಿಡಿಯೊ ಇಲ್ಲಿದೆ

ಒಂದೆಡೆ ಬೆಂಗಳೂರಿನ ರಸ್ತೆ ಬಗ್ಗೆ ಅಲ್ಲಿನ ನಿವಾಸಿಗಳು ಆಕ್ರೋಶ ಹೊರಹಾಕುತ್ತಿದ್ದರೂ ಕೂಡ ದೆಹಲಿಗಿಂತ ಬೆಂಗಳೂರಿನ ಮೂಲಸೌಕರ್ಯ, ನಗರ ವ್ಯವಸ್ಥೆ ಮತ್ತು ರಸ್ತೆಗಳು ಉತ್ತಮ ಎಂದು ಮಖಿಜಾ ಹೇಳಿದ್ದಾರೆ.

‘ಬೆಂಗಳೂರಿನ ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳು ಪಾದಚಾರಿಗಳಿಗೆ ಹೆಚ್ಚು ಅನುಕೂಲಕರವಾಗಿವೆ. ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ಪ್ರವಾಸಿಗರು ಕಲುಷಿತ ಗಾಳಿ, ದಟ್ಟಣೆಯ ರಸ್ತೆಗಳು ಮತ್ತು ನಡೆಯಲು ಯೋಗ್ಯವಲ್ಲದ ದೆಹಲಿಗೆ ಏಕೆ ಬರಬೇಕು? ಬೆಂಗಳೂರಿಗೆ ಬಂದರೆ ಜಾಗತಿಕವಾಗಿ ಇನ್ನೂ ಹೆಚ್ಚಿನ ಪ್ರಭಾವ ಉಂಟುಮಾಡಬಹುದು’ಎಂದಿದ್ದಾರೆ. ಸದ್ಯ ಅವರ ಈ ಹೇಳಿಕೆಯ ವಿಡಿಯೊ ಭಾರೀ ವೈರಲ್‌ ಆಗಿದೆ.