ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬ್ರಶ್ ಬಳಸದೆ ಕೈಯಿಂದಲೇ ಟಾಯ್ಲೆಟ್ ಕ್ಲೀನ್ ಮಾಡಿದ ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್

Dog Satish: ಇತ್ತೀಚೆಗಷ್ಟೇ ಡಾಗ್ ಸತೀಶ್ ಬ್ರಶ್ ಬಳಸದೆ, ಬರಿಗೈಯಲ್ಲೇ ಟಾಯ್ಲೆಟ್ ಕ್ಲೀನ್ ಮಾಡಿರುವ ಸುದ್ದಿ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ‌. ಈ ಮೂಲಕ ಯಾವುದೇ ಸ್ಥಳ ತುಂಬಾ ಸ್ವಚ್ಛತೆಯಿಂದ ಕೂಡಿದ್ದರೆ ಅಲ್ಲಿ ಅಸಹ್ಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಡಾಗ್ ಸತೀಶ್ (ಸಂಗ್ರಹ ಚಿತ್ರ)

ಬೆಂಗಳೂರು, ಡಿ. 6: ಜನಪ್ರಿಯ ರಿಯಾಲಿಟಿ ಶೋನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಮುಂಚುಣಿಯಲ್ಲಿದೆ. ಸಾಮಾನ್ಯವಾಗಿ ಈ ರಿಯಾಲಿಟಿ ಶೋಗೆ ಸಿನಿಮಾ, ಧಾರಾವಾಹಿ ಸೆಲೆಬ್ರಿಟಿಗಳು, ಸೋಶಿಯಲ್ ಮಿಡಿಯಾದಲ್ಲಿ ಖ್ಯಾತಿ ಪಡೆದವರನ್ನೇ ಕರೆಸಲಾಗುತ್ತದೆ. ಇನ್ನು ಈ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಪ್ ಗೆಲ್ಲದಿದ್ದರೂ ಅನೇಕರು ದೊಡ್ಡ ಮನೆಗೆ ಸ್ಪರ್ಧಿಗಳಾಗಿ ಬಂದ ಕಾರಣಕ್ಕೆ ಸಾರ್ವಜನಿಕ ರಂಗದಲ್ಲಿ ಗುರುತಿಸಲ್ಪಡುತ್ತಿದ್ದಾರೆ. ಅಂತವರಲ್ಲಿ ಡಾಗ್ ಸತೀಶ್ (Dog Satish) ಕೂಡ ಒಬ್ಬರಾಗಿದ್ದಾರೆ. ಈ ಬಾರಿಯ ಕನ್ನಡ ಬಿಗ್ ಬಾಸ್ ಶೋ ಆರಂಭದ ಕೆಲ ವಾರ ಮಾತ್ರ ಇವರು ಇದ್ದಿದ್ದರೂ ಕೂಡ ಅವರನ್ನು ಬಿಗ್ ಬಾಸ್ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇದೀಗ ಇತ್ತೀಚೆಗಷ್ಟೇ ಡಾಗ್ ಸತೀಶ್ ಬ್ರಶ್‌ ಬಳಸದೆ, ಬರಿಗೈಯಲ್ಲೇ ಟಾಯ್ಲೆಟ್ ಕ್ಲೀನ್ ಮಾಡಿರುವ ಸುದ್ದಿ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ‌. ಈ ಮೂಲಕ ಯಾವುದೇ ಸ್ಥಳ ತುಂಬಾ ಸ್ವಚ್ಛತೆಯಿಂದ ಕೂಡಿದ್ದರೆ ಅಲ್ಲಿ ಅಸಹ್ಯ ಪಡುವ ಅಗತ್ಯವಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.

ಟಾಯ್ಲೆಟ್ ಕ್ಲೀನ್ ಮಾಡುವ ಬ್ರಶ್ ಇದ್ದರೂ ಕೂಡ ಅದನ್ನು ಕ್ಲೀನ್ ಮಾಡಲು ಹಿಂಜರಿಯುವ ಈ ಕಾಲದಲ್ಲಿ ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್ ಯಾವುದೆ ಬ್ರಶ್ ಬಳಸದೆ ಬರೀ ಕೈಯಲ್ಲೇ ಟಾಯ್ಲೆಟ್ ಕ್ಲೀನ್ ಮಾಡಿದ್ದು ನಿಜಕ್ಕೂ ಅಚ್ಚರಿ ಎನಿಸಿದೆ. ಅವರು ಇದನ್ನು ತಮ್ಮ ಸ್ವ-ಇಚ್ಛೆಯಿಂದ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸತೀಶ್ ಟಾಯ್ಲೆಟ್​ ಕ್ಲೀನರ್​ ಬಳಸಿ ಟಾಯ್ಲೆಟ್​ ಅನ್ನು ಬರಿಗೈನಲ್ಲೇ ತಿಕ್ಕಿ ಸ್ವಚ್ಛಗೊಳಿಸಿದ್ದಾರೆ. ʼʼಟಾಯ್ಲೆಟ್​ ಕ್ಲೀನರ್​ ಅನ್ನು ಬರೀ ಗೈಯಲ್ಲಿ ಬಳಸಿದ್ದಕ್ಕೆ ಕೈ ಉರಿಯಾಗುತ್ತಿದೆ. ಆದರೂ ನಾನು ಯಾವುದೇ ಹಿಂಜರಿಕೆ ಇಲ್ಲದೆ ಕ್ಲೀನ್​ ಮಾಡುತ್ತೇನೆ. ಈಗಾಗಲೇ ಹಲವು ಮೀಡಿಯಾದವರು ಇಲ್ಲಿಗೆ ನನ್ನ ಸಂದರ್ಶನಕ್ಕೆ ಬಂದಿದ್ದರು. ಅವರೆಲ್ಲರೂ ಈ ಟಾಯ್ಲೆಟ್ ಅನ್ನು ಬಳಕೆ ಮಾಡಿದ್ದಾರೆ. ಹಾಗೆಂದ ಮಾತ್ರಕ್ಕೆ ನಾನು ನಮ್ಮ ಮನೆಯ ಟಾಯ್ಲೆಟ್​ ಕ್ಲೀನ್​ ಮಾಡಲಾರೆ ಎಂದು ಹೇಳಲಾರೆ. ಇದನ್ನು ನಾನು ಕ್ಲೀನ್ ಮಾಡದೆ ಇನ್ಯಾರು ಮಾಡಬೇಕು, ಸ್ವಚ್ಛವಾಗಿದ್ದ ಸ್ಥಳವನ್ನು ಬರಿಗೈಯಲ್ಲಿ ಮುಟ್ಟುವುದು ತಪ್ಪಲ್ಲʼʼ ಎಂದು ಅವರು ಹೇಳಿದ್ದಾರೆ.

ಒಂದಾಗಿದ್ದವರು ದೂರವಾದ್ರಾ? ದೂರ ಇದ್ದವರು ಒಂದಾದ್ರಾ? ಏನು ವಾರದ ಕಥೆ?

ʼʼನಮ್ಮ ಸುತ್ತಲಿನ ಸ್ಥಳ ಸ್ವಚ್ಛವಾಗಿದ್ದರೆ ನಮ್ಮ ಮನಸ್ಸು ಕೂಡ ಸ್ವಚ್ಛವಾಗಿರುತ್ತದೆ. ಸ್ವಚ್ಛತೆ ಬಗ್ಗೆ ಭಾಷಣ ಮಾಡಿ ಅರಿವು ಮೂಡಿಸುವುದಕ್ಕಿಂತಲು ಸ್ವಕಾಳಜಿಯಿಂದ ಮನೆಯ ವಾತಾವರಣವನ್ನು ಮೊದಲು ಸ್ವಚ್ಛವಾಗಿ ಇಡಬೇಕು. ನಿಮ್ಮ ಮನೆಗೂ ಬೇಕಾದರೆ ಇಂತಹ ಕೆಲಸವಿದ್ದರೆ ಹೇಳಿ ನಾನು ಬರುತ್ತೇನೆ, ಯಾವುದೆ ಸ್ಥಳವನ್ನು ಕ್ಲೀನ್ ಮಾಡಲು ಹೇಸಿಗೆ ಯಾಕೆ ಬೇಕು? ಎಲ್ಲವೂ ಶುಚಿಯಾಗಿ ಇರಬೇಕು ಎನ್ನುವುದು ನನ್ನ ಭಾವನೆʼʼ ಎಂದು ಅವರು ಈ ಬಗ್ಗೆ ಹೇಳಿದ್ದಾರೆ.

ನೂರಾರು ಕೋಟಿ ರೂಪಾಯಿ ನಾಯಿ ಇದೆ ಎಂದು ಹೇಳಿಕೊಂಡಿರುವ ಡಾಗ್​ ಸತೀಶ್ ಬರೀಗೈಯಲ್ಲಿ ಟಾಯ್ಲೆಟ್ ಕ್ಲೀನ್ ಮಾಡಿದ್ದ ವಿಚಾರ ಸೋಶಿಯಲ್ ಮಿಡಿಯಾದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದೆ. ಈ ಮೂಲಕ ಈ ಬಗ್ಗೆ ನೆಟ್ಟಿಗರು ನಾನಾ ತರನಾಗಿ ಕಮೆಂಟ್ ಮಾಡಿದ್ದಾರೆ. ಟಾಯ್ಲೆಟ್ ಎಷ್ಟೇ ಕ್ಲೀನ್ ಇದ್ದರೂ ಅದನ್ನು ಕೈಯಲ್ಲಿ ಕ್ಲೀನ್ ಮಾಡುವುದು ಒಳ್ಳೆಯದಲ್ಲ ಇದು ಆರೋಗ್ಯ ಸಮಸ್ಯೆ ತರಬಹುದು ಎಂದು ಪ್ರತಿಕ್ರಿಯೆಯನ್ನು ಕೆಲವರು ನೀಡಿದ್ದಾರೆ.