ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಾಯಿಯ ಅನಾರೋಗ್ಯದ ವೇಳೆ ಅಂದುಕೊಂಡ ಹರಕೆ ಈಡೇರಿಸಲು ಪ್ರತಿದಿನ 50 ಕಿಲೋ ಮೀಟರ್‌ ಓಡುತ್ತಿರುವ ಬಿಹಾರದ ಯುವಕ; ಹೃದಯಸ್ಪರ್ಶಿ ವಿಡಿಯೊ ವೈರಲ್‌

Viral News: ಬಿಹಾರದ ಯುವಕನೊಬ್ಬ ತಾಯಿಯ ಅನಾರೋಗ್ಯದ ಸಮಯದಲ್ಲಿ ಅಂದುಕೊಂಡ ಹರಕೆಯನ್ನು ತೀರಿಸಲು ಸುಮಾರು 8,000 ಕಿ.ಮೀ. ಓಡಿದ್ದು, ತಮ್ಮ ವ್ರತವನ್ನು ಪೂರೈಸಲು ಭಾರತದಾದ್ಯಂತ ತೀರ್ಥಯಾತ್ರೆಯನ್ನು ಕೈಗೊಂಡಿದ್ದಾರೆ. ಸದ್ಯ ತಾಯಿ ಹಾಗೂ ಮಗನ ಬಾಂಧವ್ಯದ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಯಿ ಆರೋಗ್ಯಕ್ಕಾಗಿ ಜ್ಯೋತಿರ್ಲಿಂಗಗಳ ಭೇಟಿಗೆ ಕಾಲ್ನಡಿಗೆ ಯಾತ್ರೆ ಆರಂಭಿಸಿದ ಬಿಹಾರದ ಮೋನು ಮೆತುರ್ಬಾಲಾ

ಪಟ್ನಾ, ಅ. 22: ತಾಯಿಗಿಂತ ಮಿಗಿಲಾಗಿದ್ದು ಯಾವುದು ಇಲ್ಲ ಅನ್ನೋದನ್ನು ನೀವು ಕೇಳಿರಬಹುದು. ಮಕ್ಕಳು ತಾಯಿಯ ಸೇವೆ ಎಷ್ಟು ಮಾಡಿದರೂ ಕಡಿಮೆಯೇ. ಇದೀಗ ಬಿಹಾರದ ಯುವಕನೊಬ್ಬ ತಾಯಿಯ ಅನಾರೋಗ್ಯದ ಸಮಯದಲ್ಲಿ ಅಂದುಕೊಂಡ ಹರಕೆಯನ್ನು ತೀರಿಸಲು ಸುಮಾರು 8,000 ಕಿ.ಮೀ. ಓಡಿದ್ದು, ತಮ್ಮ ವ್ರತವನ್ನು ಪೂರೈಸಲು ಭಾರತದಾದ್ಯಂತ ತೀರ್ಥಯಾತ್ರೆಯನ್ನು ಕೈಗೊಂಡಿದ್ದಾರೆ. ಸದ್ಯ ತಾಯಿ ಹಾಗೂ ಮಗನ ಬಾಂಧವ್ಯದ ಬಗ್ಗೆ ನೆಟ್ಟಿಗರು ಮೆಚ್ಚುಗೆ ನೀಡಿದ್ದು, ತಾಯಿ ಖುಷಿಯಿಂದ ಇರಲಿ ಎಂದು ಶುಭ (Viral News) ಹಾರೈಸುತ್ತಿದ್ದಾರೆ.

ಬಿಹಾರದ ಮೋನು ಮೆತುರ್ಬಾಲಾ ತಮ್ಮ ತಾಯಿಯ ಅನಾರೋಗ್ಯದ ಸಮಯದಲ್ಲಿ ಮಾಡಿದ ಪ್ರತಿಜ್ಞೆಯನ್ನು ಪೂರೈಸಲೆಂದು ಭಾರತದಾದ್ಯಂತ ಯಾತ್ರೆ ಕೈಗೊಂಡಿದ್ದು, ಈವರೆಗೆ ಸುಮಾರು 8,000 ಕಿ.ಮೀ. ದೂರವನ್ನು ಕ್ರಮಿಸಿದ್ದಾರೆ. ತಾಯಿಗಾಗಿ ಮಾಡಿದ ಈ ಸೇವೆಯನ್ನು ಕಂಡು ಇದು ನಿಜವಾದ ಶ್ರಮ ಎಂದು ನೆಟ್ಟಿಗರು ಬಣ್ಣಿಸಿದ್ದಾರೆ.

ವಿಡಿಯೊ ನೋಡಿ:



ಅರಾರಿಯಾ ಜಿಲ್ಲೆಯ ಮೋನು ಮೆತುರ್ಬಾಲಾ, ತಮ್ಮ ತಾಯಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಗುಣಮುಖಳಾಗಲೆಂದು ಶಿವನಲ್ಲಿ ಪ್ರಾರ್ಥಿಸಿಕೊಂಡಿದ್ದರು. ಚೇತರಿಸಿಕೊಂಡರೆ 12 ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡುವುದಾಗಿ ಹರಕೆ ಹೊತ್ತಿದ್ದರು. ತಾಯಿಯ ಆರೋಗ್ಯ ಸುಧಾರಿಸಲು ಪ್ರಾರಂಭಿಸಿದಾಗ ಮೋನು ತಮ್ಮ ಮಾತನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ.

ರೈಲ್ವೆ ಗೇಟ್‌ನಲ್ಲೇ ಟ್ರೈನ್ ನಿಲ್ಲಿಸಿ ಹತ್ತಿದ ಕುಟುಂಬ; ಇದೇನು ನಿಮ್ಮ ಮನೆಯ ಆಸ್ತಿಯೇ? ನೆಟ್ಟಿಗರ ಪ್ರಶ್ನೆ

ವಾಹನದಲ್ಲಿ ಪ್ರಯಾಣಿಸುವ ಬದಲು, ಪವಿತ್ರ ದೇವಾಲಯಗಳನ್ನು ತಲುಪಲು ದೇಶದಾದ್ಯಂತ ಕಾಲ್ನಡಿಗೆಯನ್ನೇ ಅವಲಂಬಿಸಲು ನಿರ್ಧರಿಸಿದರು. ಇಲ್ಲಿಯವರೆಗೆ ಸುಮಾರು 8,000 ಕಿಲೋ ಮೀಟರ್‌ಗಳನ್ನು ಕ್ರಮಿಸಿದ್ದು, 12 ಜ್ಯೋತಿರ್ಲಿಂಗಗಳ ಪೈಕಿ ಐದು ಲಿಂಗಗಳಿಗೆ ಭೇಟಿ ನೀಡಿದ್ದಾರೆ. ತನ್ನ ಗುರಿಯನ್ನು ಸಾಗಲು ಅವರು, ಪ್ರತಿದಿನ ಸುಮಾರು 50 ಕಿಲೋ ಮೀಟರ್‌ಗಳಷ್ಟು ನಡೆದಿದ್ದಾರೆ.

ಮೋನು ಬಳಕೆದಾರರಿಗೆ ತನಮ್ಮ ಪ್ರಯಾಣದ ಹಾಗೂ ಭೇಟಿ ನೀಡುವ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ವರದಿಗಳ ಪ್ರಕಾರ, ಅವರು ಇಲ್ಲಿಯವರೆಗೆ ಐದು ಜ್ಯೋತಿರ್ಲಿಂಗಗಳನ್ನು ತಲುಪಿದ್ದು ಮತ್ತು ಗುರಿಯನ್ನು ಪೂರ್ಣಗೊಳಿಸಲು ಇನ್ನೂ ಏಳು ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡಬೇಕಿದೆ. ನೆಟ್ಟಿಗರು ಈತನ ಸೇವೆ ಕಂಡು ತಮ್ಮ ಪೋಷಕರ ಮೇಲಿನ ಭಕ್ತಿಗೆ ಹೆಸರುವಾಸಿಯಾದ ಪೌರಾಣಿಕ ವ್ಯಕ್ತಿ ಶ್ರವಣ ಕುಮಾರನ ನೆನಪು ಮಾಡಿಕೊಳ್ಳುತ್ತಿದ್ದಾರೆ.