ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಲಕ್ಷಗಟ್ಟಲೆ ಆದಾಯ ತರುವ ಕಾರ್ಪೊರೇಟ್ ಉದ್ಯೋಗ ತ್ಯಜಿಸಿ ನೂರಾರು ಬೀದಿನಾಯಿಗಳಿಗೆ ಆಶ್ರಯದಾತನಾದ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್

Viral News: ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಬೆಂಗಳೂರಿನ ಯುವಕ ಈಗ ನೂರಾರು ಬೀದಿ ನಾಯಿಗಳಿಗೆ ಆಶ್ರಯದಾತರಾಗಿದ್ದಾರೆ. ಇದೀಗ ಅವರ ವೃತ್ತಿ ತೊರೆದು ದೊಡ್ಡಬಳ್ಳಾಪುರದ ತೋಟದಲ್ಲಿ ನೂರಾರು ನಾಯಿಗಳ ಜತೆ ವಾಸಿಸುತ್ತಿದ್ದಾರೆ. ಇಲ್ಲಿರುವ ಫಾರ್ಮ್ ಹೌಸ್‌ ಅನ್ನು ನಾಯಿಗಳ ಅನುಕೂಲಕಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅವು ಮುಕ್ತವಾಗಿ ಓಡಬಹುದಾದ ದೊಡ್ಡ ತೆರೆದ ಮೈದಾನಗಳು, ಈಜಲು ಕೊಳಗಳಿವೆ. ಅಲ್ಲದೆ ಬೀದಿ ನಾಯಿಗಳ ಸುರಕ್ಷತೆಗಾಗಿ ಬೇಲಿಗಳನ್ನು ಅಳವಡಿಸಲಾಗಿದೆ.

ಬೀದಿ ನಾಯಿಗಳಿಗೆ ಆಸರೆಯಾದ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ರಾಕೇಶ್‌ ಶುಕ್ಲಾ

ಬೆಂಗಳೂರು, ಮೇ 17: ಅನೇಕ ರೀತಿಯ ಪ್ರಾಣಿ ಪ್ರಿಯರನ್ನು ನಾವು ನೋಡಿದ್ದೇವೆ. ಇಂತಹವರ ಅನೇಕ ದೃಶ್ಯಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರೂ ಬೆಂಗಳೂರಿನ ಯುವಕನೊಬ್ಬ ನೂರಾರು ಬೀದಿ ನಾಯಿಗಳಿಗೆ ಆಶ್ರಯದಾತ ಎನಿಸಿಕೊಂಡಿದ್ದಾರೆ. ಕಾರ್ಪೋರೇಟ್‌ ಉದ್ಯೋಗ ತೊರೆದು ಇದೀಗ ದೊಡ್ಡಬಳ್ಳಾಪುರದ ತೋಟದಲ್ಲಿ ನೂರಾರು ನಾಯಿಗಳ ಜತೆ ವಾಸಿಸುತ್ತಿದ್ದಾರೆ. ಇಲ್ಲಿರುವ ಫಾರ್ಮ್ ಹೌಸ್‌ ಅನ್ನು ನಾಯಿಗಳ ಅಗತ್ಯಕ್ಕಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅವು ಮುಕ್ತವಾಗಿ ಓಡಾಡಲು ದೊಡ್ಡ ತೆರೆದ ಮೈದಾನಗಳು, ಈಜಲು ಕೊಳಗಳು ಮತ್ತು ಅವುಗಳನ್ನು ಸುರಕ್ಷಿತವಾಗಿಡಲು ಬೇಲಿಗಳನ್ನು ಅಳವಡಿಸಲಾಗಿದೆ. ಸದ್ಯ ಇವರ ಪ್ರಾಣಿ ಪ್ರೇಮಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.

ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ಉದ್ಯಮಿಯಾಗಿರುವ ರಾಕೇಶ್ ಶುಕ್ಲಾ ತಮ್ಮ ಜೀವನದ ಬಹುಭಾಗವನ್ನು ಬೇರೆ ಯಾರಿಗೂ ಬೇಡವಾದ ನೂರಾರು ನಾಯಿಗಳನ್ನು ನೋಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಒಂದು ಪುಟ್ಟ ನಾಯಿ ಮರಿಯನ್ನು ರಕ್ಷಣೆ ಮಾಡುವ ಮೂಲಕ ಸಮಾಜ ಸೇವೆ ಆರಂಭಿಸಿದ್ದ ಅಚರು ಇದೀಗ ಖಾಸಗಿ ಶ್ವಾನ ಪುನರ್ವಸತಿ ಕೇಂದ್ರವನ್ನೇ ನಿರ್ಮಿಸಿದ್ದಾರೆ. ಅವರ ಸುಪರ್ದಿಯಲ್ಲಿ ಇದೀಗ 700ಕ್ಕೂ ಹೆಚ್ಚು ರಕ್ಷಿಸಲ್ಪಟ್ಟ ಪ್ರಾಣಿಗಳಿವೆ. ಇದರಲ್ಲಿ ಬೀದಿ ನಾಯಿಗಳಿಂದ ಹಿಡಿದು ರಸ್ತೆಬದಿ ಮತ್ತು ನಿರ್ಮಾಣ ಸ್ಥಳಗಳಿಂದ ರಕ್ಷಿಸಲ್ಪಟ್ಟ ಗಾಯಗೊಂಡ ನಾಯಿಗಳು ಸೇರಿವೆ.

ನಾಯಿಯ ಪಾಲನೆಗೆ ತಿಂಗಳಿಗೆ 15,000 ರೂ. ಖರ್ಚು! ಬೆಂಗಳೂರಿನ ದಂಪತಿ ಶ್ವಾನ ಪ್ರೇಮ

ರಾಕೇಶ್ ಶುಕ್ಲಾ ದೆಹಲಿ ಮತ್ತುಅಮೆರಿಕದಲ್ಲಿ ಕೆಲಸ ಮಾಡಿದ್ದು, ಪತ್ನಿಯೊಂದಿಗೆ ಸಾಫ್ಟ್‌ವೇರ್ ಕಂಪನಿಯನ್ನು ಸಹ ಸ್ಥಾಪಿಸಿದ್ದಾರೆ. ಒಂದು ಕಾಲದಲ್ಲಿ ದುಬಾರಿ ಕಾರುಗಳು, ಐಷಾರಾಮಿ ವಾಚ್ ಹಾಗೂ ವಿದೇಶಿ ಪ್ರವಾಸಗಳಲ್ಲೇ ಮುಳುಗಿದ್ದ ಅವರ ಜೀವನ 2009ರಲ್ಲಿ ಸಂಪೂರ್ಣ ಬದಲಾಯಿತು. 2009ರಲ್ಲಿ ರಾಕೇಶ್ 45 ದಿನದ 'ಕಾವ್ಯ' ಎಂಬ ಗೋಲ್ಡನ್ ರಿಟ್ರೈವರ್ ತಳಿಯ ನಾಯಿಮರಿಯನ್ನು ಮನೆಗೆ ತಂದಿದ್ದರು. ಆ ನಾಯಿಮರಿಯನ್ನು ನೋಡಿದ ಬಳಿಕ ಅವರ ಜೀವನವೇ ಬದಲಾಯಿತು. ಇದಾದ ಕೆಲವೇ ತಿಂಗಳಲ್ಲಿ ಭಾರಿ ಮಳೆಯಲ್ಲಿ ಸಿಲುಕಿದ್ದ 'ಲಕ್ಕಿ' ಎಂಬ ಬೀದಿನಾಯಿಯನ್ನು ಕೂಡ ರಕ್ಷಿಸಿದರು.

ಆ ಬಳಿಕ ಬೀದಿ ನಾಯಿಗಳು, ಗಾಯಗೊಂಡ ನಾಯಿಗಳು, ವಯಸ್ಸಾದ ನಾಯಿಗಳನ್ನು ರಕ್ಷಿಸಿದರು. ಬಳಿಕ ಕಚೇರಿಯ ಒಂದು ಇಡೀ ಮಹಡಿಯನ್ನೇ ನಾಯಿಗಳಿಗಾಗಿ ಮೀಸಲಿಟ್ಟರು. ಆದರೂ ನಾಯಿಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಕೊನೆಗೆ ನಾಯಿಗಳಿಗಾಗಿಯೇ ಒಂದು ಸುಸಜ್ಜಿತ ತೋಟವನ್ನು ನಿರ್ಮಿಸಿದರು. ನಾಯಿಗಳ ಆರೈಕೆಗಾಗಿ ಪಶುವೈದ್ಯಕೀಯ ಸಹಾಯಕರು ಸೇರಿ 10ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇದರ ನಿರ್ವಹಣೆಗೆ ದಿನಕ್ಕೆ ಹತ್ತಾರು ಸಾವಿರ ರುಪಾಯಿಖರ್ಚಾಗುತ್ತಿದ್ದು, ಈ ಎಲ್ಲ ಮೊತ್ತವನ್ನು ರಾಕೇಶ್ ಒಬ್ಬರೇ ಭರಿಸುತ್ತಿದ್ದಾರೆ.