ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral Video: ರೈಲ್ವೆ ಗೇಟ್‌ನಲ್ಲೇ ಟ್ರೈನ್ ನಿಲ್ಲಿಸಿ ಹತ್ತಿದ ಕುಟುಂಬ; ಇದೇನು ನಿಮ್ಮ ಮನೆಯ ಆಸ್ತಿಯೇ? ನೆಟ್ಟಿಗರ ಪ್ರಶ್ನೆ

ಪ್ರಯಾಣಿಕರ ಗುಂಪೊಂದು ರೈಲ್ವೆ ಕ್ರಾಸಿಂಗ್‌ನಲ್ಲೇ ಟ್ರೈನ್ ನಿಲ್ಲಿಸಿ ಪ್ರಯಾಣ ಬೆಳೆಸಿದ್ದಾರೆ. ಆಗಸ್ಟ್ 8ರಂದು ಬಿಹಾರದ ಪಶ್ಚಿಮ ಚಂಪಾರಣ್‌ನ ಕುಮಾರ್‌ಬಾಗ್ ರೈಲ್ವೆ ನಿಲ್ದಾಣದ ಬಳಿ ಈ ದೃಶ್ಯ ನಡೆದಿದ್ದು, ಸ್ಥಳೀಯ ವ್ಯಕ್ತಿಯೊಬ್ಬರು ಘಟನೆಯನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ.

ಬಿಹಾರದಲ್ಲಿ ರೈಲ್ವೆ ಗೇಟ್‌ನಲ್ಲೇ ಟ್ರೈನ್ ನಿಲ್ಲಿಸಿದ ಕುಟುಂಬ

ಪಾಟ್ನಾ, ಆ. 10: ಬಿಹಾರದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಪ್ರಯಾಣಿಕರ ಗುಂಪೊಂದು ರೈಲ್ವೆ ಕ್ರಾಸಿಂಗ್‌ನಲ್ಲೇ ಟ್ರೈನ್ ನಿಲ್ಲಿಸಿ ಪ್ರಯಾಣ ಬೆಳೆಸಿದ್ದಾರೆ. ಆಗಸ್ಟ್ 8ರಂದು ಬಿಹಾರದ ಪಶ್ಚಿಮ ಚಂಪಾರಣ್‌ನ ಕುಮಾರ್‌ಬಾಗ್ ರೈಲ್ವೆ ನಿಲ್ದಾಣದ ಬಳಿ ಈ ದೃಶ್ಯ (Viral News) ನಡೆದಿದ್ದು, ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

ಪ್ರಯಾಣಿಕರು ರೈಲನ್ನು ಟೆಂಪೋ ಮಾದರಿಯಲ್ಲಿ ಬಳಸಿಕೊಂಡಿದ್ದು, ಕ್ರಾಸಿಂಗ್‌ನಲ್ಲೇ ನಿಲ್ಲಿಸಿ ಅದರ ಮೇಲೆ ಹತ್ತಿದ್ದಾರೆ. ಕುಮಾರ್‌ಬಾಗ್ ರೈಲ್ವೆ ನಿಲ್ದಾಣದ ಸಮೀಪದ ರೈಲ್ವೆ ಗೇಟ್ ಬಳಿ ಈ ಘಟನೆ ನಡೆದಿದೆ. ರೈಲು ಆಗಮಿಸುವ ಸಂದರ್ಭದಲ್ಲಿ ಗೇಟ್ ಮುಚ್ಚಲಾಗಿತ್ತು. ಈ ವೇಳೆ ಅಲ್ಲಿ ನಿಂತುಕೊಂಡು ಕಾಯುತ್ತಿದ್ದ ಪ್ರಯಾಣಿಕರೊಬ್ಬರು ಫೋನ್‌ನಲ್ಲಿ ಮಾತನಾಡುತ್ತಿದ್ದರು.

ವಿಡಿಯೊ ನೋಡಿ:



ಕೆಲವು ಕ್ಷಣಗಳ ನಂತರ ಟ್ರೈನ್ ಬಂದಿದ್ದು, ಇವರ ಸಮೀಪವೇ ನಿಂತುಕೊಂಡಿತು. ಬಳಿಕ ಅವರು ರೈಲಿನ ಒಳಗೆ ಹತ್ತಿದ್ದಾರೆ. ಈ ಇಡೀ ದೃಶ್ಯವನ್ನು ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ಕ್ಲಿಪ್ ವೈರಲ್ ಆಗಿದ್ದು, ಆನ್‌ಲೈನ್‌ನಲ್ಲಿ ಜನರು ಆಘಾತ ಮತ್ತು ಅಚ್ಚರಿ ವ್ಯಕ್ತಪಡಿಸಿದ್ದಾರೆ. ರೈಲನ್ನು ಈ ರೀತಿ ಇಚ್ಚೆ ಬಂದಲ್ಲಿ ನಿಲ್ಲಿಸಲು ಅನುಮತಿ ಇದೆಯಾ? ಇದು ಅವರ ಸ್ವಂತ ಆಸ್ತಿಯೇ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

1.9 ಕೋಟಿ ರುಪಾಯಿಯ ಮೈಕ್ರೋಸಾಫ್ಟ್ ಉದ್ಯೋಗ ತ್ಯಜಿಸಿ ಅವಲತ್ತುಕೊಂಡ ಯುವಕ

ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ ವಿಡಿಯೊದಲ್ಲಿ ಕಾರುಗಳು ಮತ್ತು ಇತರ ವಾಹನಗಳು ರೈಲು ದಾಟಲು ಕಾಯುತ್ತಿರುವಾಗ ಮುಚ್ಚಿದ ರೈಲ್ವೆ ಕ್ರಾಸಿಂಗ್ ಬಳಿ ನಾಲ್ಕು ಜನರು ನಿಂತಿರುವುದು ಕಂಡು ಬಂದಿದೆ. ಈ ಪೈಕಿ ಒಬ್ಬರು ಯಾರೊಂದಿಗೋ ಮಾತನಾಡುತ್ತಿರುವುದು ಸೆರೆಯಾಗಿದೆ. ವಿಡಿಯೊ ಚಿತ್ರೀಕರಿಸುತ್ತಿದ್ದ ವ್ಯಕ್ತಿ ರೈಲು ಚಾಲಕ ಪ್ರಯಾಣಿಕರಿಗೆ ಪರಿಚಯಸ್ಥನಾಗಿರಬೇಕು ಎಂದು ಭಾವಿಸಿದ್ದಾರೆ. ಈ ಘಟನೆಯನ್ನು ಗೇಟ್ ಮ್ಯಾನ್ ಅಲ್ಲಿ ನಿಂತು ನೋಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ʼʼಜನರು ರೈಲು ಹತ್ತುವುದು ಹೀಗೆಯೇ? ರೈಲ್ವೆ ಇಲಾಖೆ ಎಷ್ಟು ನಷ್ಟವನ್ನು ಅನುಭವಿಸುತ್ತಿದೆʼʼ ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು, ʼʼದಯವಿಟ್ಟು ರಸ್ತೆ ಕ್ರಾಸಿಂಗ್‌ನಲ್ಲಿ ರೈಲು ನಿಲ್ಲಿಸಿದ್ದಕ್ಕಾಗಿ ಈ ವಿಚಾರವನ್ನು ಪರಿಶೀಲಿಸಿ. ಸಾರ್ವಜನಿಕರ ಸಮಯವನ್ನು ವ್ಯರ್ಥ ಮಾಡುವುದು ಅನ್ಯಾಯʼʼ ಎಂದು ಟೀಕಿಸಿದ್ದಾರೆ.