ಮುಂಬೈ, ಡಿ. 15: ರಸ್ತೆಯಲ್ಲಿ ವಾಹನ ಚಲಾಯಿಸುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ರಸ್ತೆ ನಿಯಮಗಳನ್ನು ಪಾಲಿಸದಿದ್ದರೆ ಅಪಘಾತ ನಡೆಯುವ ಸಾಧ್ಯತೆ ಅಧಿಕ. ಬೈಕ್ ಸವಾರನೊಬ್ಬ ರಾಂಗ್ ರೂಟ್‌ನಲ್ಲಿ ವಾಹನ ಚಲಾಯಿಸಿ ಸೈಕಲ್‌ಗೆ ಡಿಕ್ಕಿ ಹೊಡೆದ ಘಟನೆ ಮುಂಬೈಯಲ್ಲಿ ನಡೆದಿದೆ. ಸೈಕಲ್‌ನಲ್ಲಿ ಹೋಗುತ್ತಿದ್ದ ಇಬ್ಬರು ಬಾಲಕರಿಗೆ ಬೈಕ್ ಢಿಕ್ಕಿ ಹೊಡೆದಿದೆ. ಪರಿಣಾಮ ಅದರಲ್ಲಿದ್ದ ಹುಡುಗ ರಸ್ತೆಯಲ್ಲಿ ಬಿದ್ದಿದ್ದಾನೆ. ಆ ಬಾಲಕನಿಗೆ ಏನಾಗಿದೆ ಎಂಬುದನ್ನೂ ನೋಡದೆ ಬೈಕ್ ಸವಾರ ಅಲ್ಲಿಂದ ಪರಾರಿಯಾಗಿದ್ದಾನೆ. ಮಕ್ಕಳ ಮೇಲೆ ಬೈಕ್ ಹತ್ತಿಸಿಯೂ ಬಿದ್ದ ಬಾಲಕನನ್ನು ಆರೈಕೆ ಕೂಡ ಮಾಡದೆ ಮನುಷ್ಯತ್ವ ಮರೆತ ಬೈಕ್ ಸವಾರನ ನಡೆಗೆ ನೆಟ್ಟಿಗರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸದ್ಯ ಈ ಕುರಿತಾದ ಸಿಸಿಟಿವಿ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
andheriloca ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೊವನ್ನು ಶೇರ್ ಮಾಡಲಾಗಿದೆ. ಡಿಸೆಂಬರ್ 10ರ ಸಂಜೆ ಮುಂಬೈಯ ಲೋಖಂಡ್ವಾಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೇಘದೂತ್ ಬಿಲ್ಡಿಂಗ್ ಹೊರಗೆ ಈ ಅಪಘಾತ ನಡೆದಿದ್ದು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ರಸ್ತೆ ಬದಿಯಲ್ಲಿ ಸೈಕಲ್ ಸವಾರಿ ಮಾಡುತ್ತಿದ್ದ ಬಾಲಕರು ಟ್ರಾಫಿಕ್ ನಿಯಮ ಪಾಲಿಸಿದ್ದರೂ ರಾಂಗ್ ರೂಟ್‌ನಿಂದ ಬಂದ ಬೈಕ್ ಸವಾರ ಡಿಕ್ಕಿ ಹೊಡೆದಿರುವುದನ್ನು ವಿಡಿಯೊದಲ್ಲಿ ಕಾಣಬಹುದು.
ವಿಡಿಯೊ ನೋಡಿ:
ವಿಡಿಯೊದಲ್ಲಿ ಬೈಕ್ ಸವಾರನು ಟ್ರಾಫಿಕ್ ರೂಲ್ಸ್ ಪಾಲಿಸದೆ ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಬೇಕಾಬಿಟ್ಟಿಯಾಗಿ ವಾಹನ ಚಾಲಯಿಸಿ ರಾಂಗ್ ರೂಟ್‌ನಲ್ಲಿ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ನಂತರ ಬೈಕ್ ಸವಾರ ಗಾಯಗೊಂಡ ಬಾಲಕನಿಗೆ ಸಹಾಯ ಮಾಡದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಗಾಯಗೊಂಡ ಬಾಲಕನಿಗೆ ಸಹಾಯ ಮಾಡಲು ಧಾವಿಸಿದ್ದಾರೆ.
ಇಂಡಿಗೋ ವಿಮಾನ ರದ್ದು; ಪುತ್ರನಿಗಾಗಿ 800 ಕಿ.ಮೀ ದೂರ ಕಾರು ಚಲಾಯಿಸಿದ ತಂದೆ!
ಅಪಘಾತದಲ್ಲಿ ಹುಡುಗನಿಗೆ ಗಂಭೀರ ಗಾಯಗಳಾಗಿವೆ. ಮಗುವಿಗೆ ತಕ್ಷಣವೇ ಚಿಕಿತ್ಸೆ ನೀಡಿ ಆ ಬಳಿಕ ಘಟನೆಯ ಬಗ್ಗೆ ಅವನ ತಾಯಿಗೆ ತಿಳಿಸಲಾಗಿದೆ ಎಂದು ವರದಿಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ರಾಂಗ್ ರೂಟ್ ಸವಾರಿ ಎಷ್ಟು ಅಪಾಯಕಾರಿ. ಈ ಬಗ್ಗೆ ವಾಹನ ಸವಾರರ ನಿರ್ಲಕ್ಷ್ಯ ಪಾದಚಾರಿಗಳು ಮತ್ತು ಮಕ್ಕಳ ಜೀವಗಳಿಗೆ ಗಂಭೀರ ಅಪಾಯ ತಂದೊಡ್ಡುತ್ತಿದೆ ಎಂದು ಕಳವಳ ವ್ಯಕ್ತವಾಗಿದೆ.
ಮುಂಬೈ ಪೊಲೀಸರು ಘಟನೆಗೆ ಸಂಬಂಧಿಸಿದ ಬೈಕ್ ಸವಾರನನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಹಾಗಿದ್ದರೂ ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಕ್ರಮ ಕೈಗೊಂಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಯು ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಡೆಯಲು ಕಠಿಣ ಕಾನೂನು ಅಗತ್ಯವೆಂಬುದನ್ನು ಮನದಟ್ಟು ಮಾಡಿಸಿದೆ ಎಂದು ನೆಟ್ಟಿಗರೊಬ್ಬರು ತಿಳಿಸಿದ್ದಾರೆ. ಮಕ್ಕಳ ಮೇಲೂ ಆತನಿಗೆ ಕನಿಕರ ಭಾವನೆ ಇರಲಿಲ್ಲ, ಇಂತಹ ವ್ಯಕ್ತಿಗಳಿಗೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.