ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನವ ಜೋಡಿಗಳಿಗೆ ಶುಭ ಹಾರೈಸುತ್ತಿದ್ದಾಗಲೇ ದಿಢೀರ್ ಆಗಿ ಕುಸಿದ ವೇದಿಕೆ; ವಿಡಿಯೋ ವೈರಲ್

ಮದುವೆ ಕಾರ್ಯಕ್ರಮ ಒಂದರಲ್ಲಿ ನವದಂಪತಿಗಳು ಮತ್ತು ಅತಿಥಿಗಳು ವೇದಿಕೆ ಮೇಲೆ ಫೋಟೊ ತೆಗೆಸಿಕೊಳ್ಳುತ್ತಿದ್ದಾಗಲೇ ವೇದಿಕೆ ಕುಸಿದು ಬಿದ್ದ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ. ಬಿಜೆಪಿ ನಾಯಕ ಅಭಿಷೇಕ್ ಸಿಂಗ್ (Abhishek Singh’s) ಅವರ ಸಹೋದರನ ವಿವಾಹ ಕಾರ್ಯಕ್ರಮವು ನವೆಂಬರ್ 26 ರಂದು ಆಯೋಜಿಸಲಾಗಿತ್ತು. ವಿವಾಹದ ಸ್ವಾಗತ್ ಸಮಾರಂಭವನ್ನು ರಾಮ್‌ಲೀಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದು ಅನೇಕ ಗಣ್ಯರು, ಬಿಜೆಪಿ ನಾಯಕರು, ಕುಟುಂಬದವರು ಆಪ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸದ್ಯ ವೇದಿಕೆ ಕುಸಿದು ಬೀಳುವ ದೃಶ್ಯಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ವೈರಲ್ ವಿಡಿಯೊ

ಉತ್ತರಪ್ರದೇಶ: ವಿವಾಹ ಸಮಾರಂಭದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿರುತ್ತದೆ. ವಧು ವರರ ಆಗಮನದಿಂದ ಹಿಡಿದು ಮದುವೆ ಶಾಸ್ತ್ರ ಮುಗಿಯುವ ತನಕ ಅನೇಕ ಕಾರ್ಯಕ್ರಮ ಇದ್ದೇ ಇರಲಿದೆ. ಅಂತೆಯೇ ವಧು ವರರನ್ನು ಶುಭ ಹಾರೈಸಿ ಅವರೊಂದಿಗೆ ವಿಡಿಯೋ , ಫೋಟೊ ತೆಗೆಸಿ ಕೊಳ್ಳುವುದು ಇದೆ. ಅಂತೆಯೇ ಮದುವೆ ಕಾರ್ಯಕ್ರಮ ಒಂದರಲ್ಲಿ ನವದಂಪತಿಗಳು ಮತ್ತು ಅತಿಥಿಗಳು ವೇದಿಕೆ ಮೇಲೆ ಫೋಟೊ ತೆಗೆಸಿಕೊಳ್ಳುತ್ತಿದ್ದಾಗಲೇ ವೇದಿಕೆ ಕುಸಿದು ಬಿದ್ದ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ (Uttar Pradesh’s Ballia) ನಡೆದಿದೆ. ಬಿಜೆಪಿ ನಾಯಕ ಅಭಿಷೇಕ್ ಸಿಂಗ್ (Abhishek Singh’s) ಅವರ ಸಹೋದರನ ವಿವಾಹ ಕಾರ್ಯಕ್ರಮವು ನವೆಂಬರ್ 26 ರಂದು ಆಯೋಜಿಸಲಾಗಿತ್ತು. ವಿವಾಹದ (Viral Video) ಸ್ವಾಗತ್ ಸಮಾರಂಭವನ್ನು ರಾಮ್‌ಲೀಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದು ಅನೇಕ ಗಣ್ಯರು, ಬಿಜೆಪಿ ನಾಯಕರು, ಕುಟುಂಬದವರು ಆಪ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸದ್ಯ ವೇದಿಕೆ ಕುಸಿದು ಬೀಳುವ ದೃಶ್ಯಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಅದ್ದೂರಿ ವಿವಾಹ ಸಮಾರಂಭಕ್ಕೆ ರಾಮ್‌ಲೀಲಾ ಮೈದಾನದಲ್ಲಿ ಎತ್ತರದ ವೇದಿಕೆ ನಿರ್ಮಿಸ ಲಾಗಿತ್ತು. ಅನೇಕ ಗಣ್ಯರು ವೇದಿಕೆಗೆ ಬಂದು ನವ ವಧು ವರರಿಗೆ ಶುಭ ಕೋರಿದ್ದಾರೆ. ಈ ವೇಳೆಗೆ ಇದ್ದಕ್ಕಿದ್ದಂತೆ ಆ ವೇದಿಕೆ ಅನಿರೀಕ್ಷಿತವಾಗಿ ಕುಸಿದು ಬಿದ್ದಿದೆ. ಇದರಿಂದಾಗಿ ವಧು, ವರ ಮತ್ತು ಹತ್ತಿರದಲ್ಲಿ ನಿಂತಿದ್ದ ಹಲವಾರು ಅತಿಥಿ ಗಣ್ಯರು ಕೆಳಗೆ ಉರುಳಿ ಬಿದ್ದಿದ್ದ ದೃಶ್ಯಗಳನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ಕೆಲ ಕ್ಷಣ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಆದರೆ ಘಟನೆಯಿಂದ ಯಾರಿಗೂ ಗಂಭೀರ ಗಾಯವಾಗಿಲ್ಲ ಎಂದು ವರದಿಯೊಂದರಿಂದ ತಿಳಿದುಬಂದಿದೆ.

ವಿಡಿಯೋ ಇಲ್ಲಿದೆ:



ವರದಿಯೊಂದರ ಪ್ರಕಾರ, ಬಿಜೆಪಿ ನಾಯಕ ಅಭಿಷೇಕ್ ಸಿಂಗ್ ಅವರ ಸಹೋದರನ ಸ್ವಾಗತ ಸಮಾರಂಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಮಿಶ್ರಾ(Sanjay Mishra), ಮಾಜಿ ಸಂಸದ ಭರತ್ ಸಿಂಗ್, ಬಿಜೆಪಿ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರ್ಜಿತ್ ಸಿಂಗ್ , ಬನ್ಸ್‌ದಿಹ್ ಶಾಸಕ ಕೇತಕೀ ಸಿಂಗ್ ಅವರ ಪ್ರತಿನಿಧಿ ವಿಶ್ರಾಮ್ ಸಿಂಗ್ ಸೇರಿದಂತೆ ಅನೇಕ ಸ್ಥಳೀಯ ಪಕ್ಷದ ನಾಯಕರು ವೇದಿಕೆಯ ಮೇಲೆ ಒಟ್ಟಿಗೆ ಹತ್ತಿದ್ದಾರೆ ಪರಿಣಾಮ ವೇದಿಕೆಗೆ ಭಾರ ಹೆಚ್ಚಾಗಿಯೆ ದುರ್ಘಟನೆ ಸಂಭವಿಸಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನು ಓದಿ:Viral News: ದಿನನಿತ್ಯ 3.5 ಕೆಜಿ ಚಿನ್ನ ಧರಿಸುವ ಗೋಲ್ಡ್ ಮ್ಯಾನ್ ಕನ್ಹಯ್ಯಾಲಾಲ್ ಖಾತಿಕ್ ಗೆ ಜೀವ ಬೆದರಿಕೆ!

ಮದುವೆಯ ವೈರಲ್ ವಿಡಿಯೋದಲ್ಲಿ ದಂಪತಿಗಳು ಸೋಫಾದ ಮೇಲೆ ಕುಳಿತಿರುವುದನ್ನು ಕಾಣಬಹುದು. ಹಲವಾರು ಗಣ್ಯರು ಅವರನ್ನು ಸುತ್ತುವರೆದಿದ್ದಾರೆ. ಜನರು ಫೋಟೋಗಾಗಿ ಸೋಫಾದ ಹಿಂದೆ ಮದುಮಕ್ಕಳ ಜೊತೆಗೆ ಸಾಲಾಗಿ ನಿಂತಿರುವುದನ್ನು ಕಾಣಬಹುದು. ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ತರತರನಾಗಿ ಪ್ರತಿಕ್ರಿಯೆಗಳು ಬರಲಾರಂಭಿಸಿದೆ.

ಬಳಕೆದಾರರೊಬ್ಬರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ವೇದಿಕೆಯನ್ನು ಸರ್ಕಾರಿ ಗುತ್ತಿಗೆದಾರರು ನಿರ್ಮಿಸಿರಬಹುದು" ಎಂದು ಬರೆದಿದ್ದಾರೆ.ಈವೆಂಟ್ ಆಯೋಜಕರು ಈಗ ತಮ್ಮ ಜೀವ ಉಳಿಸಿ ಕೊಳ್ಳಲು ಓಡಬೇಕು" ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಹಾಕಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಜನರು ವೇದಿಕೆಯ ಮೇಲೆ ಹತ್ತಿದರು ಹೀಗಾಗಿ ವೇದಿಕೆ ಕುಸಿದು ಬಿದ್ದಿತು. ಒಬ್ಬ ಕೆಲಸಗಾರನಿಗೆ ಮಾತ್ರ ಸಣ್ಣಪುಟ್ಟ ಗಾಯವಾಗಿದೆ. ದಂಪತಿಗಳು ಯಾವುದೇ ಹಾನಿಗೊಳಗಾಗದೆ ಪಾರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಮಿಶ್ರಾ ಅವರು ಹೇಳಿಕೆ ನೀಡಿದ್ದಾರೆ.