ಬೆಂಗಳೂರು, ಡಿ. 18: ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸ ಬೇಕು ಎಂಬುದು ಟ್ರಾಫಿಕ್ ನಿಯಮವಾಗಿದೆ. ಇದರಿಂದಲೇ ಬಹುತೇಕರು ರಸ್ತೆ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗುವುದು ಇದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಈ ಹೆಲ್ಮೆಟ್ ನಿಯಮ ಬದ್ಧವಾಗಿದ್ದು ಧರಿಸದಿದ್ದವರಿಗೆ ಟ್ರಾಫೀಕ್ ಪೊಲೀಸರು ದಂಡವಿಧಿಸುತ್ತಾರೆ. ಹೀಗಾಗಿ ರಕ್ಷಣಾತ್ಮಕ ದೃಷ್ಟಿಯಿಂದ ಮತ್ತು ದಂಡ ಪಾವತಿ ಮಾಡು ವುದರಿಂದ ತಪ್ಪಿಸಿಕೊಳ್ಳಲು ಉದ್ಯೋಗ, ಕೆಲಸ ಇತರೆ ಕಾರಣಕ್ಕಾಗಿ ನಿತ್ಯ ತೆರಳುವವರು ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸುತ್ತಾರೆ. ಅಂತೆಯೇ ಬೈಕ್ ಸವಾರರಿಬ್ಬರು ಹೆಲ್ಮೆಟ್ ಅನ್ನೇ ಬಳಸಿಕೊಂಡು ರಸ್ತೆ ಮಧ್ಯೆ ಪರಸ್ಪರ ಹೊಡೆದಾಡಿ ಕೊಳ್ಳುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಂಚಾರ ದಟ್ಟಣೆಯ ನಡುವೆಯೂ ಯಾವ ಪರಿಜ್ಞಾನ ಇಲ್ಲದೆ ಹೆಲ್ಮೆಟ್ ನಿಂದ ಒಬ್ಬರಿಗೊಬ್ಬರು ತಳಿಸುತ್ತಿರುವ ವಿಡಿಯೋ ಒಂದು ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral video) ಆಗಿದೆ.
ಸಂಚಾರ ದಟ್ಟಣೆ ಸಮಸ್ಯೆ ನಿತ್ಯ ಇದ್ದೇ ಇರಲಿದೆ.ಇದರಿಂದ ಬೆಳಗಿನ ಜನದಟ್ಟಣೆಯ ಸಂದರ್ಭದಲ್ಲಿ ಜನರಿಗೆ ಓಡಾಡುವುದು ಕೂಡ ಕಷ್ಟ ಆಗಲಿದೆ. ಅಂತಹ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಇಬ್ಬರು ಬೈಕ್ ಸವಾರರು ಏಕಾ ಏಕಿ ಹೊಡೆದಾಡಿಕೊಳ್ಳುವ ಘಟನೆ ನಡೆದಿದೆ. ಕ್ಲಿಪ್‌ನಲ್ಲಿ ಬೈಕ್ ಸವಾರರು ಟಿನ್ ಫ್ಯಾಕ್ಟರಿ ಬಳಿ ಟ್ರಾಫಿಕ್ ಮಧ್ಯದಲ್ಲಿ ನಿಂತು ಪರಸ್ಪರ ಹೊಡೆದಾಡಿಕೊಂಡು ಲಹೆಲ್ಮೆಟ್‌ನಿಂದ ಹಲ್ಲೆ ಮಾಡಿಕೊಳ್ಳುವುದನ್ನು ಕಾಣಬಹುದು. ಸದ್ಯ ಈ ವಿಡಿಯೋವನ್ನು ಕರ್ನಾಟಕ ಪೋರ್ಟ್‌ಫೋಲಿಯೋ ಎಂಬ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ವಿಡಿಯೋ ನೋಡಿ:
ವೈರಲ್ ಆದ ವಿಡಿಯೋದಲ್ಲಿ ಬೆಳಗಿನ ಟ್ರಾಫಿಕ್ ಜಾಮ್ ನಡುವೆ ಇಬ್ಬರು ಬೈಕರ್‌ಗಳು ಅಕ್ಕ ಪಕ್ಕದಲ್ಲಿ ಸವಾರಿ ಮಾಡುತ್ತಿದ್ದಾಗ ಪರಸ್ಪರ ಡಿಕ್ಕಿಯಾಗಿ ಹೊಡೆದುಕೊಂಡಿದ್ದಾರೆ. ಇದರಿಂದಾಗಿ ಒಬ್ಬ ಸವಾರನು ರಸ್ತೆಯಲ್ಲಿ ಬಿದ್ದಿದ್ದಾನೆ. ಇದನ್ನು ಇಬ್ಬರು ಸವಾರರು ಶಾಂತವಾಗಿ ಪರಿಹರಿಸುವ ಬದಲು, ಇಬ್ಬರೂ ಕೂಡ ತಮ್ಮ ತಾಳ್ಮೆಯನ್ನು ಕಳೆದುಕೊಂಡು ರಸ್ತೆಯ ಮಧ್ಯದಲ್ಲಿಯೇ ಜಗಳವಾಡಲು ಆರಂಭಿಸಿದ್ದಾರೆ. ಇದರಿಂದ ಅವರ ಜಗಳ ವಿಕೋಪಕ್ಕೆ ಏರಿದ್ದು ಬೇರೆ ಇತರ ಪ್ರಯಾಣಿಕರು ಮತ್ತು ಜನಸಾಮಾನ್ಯರಿಗೂ ತೊಂದರೆಯಾಗಿದ್ದನ್ನು ವಿಡಿಯೋದಲ್ಲಿ ಕಾಣಬಹುದು.
Viral Video: ಒಂದೇ ಬೈಕ್‍ನಲ್ಲಿ 6 ಮಂದಿಯ ಸವಾರಿ; ಕ್ಯಾಮರಾ ನೋಡಿ ಏನು ಮಾಡಿದ್ರು ಗೊತ್ತಾ?
ಈ ಎಲ್ಲ ದೃಶ್ಯಗಳನ್ನು ಆಫೀಸ್ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ವಿಡಿಯೋ ಮಾಡಿದ್ದಾರೆ. ಹೀಗಾಗಿ ಈ ವಿಡಿಯೋ ಹಂಚಿಕೊಂಡ ಸ್ವಲ್ಪ ಹೊತ್ತಿಗೆ ಪೊಲೀಸ್ ಇಲಾಖೆ ವರೆಗೂ ಕ್ಲಿಪ್ ವೈರಲ್ ಆಗಿದೆ. ಪೊಲೀಸರು ಸಂಬಂಧ ಪಟ್ಟ ಟ್ವಿಟ್ಟರ್ ಎಕ್ಸ್ ಖಾತೆಗೆ ಅವರು ಜಗಳಕ್ಕೆ ಕಾರಣವೇನು? ಎಂದು ಪ್ರಶ್ನಿಸಿದ್ದಾರೆ.
ಹೀಗಾಗಿ ಕರ್ನಾಟಕ ಪೋರ್ಟ್‌ಫೋಲಿಯೋ ಎಂಬ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ವನ್ನು ಹಂಚಿಕೊಂಡು ಬೆಂಗಳೂರಿನ ಜನದಟ್ಟಣೆಯ ರಸ್ತೆಗಳಲ್ಲಿ ಇಂತಹ ಸಮಸ್ಯೆ ಕಂಡು ಬಂದ ಸಮಯದಲ್ಲಿ ಸಂಯಮದಿಂದ ಇರಬೇಕಾದದ್ದು ನಾಗರಿಕರ ಜವಾಬ್ದಾರಿಯಾಗಿದೆ ಎಂದು ಮನವಿ ಮಾಡಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಕಂಡರೆ ಸವಾರರ ಜಗಳದಿಂದ ಇತರ ಪ್ರಯಾಣಿಕರು, ಪಾದಚಾರಿಗಳು ಮತ್ತು ವಾಹನ ಚಾಲಕರು ಕೂಡ ತೊಂದರೆ ಪಡುವಂತಾಯಿತು ಎಂಬುದು ತಿಳಿದುಬಂದಿದೆ. ಸಂಬಂಧ ಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.