ಪಾಟ್ನಾ, ಮೇ 22: ನಮ್ಮ ಸಮಾಜವು ಮಹಿಳೆಯರನ್ನು ಗೌರವದಿಂದ ಕಾಣುತ್ತಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಹೌದು, ಬಿಹಾರದಲ್ಲಿ ನಡೆದ ಈ ಅಘಾತಕಾರಿ ಘಟನೆ ನೋಡುಗರಿಗೆ ಮುಜುಗರ ತರಿಸುವಂತಿದೆ (Viral Video). ಬಿಹಾರದ ವಿಕೃತ ವೃದ್ಧನೊಬ್ಬ ಮಹಿಳೆಯರ ಪೋಸ್ಟರ್ ಅನ್ನು ನಾಲಿಗೆಯಿಂದ ನೆಕ್ಕುತ್ತಿರುವ ದೃಶ್ಯ ವೈರಲ್ ಆಗಿದ್ದು, ನೋಡಿದ ನೆಟ್ಟಿಗರು ಕಂಗಾಲಾಗಿದ್ದಾರೆ. ಇಂತಹ ವಿಕೃತ ವ್ಯಕ್ತಿಗಳೂ ಇರುತ್ತಾರಾ ಎಂದು ಪ್ರಶ್ನಿಸುತ್ತಿದ್ದಾರೆ.
ಬಿಹಾರದಲ್ಲಿ ಈ ದೃಶ್ಯ ಕಂಡು ಬಂದಿದೆ ಎನ್ನಲಾಗಿದೆ. ಟ್ರಕ್ ನ ಹಿಂಭಾಗದಲ್ಲಿ ಅಂಟಿಸಿರುವ ಮಹಿಳೆಯರ ಪೋಸ್ಟರ್‌ಗಳನ್ನುಕಂಡ ಆ ವ್ಯಕ್ತಿ ಅದನ್ನು ತನ್ನ ನಾಲಗೆಯಿಂದ ನೆಕ್ಕಿದ್ದಾನೆ. ಈ ಅಸಹ್ಯ ದೃಶ್ಯ ಕಂಡು ನೆಟ್ಟಿಗರು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಮಹಿಳೆಯರ ರಕ್ಷಣೆ ಎತ್ತ ಸಾಗುತ್ತಿದೆ ಎಂದು ಹಲವರು ಪ್ರಶ್ನಿಸಿದ್ದಾರೆ.
ವಿಡಿಯೊ ನೋಡಿ:
ವಿಡಿಯೊದಲ್ಲಿ ಆ ವೃದ್ಧನು ವಾಹನದ ಮೇಲೆ ಚಿತ್ರಿಸಿದ ಭಾರತೀಯ ಮಹಿಳೆಯರ ಚಿತ್ರಗಳನ್ನು ಪದೇ ಪದೆ ನೆಕ್ಕುತ್ತಿರುವುದನ್ನು ಕಾಣಬಹುದು. ಈ ವೇಳೆ ಮಕ್ಕಳಿ, ಮಹಿಳೆಯರೈ ಸೇರಿದಂತೆ ಸಾರ್ವಜಮಿಕರು ಓಡಾಡುತ್ತಿದ್ದರು. ಆತ ಸಾರ್ವಜನಿಕ ಎರದುರೇ ಫೋಟೊದ ಮೇಲೆ ತನ್ನ ವಿಕೃತಿ ಮೆರೆದಿದ್ದಾನೆ. ಅಲ್ಲಿಯೇ ಇದ್ದ ಯಾರೋ ಮೊಬೈಲ್‌ನಲ್ಲಿ ದೃಶ್ಯವನ್ನು ಚಿತ್ರೀಕರಿಸಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಅಲ್ಲಿ ಸಣ್ಣ ಮಕ್ಕಳು ಇದ್ದರೂ ಆತ ಮುಜುಗರ ಇಲ್ಲದೆ ಈ ರೀತಿಯಾಗಿ ವರ್ತಿಸಿದ್ದಾನೆ ಎಂದು ಹಲವರು ಕಿಡಿಕಾರಿದ್ದಾರೆ. ಸಾರ್ವಜನಿಕವಾಗಿ, ಅದೂ ಸಣ್ಣ ಮಕ್ಕಳ ಮುಂದೆಯೇ ಈ ರೀತಿ ಕೃತ್ಯ ಮೆರೆದದ್ದು ಕಂಡು ಆಕ್ರೋಶ ವ್ಯಕ್ ವಾಗುತ್ತಿದೆ.
ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ
ಜಸ್ವಿಂದರ್ ಕೌರ್ ಎನ್ನುವವರು "ಭಾರತದಲ್ಲಿ ಪೋಸ್ಟರ್‌ಗಳಲ್ಲಿಯೂ ಮಹಿಳೆಯರು ಸುರಕ್ಷಿತವಾಗಿಲ್ಲ" ಎಂದು ಈ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ʼʼಅಸಹ್ಯದ ನಡವಳಿಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕುʼʼ ಎಂದು ಅವರು ಬರೆದಿದ್ದಾರೆ. ನೆಟ್ಟಿಗರೊಬ್ಬರು, ʼʼಸರ್ಕಾರದಿಂದ 5 ಕಿಲೋ ಪಡಿತರವನ್ನು ಪಡೆಯುತ್ತಾರೆ. ಅಗ್ಗದ ಇಂಟರ್‌ನೆಟ್ ಬಳಸಿ ದಿನವಿಡಿ ಅಶ್ಲೀಲ ಚಿತ್ರ ವೀಕ್ಷಿಸುತ್ತಾರೆ. ನಂತರ ನಾಯಿ, ಜಾನುವಾರು ಮೇಲೆ ದೌರ್ಜನ್ಯ ಎಸಗುತ್ತಾರೆ. ಪೋಸ್ಟರ್ ಅನ್ನೂ ಬಿಡುತ್ತಿಲ್ಲʼʼ ಎಂದು ಕಿಡಿಕಾರಿದ್ದಾರೆ. ಈ ವಿಡಿಯೊ ಈಗಾಗಲೇ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ.