ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೇದಿಕೆಯಲ್ಲೇ ಬಿಟ್ಟು ಬಿಡದೆ ನಟಿಯ ಸೊಂಟಕ್ಕೆ ಕೈ ಹಾಕಿದ ಖ್ಯಾತ ನಟ; ವಿಡಿಯೊ ವೈರಲ್‌

Bhojpuri star Pawan Singh: ಭೋಜ್‌ಪುರಿ ಚಿತ್ರರಂಗದಲ್ಲಿ ಪವನ್ ಸಿಂಗ್ ಬಹುಬೇಡಿಕೆಯ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ. ಅವರನ್ನು ಅಭಿಮಾನಿಗಳು ಪವರ್ ಸ್ಟಾರ್ ಎಂದೇ ಕರೆಯುತ್ತಾರೆ. ಪವನ್ ಸಿಂಗ್ ನಟನೆಯ 'ಹಮ್ ಹೈ ರಹಿ ಪ್ಯಾರ್ ಕೆ' ಚಿತ್ರದಲ್ಲಿ ಕನ್ನಡ ನಟಿ ಹರ್ಷಿಕಾ ಪೂಣಚ್ಚ ನಾಯಕಿಯಾಗಿ ನಟಿಸಿದ್ದರು.

ಮುಂಬಯಿ: ಕೆಲವು ತಿಂಗಳ ಹಿಂದಷ್ಟೇ ತೆಲುಗು ನಟ ಬಾಲಕೃಷ್ಣ ಅವರು ವೇದಿಕೆಯಲ್ಲೇ ನಟಿ ಅಂಜಲಿ ಜತೆ ಅನುಚಿತವಾಗಿ ವರ್ತಿಸಿದ್ದು ಭಾರೀ ಸುದ್ದಿಯಾಗಿತ್ತು. ಇದೀಗ ಇಂತಹದ್ದೇ ಘಟನೆಯೊಂದು ನಡೆದಿದೆ. ಭೋಜ್‌ಪುರಿ ನಟ ಪವನ್ ಸಿಂಗ್(Bhojpuri star Pawan Singh) ವೇದಿಕೆಯಲ್ಲೇ ನಟಿಯ ಸೊಂಟಕ್ಕೆ ಕೈ ಹಾಕಿ ಎಡವಟ್ಟು ಮಾಡಿಕೊಂಡಿದ್ದಾರೆ. ಇದರ ವಿಡಿಯೊ ವೈರಲ್‌(viral video) ಆಗಿದ್ದು ನಟನ ವಿರುದ್ಧ ಅನೇಕ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಹೌದು, ಕಾರ್ಯಕ್ರಮವೊಂದರಲ್ಲಿ ಭೋಜ್‌ಪುರಿ ನಟ ಪವನ್ ಸಿಂಗ್ ಹಾಗೂ ನಟಿ ಅಂಜಲಿ ರಾಘವ್ ಭಾಗವಹಿಸಿದ್ದರು. ಇಬ್ಬರೂ ವೇದಿಕೆ ಏರಿದ್ದರು. ಅಂಜಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಪಕ್ಕದಲ್ಲೇ ಇದ್ದ ಪವನ್ ಸಿಂಗ್ ಆಕೆಯ ಸೊಂಟವನ್ನು ಪದೇ ಪದೆ ಮುಟ್ಟಿದ್ದಾರೆ. ಇದು ಆಕೆಗೂ ಇರಿಸುಮುರಿಸು ಉಂಟುಮಾಡಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಟೀಕೆಗೆ ಗುರಿಯಾಗಿದೆ.



ಭೋಜ್‌ಪುರಿ ಚಿತ್ರರಂಗದಲ್ಲಿ ಪವನ್ ಸಿಂಗ್ ಬಹುಬೇಡಿಕೆಯ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ. ಅವರನ್ನು ಅಭಿಮಾನಿಗಳು ಪವರ್ ಸ್ಟಾರ್ ಎಂದೇ ಕರೆಯುತ್ತಾರೆ. ಪವನ್ ಸಿಂಗ್ ನಟನೆಯ 'ಹಮ್ ಹೈ ರಹಿ ಪ್ಯಾರ್ ಕೆ' ಚಿತ್ರದಲ್ಲಿ ಕನ್ನಡ ನಟಿ ಹರ್ಷಿಕಾ ಪೂಣಚ್ಚ ನಾಯಕಿಯಾಗಿ ನಟಿಸಿದ್ದರು. ಇನ್ನು ಭೋಜ್‌ಪುರಿ ಭಾಷೆಯ ಹಲವು ಸಿನಿಮಾಗಳಲ್ಲಿ ಪವನ್ ಬಣ್ಣ ಹಚ್ಚಿದ್ದಾರೆ. ನಟನಾಗಿ ಮಾತ್ರವಲ್ಲದೇ ಗಾಯಕನಾಗಿ, ಸಂಗೀತ ನಿರ್ದೇಶಕನಾಗಿಯೂ ಹೆಸರು ಮಾಡಿದ್ದಾರೆ.

ಬಾಲಿವುಡ್ 'ಸ್ತ್ರೀ'-2 ಚಿತ್ರದಲ್ಲಿ ಹಾಡೊಂದನ್ನು ಪವನ್ ಸಿಂಗ್ ಹಾಡಿದ್ದಾರೆ. ಹಲವು ಸಂಗೀತ ರಸಮಂಜರಿಯಲ್ಲಿಯೂ ಹಾಡುಗಳನ್ನು ಹಾಡಿ ಜನಮನ್ನಣೆ ಗಳಿಸಿದ್ದಾರೆ. ಆದರೆ ಇದೀಗ ನಟಿಯ ಸೊಂಟಕ್ಕೆ ಕೈ ಹಾಕಿ ಟೀಕೆಗೆ ಗುರಿಯಾಗಿದ್ದಾರೆ.